Webdunia - Bharat's app for daily news and videos

Install App

ಅಪ್ರತಿಮ ಸುಂದರಿ ಐಶ್ವರ್ಯ್ ಬಚ್ಚನ್

Webdunia
ಶುಕ್ರವಾರ, 21 ನವೆಂಬರ್ 2014 (17:31 IST)
ಸೌಂದರ್ಯದ ಇನ್ನೊಂದು ಪ್ರತಿರೂಪದಂತಿರುವ ಐಶ್ವರ್ಯ್ ಬಚ್ಚನ್, ತನ್ನ 17ನೆಯ ವಯಸ್ಸಿನಲ್ಲಿಯೆ ರೂಪದರ್ಶಿ ಜಗತ್ತಿಗೆ ಕಾಲಿರಿಸಿ ಯಶಸ್ಸನ್ನು ಗಳಿಸಿಕೊಂಡು ಜಾಗತಿಕ ಮನ್ನಣೆ ಗಳಿಸಿಕೊಂಡ ಬಾಲಿವುಡ್ ಜಗತ್ತು ಕಂಡ ಶ್ರೇಷ್ಠ ನಟಿ.
 
ಶಿಲ್ಪಾ ಶೆಟ್ಟಿಯಂತೆಯೆ ಐಶ್ವರ್ಯ್ ಸಹ ಮಂಗಳೂರಿನ ಮಣ್ಣಿನಿಂದಲೇ ಮೇಲೆದ್ದು ಬಂದವಳು, 1973ರ ನವೆಂಬರ್ ಒಂದರಂದು ಮಂಗಳೂರಿನಲ್ಲಿ ಕೃಷ್ಣರಾಜ್-ವೃಂದಾ ರೈ ದಂಪತಿಗಳ ಮಗಳಾಗಿ ಜನಿಸಿದ ಐಶ್ವರ್ಯ್ ಬಾಲ್ಯದಿಂದಲೂ ಬೆಳೆದದ್ದು ಮಾತ್ರ ಭಾರತದ ಖ್ಯಾತ ವಾಣಿಜ್ಯ ನಗರಿ ಮುಂಬೈನಲ್ಲಿ.
 
ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ಆರ್ಯ್ ವಿದ್ಯಾ ಮಂದಿರದಲ್ಲಿ ತನ್ನ ಶಾಲಾ ದಿನಗಳನ್ನು ಕಳೆದ ಐಶ್ವರ್ಯ್, ಪದವಿ ಶಿಕ್ಷಣವನ್ನು ಡಿ.ಜಿ ರೂಪಾರೆಲ್ ಕಾಲೇಜ್‌ನಲ್ಲಿ ಪೂರೈಸಿಕೊಂಡರು.
 
1994ರಲ್ಲಿ ವಿಶ್ವಸುಂದರಿ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡು ಜಗತ್ತಿನ ಗಮನ ಸೆಳೆದ ಐಶ್ವರ್ಯ್, ಮೂರು ವರ್ಷಗಳ ನಂತರ ಚಿತ್ರ ಜಗತ್ತಿಗೂ ಕಾಲಿರಿಸಿದರು.
ಐಶ್ವರ್ಯ್ ಅಭಿನಯಿಸಿದ ಮೊದಲ ಚಿತ್ರ ತಮಿಳು ಎಂದರೆ ಹುಬ್ಬೇರಿಸಬೇಡಿ, ಇದು ನಿಜ. ಭಾರತೀಯ ಚಿತ್ರ ರಂಗಕ್ಕೆ ಅತ್ಯುತ್ತಮ ಚಿತ್ರಗಳ ಕಾಣಿಕೆ ನೀಡುತ್ತಿರುವ ಪ್ರಖ್ಯಾತ ನಿರ್ದೇಶಕ ಮಣಿರತ್ನಂ, ಐಶ್ವರ್ಯ್ ಅವರನ್ನು ಚಿತ್ರ ಜಗತ್ತಿಗೆ ಪರಿಚಯಿಸಿದ ಮೊದಲ ನಿರ್ದೇಶಕ.
 
1997ರಲ್ಲಿ 'ಇರುವರ್' ಎನ್ನುವ ತಮಿಳು ಚಿತ್ರದ ಮೂಲಕ ತನ್ನ ಅದೃಷ್ಟವನ್ನು ಪರೀಕ್ಷಿಸಿಕೊಂಡು, ಆರಂಭಿಕ ಏಳುಬೀಳಿನ ನಂತರ ಇದೀಗ ಬಾಲಿವುಡ್ ಚಿತ್ರ ಜಗತ್ತಿನಲ್ಲಿ ಇದೀಗ ಭದ್ರಬುನಾದಿಯ ಹಾಕಿಕೊಂಡಿರುವ ಐಶ್ವರ್ಯ್ ಬಹು ಬೇಡಿಕೆಯ ತಾರೆ.
 
ರಾಹುಲ್ ರವೈಲ್ ನಿರ್ದೇಶನದ ಐಶ್ವರ್ಯ್‌ಳ ಮೊದಲ ಹಿಂದಿ ಚಲನಚಿತ್ರ 'ಔರ್ ಪ್ಯಾರ್ ಹೋಗಯಾ' ಬಾಕ್ಸ್ ಆಫಿಸ್‌ನಲ್ಲಿ ದಯನೀಯ ಸೋಲನ್ನು ಕಂಡಾಗ ಐಶ್ವರ್ಯ್‌ಳಿಗೆ ಚಿತ್ರ ಜಗತ್ತಿನಲ್ಲಿ ಭವಿಷ್ಯವಿಲ್ಲ, ಆಕೆ ಏನಿದ್ದರೂ ಮಾಡೆಲ್ ಜಗತ್ತಿಗೆ ಹೇಳಿ ಮಾಡಿಸಿದ ಸೌಂದರ್ಯವತಿ ಎಂದು ಚಿತ್ರ ವಿಮರ್ಷಶಕರು ಐಶ್ವರ್ಯ್‌ಳನ್ನು ಕಟುವಾಗಿ ಟೀಕಿಸಿದ್ದರು.
 
ಟೀಕಾಕಾರರ ಟೀಕೆಗಳನ್ನು ತನ್ನ ನೊಂದ ಮಡಿಲಿನಲ್ಲಿ ಹಾಕಿಕೊಂಡೆ ಸಮಾಧಾನ ಚಿತ್ತದಿಂದ ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ 'ಹಮ್ ದಿಲ್ ದೇ ಚುಕೆ ಸನಮ್'ನಲ್ಲಿ ಮನೋಜ್ಞವಾಗಿ ಅಭಿನಯಿಸಿ ಮತ್ತೆ ಯಶಸ್ಸಿನ ಕೀರ್ತಿಯ ಉತ್ತುಂಗವನ್ನೇರಿದರು.
 
ಐಶ್ ಅಭಿನಯಿಸಿದ 'ತಾಲ್', 'ಜೋಷ್' 'ಗುರು' 'ದೇವದಾಸ್' 'ಧೂಮ್-2' ಚಿತ್ರಗಳ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆಯನ್ನೆ ಸೃಷ್ಟಿಸಿವೆ.
 
ಅಲ್ಲಿಂದ ಇಲ್ಲಿಯವರೆಗೆ ಒಂದಿನಿತು ಹಿಂದುರಿಗಿ ನೋಡದ ಐಶ್ವರ್ಯ್ ಬಾಲಿವುಡ್ ಜಗತ್ತಿನ ಕೀರ್ತಿಯನ್ನು ಪ್ರಪಂಚದಾದ್ಯಂತ ಪಸರಿಸಿದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
 
 
ಕ್ರಿಕೆಟ್‌ನಲ್ಲಿ ಸಚಿನ ದಾಖಲಿಸಿದ ವಿಶ್ವದಾಖಲೆಗಳಂತೆ, ಬಾಲಿವುಡ್ ಜಗತ್ತಿನ ಅಪ್ರತಿಮ ಸುಂದರಿ ಐಶ್ವರ್ಯ್ ಸಹ ಭಾರತದ ಪಾಲಿಗೆ ವಿಶ್ವಮಟ್ಟದಲ್ಲಿ ಹಲವು ಪ್ರಥಮ ದಾಖಲೆಗಳನ್ನು ಸ್ಥಾಪಿಸಿದ್ದಾರೆ, ಅವುಗಳೆಂದರೆ 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕ್ಯಾನೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ ಭಾರತದ ಪ್ರಥಮ ನಟಿ ಎಂಬ ಹೆಗ್ಗಳಿಕೆ, ಅಮೆರಿಕದ ಪ್ರತಿಷ್ಠಿತ ಪತ್ರಿಕೆಯಾದ 'ಟೈಮ್ಸ್'ನ ಮುಖಪುಟದಲ್ಲಿ ಮಿಂಚಿದ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ ಐಶ್ವರ್ಯ್ ಪಾತ್ರಳಾಗಿದ್ದಾಳೆ.
 
ತನ್ನ ಅಪ್ರತಿಮ ಸೌಂದರ್ಯ, ಮನೋಜ್ಞ ಅಭಿನಯ, ಮೊದಲ ನೋಟದಲ್ಲಿಯೆ ಆಕರ್ಷಿಸುವ ಕಣ್ಣೊಟದಿಂದಾಗಿ ಬಾಲಿವುಡ್ ಜಗತ್ತಿನಿಂದ ಹಾಲಿವುಡ್ ಜಗತ್ತಿಗೆ ತನ್ನ ಜೈತ್ರಯಾತ್ರೆಯನ್ನು ಮುಂದುವರೆಸಿರುವ ಐಶ್ವರ್ಯ್ ಅಲ್ಲಿಯೂ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹಗಳಿಲ್ಲವೆಂಬುದು ಚಲನಚಿತ್ರ ಜಗತ್ತಿನ ಪಂಡಿತರ ಅಭಿಮತವಾಗಿದೆ.
 
ಇಂತಪ್ಪ ಐಶ್ವರ್ಯ್ ರೈ ಕಳೆದ 2007ರ ಏಪ್ರಿಲ್ 20ರಂದು ಬಾಲಿವುಡ್ ಬಾಹಶಹಾ ಎಂದೇ ಖ್ಯಾತಿ ಗಳಿಸಿರುವ ಹಿಂದಿ ಚಲನಚಿತ್ರ ಜಗತ್ತಿನ ಅನಭಿಷಕ್ತ ದೊರೆ ಅಮಿತಾಬ್ ಬಚ್ಚನ್ ಅವರ ಪುತ್ರ, ಖ್ಯಾತ ಬಾಲಿವುಡ್ ತಾರೆ ಅಭಿಷೇಕ್ ಬಚ್ಚನ್ ಅವರನ್ನು ವರಿಸುವ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿರಿಸಿ ಐಶ್ವರ್ಯ್ ಬಚ್ಚನ್ ಆಗಿದ್ದಾರೆ.
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments