ಬಾಲಿವುಡ್ ಚಿತ್ರ ಜಗತ್ತಿನ ರಾಣಿ ಜೇನು-ರಾಣಿ ಮುಖರ್ಜಿ

Webdunia
ಶುಕ್ರವಾರ, 21 ನವೆಂಬರ್ 2014 (17:27 IST)
ಬಾಲಿವುಡ್ ಜಗತ್ತಿನ ಶ್ರೇಷ್ಟ ನಿರ್ದೇಶಕ ರಾಮ್ ಮುಖರ್ಜಿಯವರ ಮುದ್ದಿನ ಮಗಳಾದ ರಾಣಿ ಮುಖರ್ಜಿ ಜನಿಸಿದ್ದು 1978 ಮಾರ್ಚ್ 21ರಂದು ಮುಂಬೈನಲ್ಲಿ.
 
ದಶಕದ ಹಿಂದೆ ಬಾಲಿವುಡ್ ಚಿತ್ರ ಜಗತ್ತಿನ ಶ್ರೇಷ್ಠ ನಟಿ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದ ರಾಣಿ ಮುಖರ್ಜಿ, ಇನ್ನೊರ್ವ ಖ್ಯಾತ ನಟಿ ಕಾಜೋಲ್ ಅವರ ಹತ್ತಿರದ ಸಂಬಂಧಿ. ಹಿಂದಿ ಚಿತ್ರ ಜಗತ್ತಿನ ಇತ್ತೀಚಿನ ಎಲ್ಲ ಪ್ರಮುಖ ನಟರೊಂದಿಗೆ ಅಭಿನಯಿಸಿದ ಕೀರ್ತಿಗೆ ಪಾತ್ರರಾಗಿರುವ ರಾಣಿ, ಬಾಲಿವುಡ್ ಚಿತ್ರ ಜಗತ್ತಿನ ರಾಣಿ ಜೇನು ಎಂದೆ ಪ್ರಸಿದ್ದಿ ಗಳಿಸಿದ್ದಾರೆ.
 
'ರಾಜಾ ಕಿ ಆಯೆಗಿ ಬರಾತ್' ಚಿತ್ರದ ಮೂಲಕ ಚಿತ್ರ ಜಗತ್ತಿಗೆ ಕಾಲಿಟ್ಟ ರಾಣಿ ನಂತರ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ಅಮೀರಖಾನ್ ಅವರ ಮಹತ್ವಾಕಾಂಕ್ಷೆಯ 'ಮಂಗಲಪಾಂಡೆ'ನಲ್ಲಿ ಮನೋಜ್ಞ ಅಭಿನಯ ನೀಡಿದ ರಾಣಿ, 'ಬಂಟಿ ಔರ್ ಬಬ್ಲಿ' ಮತ್ತು 'ಗುಲಾಮ್' 'ಚಲ್ತೆ ಚಲ್ತೆ' 'ಪಹೇಲಿ' 'ಕುಚ್ ಕುಚ್ ಹೋತಾ ಹೈ' ನಂತಹ ಕಮರ್ಷಿಯಲ್ ಚಿತ್ರಗಳನ್ನು ನೀಡಿ ನಿರ್ಮಾಪಕರ ಬೊಕ್ಕಸವನ್ನು ಬಲಿಷ್ಠಗೊಳಿಸಿದ್ದಾರೆ.
 
'ಕುಚ್ ಕುಚ್ ಹೋತಾ ಹೈ'  ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ರಾಣಿ ಅತ್ಯುತ್ತಮ ಪೋಷಕ ನಟಿ, 2004ರಲ್ಲಿ 'ಯುವ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಮತ್ತು 2005ರಲ್ಲಿ 'ಬ್ಲಾಕ್' ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಅತ್ಯುತ್ತಮ ಶ್ರೇಷ್ಠ ನಟಿ ಎಂದು ಫಿಲ್ಮಫೇರ್ ಪ್ರಶಸ್ತಿಯನ್ನು ಗಳಿಸಿದ್ದಾರೆ.
 
ಚಿತ್ರ ಜಗತ್ತಲ್ಲದೆ ರೂಪದರ್ಶಿಯಾಗಿ ಮಿಂಚುತ್ತಿರುವ ರಾಣಿ 'ನೆಸ್ಲೆ ಮಂಚ್' ಮತ್ತು 'ಫಂಟಾ'ದಂತಹ ಪ್ರಸಿದ್ದ ಉತ್ಪನ್ನಗಳ ಬ್ಯ್ರಾಂಡ್ ಅಂಬಾಸಡರ್ ಆಗಿ ಆಯ್ಕೆಯಾಗಿದ್ದಾರೆ.
 
ಹಲವಾರು ಏಳುಬೀಳುಗಳ ನಂತರ ರಾಣಿ ಮುಖರ್ಜಿ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಜಗತ್ತಿನ ರಾಣಿಯ ಪಟ್ಟದ ಮೇಲೆ ಪ್ರಬಲ ಕಣ್ಣಿರಿಸಿದ್ದು, ಮತ್ತೇ ನಂಬರ್ ಒನ್ ನಟಿಯಾಗುವತ್ತ ದಾಪುಗಾಲಿರಿಸಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಾವಿನ ಸುದ್ದಿ ವದಂತಿ ಬೆನ್ನಲ್ಲೇ ಕಂಟಕ ಪರಿಹಾರಕ್ಕಾಗಿ ದೇವರ ಮೊರೆ ಹೋದ ನಟ ದೊಡ್ಡಣ್ಣ

Video, ವೇದಿಕೆಯಲ್ಲಿ ಬೆವರುತ್ತಿದ್ದ ವಿಜಯ್‌ ನೋಡಿ ರಶ್ಮಿಕಾ ಮಂದಣ್ಣ ಎಷ್ಟು ಕೇರ್ ಮಾಡಿದ್ರು ನೋಡಿ

ಕಾಲಾ ಹಿರಣ್ ಚಿತ್ರತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ಯಾಕೆ ಸಲ್ಮಾನ್ ಖಾನ್

ಸಾವಿನ ಸುದ್ದಿ ವದಂತಿ ಬೆನ್ನಲ್ಲೇ ದೇವರ ಮೊರೆ ಹೋದ ನಟ ದೊಡ್ಡಣ್ಣ

ಕರುಪ್ಪು ಸಿನಿಮಾ ಸಕ್ಸಸ್ ಬೆನ್ನಲ್ಲೇ ನಿರ್ದೇಶಕ ಆರ್‌ಜೆ ಬಾಲಾಜಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ನಟ ಸೂರ್ಯ

Show comments