Select Your Language

Notifications

webdunia
webdunia
webdunia
webdunia

ನಮೋ ಟೀ ಸ್ಟಾಲ್: ಮೈಸೂರಿನಲ್ಲೊಂದು ಸಂಚಾರಿ ಚಹಾ ಅಂಗಡಿ.

ನಮೋ ಟೀ ಸ್ಟಾಲ್: ಮೈಸೂರಿನಲ್ಲೊಂದು ಸಂಚಾರಿ ಚಹಾ ಅಂಗಡಿ.
ಮೈಸೂರು , ಶನಿವಾರ, 8 ಫೆಬ್ರವರಿ 2014 (16:03 IST)
PTI
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಮೋ ಟೀ ಸ್ಟಾಲ್ ಎಂಬ ಸಂಚಾರಿ ಚಹಾ ಅಂಗಡಿಯನ್ನು ಪ್ರಾರಂಭಿಸುವುದರೊಂದಿಗೆ ಬಿ ಜೆ ಪಿ ಯುವಮೋರ್ಚಾ, 2014ರ ಲೋಕಸಭಾ ಚುನಾವಣಾ ಪ್ರಚಾರಕ್ಕೆ ನಾಂದಿ ಹಾಡಿದೆ.

ಮಾಜಿ ಸಚಿವ ರಾಮದಾಸ್ 1 ರೂಪಾಯಿಗೆ 1 ಕಪ್ ಚಹಾ ಮಾರುವುದರೊಂದಿಗೆ ಟೀ ಸ್ಟಾಲ್ ನ್ನು ಉದ್ಘಾಟಿಸಿದ್ದಾರೆ.

1 ರೂಪಾಯಿ ಚಹಾದ ಜತೆ 2 ರೂಪಾಯಿಗೆ ಬನ್ ನ್ನು ಕೂಡ ವಿತರಿಸಲಾಗುತ್ತಿದೆ. ಟೀ ಕೊಳ್ಳಲು ಜನ ಮುಗಿಬಿದ್ದಿದ್ದು, ಸ್ಟಾಲ್ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಕೇಂದ್ರಸಚಿವ ಮಣಿಶಂಕರ್ ಅಯ್ಯರ್,"ರೇಲ್ವೇ ನಿಲ್ದಾಣ ದಲ್ಲಿ ಟೀ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ" ಎಂದು ಮೋದಿ ಕುರಿತು ಲೇವಡಿ ಮಾಡಿದ್ದರು. ಈ ಟೀಕೆಯನ್ನೆ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ' ನಾನು ಟೀ ಮಾರಲು ಸಿದ್ಧ, ಆದರೆ ದೇಶವನ್ನು ಮಾರಲು ಸಿದ್ಧವಿಲ್ಲ, ಐಕ್ಯತೆ ಚಹಾ' ಎಂಬ ಘೋಷವಾಕ್ಯವನ್ನು ಟೀ ಅಂಗಡಿಯ ಮೇಲೆ ಬರೆಯಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರಾಮದಾಸ್ ಕೇವಲ "ಆಗರ್ಭ ಶ್ರೀಮಂತ ಮಾತ್ರ ಈ ದೇಶದ ಪ್ರಧಾನಿಯಾಗಬಲ್ಲ ಎಂಬುದು ತಪ್ಪು, ಟೀ ಮಾರುವ ವ್ಯಕ್ತಿ ಕೂಡ ನಮ್ಮ ದೇಶದ ಪ್ರಧಾನಿಯಾಗಬಹುದು. ಪ್ರತಿ ವೃತ್ತಿಗೂ ತನ್ನದೇ ಆದ ಗೌರವವಿದೆ" ಎಂದರು.

ಚುನಾವಣಾ ನೀತಿಸಂಹಿತೆ ಜಾರಿಯಾಗುವವರೆಗೂ ಈ ಚಹಾ ಅಂಗಡಿ ಮುಂದುವರೆಯಲಿದೆ.

Share this Story:

Follow Webdunia kannada