Select Your Language

Notifications

webdunia
webdunia
webdunia
webdunia

ಆದಾಯತೆರಿಗೆ ದಾಳಿ :ಹಣದ ರಾಶಿ

ಆದಾಯತೆರಿಗೆ ದಾಳಿ :ಹಣದ ರಾಶಿ

ಇಳಯರಾಜ

ಬೆಂಗಳೂರು , ಬುಧವಾರ, 27 ಜೂನ್ 2007 (11:02 IST)
ಇದು ಯಾವುದೇ ಸಿನೆಮಾದಲ್ಲಿ ಅಲ್ಲ. ಕಿರುತೆರೆಯ ಚಿತ್ರೀಕರಣವೂ ಅಲ್ಲ. ಇದು ನೈಜ ಘಟನೆ.

ಬೆಂಗಳೂರು ನಗರದ ರಿಯಲ್ ಎಸ್ಟೇಟ್ ಮಾಫಿಯಾಗಳ ಮನೆ, ಕಛೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಐಟಿ(ಆದಾಯತೆರಿಗೆ) ಅಧಿಕಾರಿಗಳಿಗೆ ಮೂಟೆಗಟ್ಟಲೆ ಹಣಸಿಕ್ಕಿತು. ಅಷ್ಟೇ ಪ್ರಮಾಣದ ದಾಖಲೆ ಕಡತಗಳೂ ಕೂಡ.

ಇದು ಐಟಿ ಅಧಿಕಾರಿಗಳನ್ನೇ ದಂಗುಬಡಿಸಿದೆ. ನಿಜಕ್ಕೂ ಅವರ ನಿರೀಕ್ಷೆ ಮೀರಿದ ಅಕ್ರಮ ಹಣ ದೊರಕಿದೆ. ಇವೆಲ್ಲವೂ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಂತಹ ಮಹಾನ್ ರಾಜಕೀಯ ನಾಯಕರ ಬೆಂಬಲಿಗರಿಗೆ ಸೇರಿದ್ದು ಎಂಬುದು ಇನ್ನೊಂದು ಅಚ್ಚರಿಗೆ ಕಾರಣವಾಯಿತು.

ಗುಲ್ಲು : ದಾಳಿಗೆ ಸಿಲುಕಿದ ಕಬಡ್ಡಿಬಾಬು, ಕುಪ್ಪೇದ್ರ ರೆಡ್ಡಿ, ಗೊಟ್ಟಿಗೆರೆ ಮಂಜುನಾಥ್, ಕೋಟಿಗಟ್ಟಲೆ ಹಣ ಸಿಕ್ಕಿದೆ ಎಂದು ದಿನಪೂರ್ತಿ ಗುಲ್ಲುಹಬ್ಬಿತ್ತು.
ಕೆಲವರು 15 ಕೋಟಿ ಹಣವಿತ್ತಂತೆ ಎಂದರೆ, ಮತ್ತೆ ಕೆಲವರು ಮುಖ್ಯಮಂತ್ರಿಗೆ ಸೇರಿದ 50 ಕೋಟಿಗೂ ಹೆಚ್ಚು ಹಣ ಸಿಕ್ಕಿದೆಯಂತೆ ಎಂದು ಸುದ್ದಿ ಹರಡಿಸಿದ್ದರು.
ನಿರಾಕರಣೆ: ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿ ಹಾಕಿದ್ದಾರೆ. ದಾಳಿಗೆ ಒಳಗಾದವರಲ್ಲಿ ಕೆಲವರು ಜೆಡಿಎಸ್ ಕಾರ್ಯಕರ್ತರು ಹೌದು. ಆದರೆ ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada