Select Your Language

Notifications

webdunia
webdunia
webdunia
webdunia

ಡಿಕೆಶಿ ಇರಬೇಕಾದುದ್ದು ವಿಧಾನಸೌಧದಲ್ಲಲ್ಲ ಜೈಲಿನಲ್ಲಿ: ಎಸ್‌.ಆರ್.ಹೀರೇಮಠ್

ಡಿಕೆಶಿ ಇರಬೇಕಾದುದ್ದು ವಿಧಾನಸೌಧದಲ್ಲಲ್ಲ ಜೈಲಿನಲ್ಲಿ: ಎಸ್‌.ಆರ್.ಹೀರೇಮಠ್
ಬೆಂಗಳೂರು , ಮಂಗಳವಾರ, 11 ಫೆಬ್ರವರಿ 2014 (13:55 IST)
PR
ಸಹಕಾರ ಸಂಘಗಳ ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣದಲ್ಲಿ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದು, ಅವರು ಇರಬೇಕಾಗಿರುವುದು ವಿಧಾನಸೌಧದಲ್ಲಿ ಅಲ್ಲ ಜೈಲಿನಲ್ಲಿ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್.ಹೀರೆಮೇಠ್ ಆರೋಪಿಸಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಭಾಗಿಯಾದ ಸಹಕಾರ ಸಂಘಗಳ ಹಗರಣಗಳಿಗೆ ಅಂದಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕುಮ್ಮಕ್ಕು ನೀಡಿದ್ದರು ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಸಂವಿದಾನದ ಮೇಲೆ ಪ್ರಮಾಣ ಮಾಡಿ ರಾಜ್ಯದ ಬೊಕ್ಕಸಕ್ಕೆ ಜನತೆಯ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ. ಇಂತಹ ದ್ರೋಹಿಗಳಿಗೆ ಪರಪ್ಪನ ಅಗ್ರಹಾರವೇ ಸೂಕ್ತ ಸ್ಥಳವಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೈತಿಕತೆಯಿದ್ದರೆ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ಕೈ ಬಿಟ್ಟು ತನಿಖೆ ನಡೆಸಲಿ ಎಂದು ಸವಾಲ್ ಹಾಕಿದ್ದಾರೆ.

ಸಹಕಾರ ಸಂಘಗಳ ಹಗರಣ ಜನಾರ್ಧನ ರೆಡ್ಡಿ ಹಗರಣಗಿಂತ ದೊಡ್ಡದು. ಲಕ್ಷ ಕೋಟಿಗಟ್ಟಲೆ ಮೊತ್ತದ ಹಗರಣವಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್.ಹಿರೇಮಠ್ ಎಂದು ಆರೋಪಿಸಿದ್ದಾರೆ.

Share this Story:

Follow Webdunia kannada