Select Your Language

Notifications

webdunia
webdunia
webdunia
webdunia

ಅಕ್ರಮ ಮರಳು ಸಾಗಿಸುತ್ತಿದ್ದ 209 ಲಾರಿಗಳು ಜಪ್ತಿ.

ಅಕ್ರಮ ಮರಳು ಸಾಗಿಸುತ್ತಿದ್ದ 209 ಲಾರಿಗಳು ಜಪ್ತಿ.
ಬೆಂಗಳೂರು , ಮಂಗಳವಾರ, 19 ನವೆಂಬರ್ 2013 (11:54 IST)
PR
PR
ಮಣ್ಣನ್ನು ಫಿಲ್ಟರ್‌ ಮಾಡಿ, ಅದನ್ನು ಮರಳು ಎಂದು ಮಾರಾಟ ಮಾಡುತ್ತಿದ್ದ ಅಕ್ರಮ ಮರಳು ಫಿಲ್ಟರ್‌ ದಂದೆ ನಡೆಸುತ್ತಿದ್ದ ಜಾಲದ ಮೇಲೆ ಬೆಂಗಳೂರು ಗ್ರಾಮಾಂತರ ಪ್ರದೇಶದ ಡಿ.ಸಿ ಶಂಕರ್ ದಾಳಿ ನಡೆಸಿದ್ದಾರೆ. ಇಂದು ಮುಂಜಾನೆ ಸುಮಾರು 4 ಗಂಟೆ ಸಮಯದಲ್ಲಿ ಈ ದಾಳಿ ನಡೆಸಲಾಗಿದ್ದು, ಸ್ಥಳದಲ್ಲಿದ್ದ 209 ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿಗಳನ್ನು ಡಿಸಿ ವಶಕ್ಕೆ ಪಡೆದಿದ್ದಾರೆ.

ಈ ವೇಳೆ 209 ಲಾರಿಗಳನ್ನು ಜಪ್ತಿ ಮಾಡಲಾಗಿದೆ. ಪ್ರತಿ ಲಾರಿಗ್ರ್ ತಲಾ 20,000 ದಂಡ ವಿಧಿಸಲಾಗುವುದು. ನಿರಂತರವಾಗಿ ಅಕ್ರಮ ಮರಳು ಅಡ್ಡೆಗಳ ಮೆಲೆ ದಾಳಿ ನಡೆಸುವುದರಿಂದಾದರೂ ಕ್ರಮೇಣ ಇಅಂತಹ ಪ್ರಕರಣ ತಪ್ಪಬಹುದು ಎಂದು ತಿಳಿಸಿದರು

ಗಣಿ ಮತ್ತು ಭೂ ವಿಜ್ನಾನ ಇಲಾಖೆಯ ಅಧಿಕಾರಿಗಳೊಂದಿಗೆ ಅಕ್ರಮ ಮರಳು ಅಡ್ದೆಗಳ ಮೇಲೆ ದಾಳಿ ನಡೆಸಿದ ಡಿಸಿ ಶಂಕರ್‌ ಅವರು ಹೊಸಕೋಟೆ ತಾಲೂಕಿನಲ್ಲಿ 81 ಲಾರಿಗಳು, ನೆಲಮಂಗಲದಲ್ಲಿ 98, ದೊಡ್ಡಬಳ್ಳಾಪುರದಲ್ಲಿ 18 ಹಾಗೂ ದೇವನಹಳ್ಳಿಯಲ್ಲಿ 12 ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಖಚಿತ ಮಾಹಿತಿಯ ಆಧಾರದ ಮೇಲೆ ಅಕ್ರಮ ಮರಳು ಫಿಲ್ಟರ್ ಅಡ್ದೆಗಳ ಮೇಲೆ ದಾಳಿ ನಡೆಸಿದ ಡಿಸಿ ಮತ್ತು ಅಧಿಕಾರಿಗಳ ತಂಡ 209 ಮರಳು ಲಾರಿಗಳನ್ನು ಜಪ್ತಿ ಮಾಡುವುದರ ಮೂಲಕ, ಅಕ್ರಮ ಮರುಳು ದಂದೆ ಮಾಡುತ್ತಿದ್ದವರ ಮೇಲೆ ಸಮರ ಸಾರಿದ್ದಾರೆ.

Share this Story:

Follow Webdunia kannada