Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿಯಿಂದ ಸರ್ವಾಧಿಕಾರಿ ಧೋರಣೆ: ಸಿಎಂ

ನರೇಂದ್ರ ಮೋದಿಯಿಂದ ಸರ್ವಾಧಿಕಾರಿ ಧೋರಣೆ: ಸಿಎಂ
ಕೊಪ್ಪ , ಭಾನುವಾರ, 30 ಮಾರ್ಚ್ 2014 (10:56 IST)
PR
ಮೋದಿ ಓರ್ವ ಫ್ಯಾಸಿಸ್ಟ್. ಸ್ವಜನಾಂಗವೇ ಶ್ರೇಷ್ಠ ಎಂಬುವುದರಲ್ಲಿ ನಂಬಿಕೆ ಇರುವವರು. ಬೇರೆ ಧರ್ಮಿಯರನ್ನು ತೀವ್ರವಾಗಿ ವಿರೋಧ ಮಾಡುವುದರಲ್ಲಿ ಮೊದಲಿಗರು ಎಂದು ಟೀಕಿಸಿದ್ದಾರೆ. ಜತೆಗೆ, ಮೋದಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಆರ್ಎಸ್ಎಸ್, ಸಂಘ ಪರಿವಾರದ ರಾಜಕೀಯದ ತಂತ್ರಗಾರಿಕೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮೋದಿ ಅವರು ನರಭಕ್ಷಕ. ಆರೆಸ್ಸೆಸ್ನ ಹಾರ್ಡ್ಕೋರ್ ಸದಸ್ಯ. ಅವರು 'ಹರ ಹರ ಮೋದಿ' ಅಲ್ಲ, 'ನರ ಹರ ಮೋದಿ' ಎಂದೆಲ್ಲ ಮೂದಲಿಸಿರುವ ಸಿಎಂ ಈಗ ಮೋದಿ ಅವರನ್ನು ರಷ್ಯಾದ ಮುಸಲೋನಿ, ಜರ್ಮನಿಯ ಹಿಟ್ಲರ್ಗೆ ಹೋಲಿಸಿದ್ದಾರೆ. ಈ ಮೂಲಕ ಕೊಪ್ಪದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲೂ ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಮರೆಯಲಿಲ್ಲ.

ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಿಜಕ್ಕೂ ಏನಾಗಿದೆ? - ಇಂತಹುದೊಂದು ಪ್ರಶ್ನೆಯನ್ನು ರಾಜ್ಯದ ಜನತೆ ಕೇಳುತ್ತಿದ್ದಾರೆ. ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದ ಸಿಎಂ ಸಿದ್ದರಾಮಯ್ಯನವರು ಒಂದೇ ಸಮನೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ವಿರುದ್ಧ ಅತ್ಯಂತ ಕೀಳುಮಟ್ಟದ ಬೈಗುಳಗಳನ್ನು ಬಳಸುತ್ತಿದ್ದಾರೆ.

Share this Story:

Follow Webdunia kannada