Webdunia - Bharat's app for daily news and videos

Install App

ರಾಜ ರಾಜೇಂದ್ರ' ಸಿನೆಮಾ ವಿಮರ್ಶೆ: ಅಭಿಮಾನಿಗಳಿಗೆ ಸಂಪೂರ್ಣ ಎಂಟರ್‌ಟೈನ್‌ಮೆಂಟ್

Webdunia
ಶುಕ್ರವಾರ, 6 ಫೆಬ್ರವರಿ 2015 (19:20 IST)
ಹಾಸ್ಯ ನಟನಾಗಿ ಸಿನೆಮಾ ರಂಗ ಪ್ರವೇಶಿಸಿ ಪೂರ್ಣ ಪ್ರಮಾಣದ ನಾಯಕ ನಟನಾಗುವುದು ವಿರಳ. ಅಂತಹ ಸಾಧನೆಗೈದಿರುವ ಶರಣ್ ಅಭಿನಯದ 'ರಾಜ ರಾಜೇಂದ್ರ' ಸಿನೆಮ ಇಂದು ತೆರೆ ಕಂಡಿದೆ. ಶರಣ್ ಅವರ ಹುಟ್ಟು ಹಬ್ಬದ ದಿನವೇ ಈ ಚಿತ್ರ ತೆರೆ ಕಂಡಿರುವುದು ಮತ್ತೊಂದು ವಿಶೇಷ. ಹಾಸ್ಯ, ಆಕ್ಷನ್, ದೆವ್ವ, ಕಲ್ಪಿತ ರಾಜಮನೆತನ, ಕೌಟುಂಬಿಕ ಪಿತೂರಿ-ನಾಟಕ ಇತ್ಯಾದಿಗಳನ್ನೆಲ್ಲಾ ಒಳಗೊಂಡ ಈ ಸಿನೆಮಾ ಹಾಸ್ಯ ನಟ ನಾಯಕ ನಟನಾಗುವ ಔಚಿತ್ಯದ ಪ್ರಶ್ನೆಯನ್ನಂತೂ ಎತ್ತುತ್ತದೆ.
 
            


ನಟ ರಾಮಕೃಷ್ಣ ರಾಜಮನೆತನದ ಮುಖ್ಯಸ್ಥ. ಹಾಸಿಗೆ ಹಿಡಿದಿದ್ದಾನೆ. ಆದರೆ ಸಾವು ಒದಗಿ ಬರುತ್ತಿಲ್ಲ. ಅವನ ಹೆಂಡತಿ ಗಂಡು ಮಗು ಹೆತ್ತ ದಿನವೇ ಮೃತಪಟ್ಟಿರುತ್ತಾಳೆ. ಆಗ ಹುಟ್ಟಿದ ಮಗ ನಂತರದ ವರ್ಷಗಳಲ್ಲಿ ತಪ್ಪಿಸಿಕೊಂಡಿರುತ್ತಾನೆ. ತನ್ನ ಮಗ ಮತ್ತು ಅವನ ಮಗ (ಮೊಮ್ಮಗ) ಇದ್ದಾನೆ ಎಂಬುದು ಹೇಗೋ ಈ ಮುಖ್ಯಸ್ಥನಿಗೆ ತಿಳಿದಿದೆ. ತನ್ನ ಮೊಮ್ಮಗನ ನೋಡದ ಹೊರತು ಪ್ರಾಣ ಬಿಡಬಾರದೆಂಬ ಛಲ. ಈ ಮುಖ್ಯಸ್ಥನಿಗೆ ಮೂವರು ಹೆಣ್ಣುಮಕ್ಕಳು. ತನ್ನ ಮೂವರೂ ಅಳಿಯಂದರು ಮತ್ತು ರಾಜ ಮನೆತನ ಪುರೋಹಿತ ಇವನನ್ನು ಕೊಲ್ಲಲು ಸಂಚು ಹೂಡೂತ್ತಾರೆ.

                                                                                       ಬುಕ್ ಮೈ ಶೋಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ರಾಜ ಪುರೋಹಿತನ ಮಗಳು (ಇಶಿತಾ ದತ್ತ) ರಕ್ತ ಸಂಬಧವಿಲ್ಲದಿದ್ದರೂ ಈ ರಾಜಮನೆತನದ ಮುಖ್ಯಸ್ಥನಿಗೆ ಪ್ರೀತಿಯ ಮೊಮ್ಮಗಳು. ಇಂತಹ ಸಮಯದಲ್ಲಿ ಈ ಮುಖ್ಯಸ್ಥನನ್ನು ಕೊಲ್ಲಲು 'ಬಾಟೆಲ್ ಮಣಿ' (ಶರಣ್) ಎಂಬುವನನ್ನು ದೊಡ್ಡ ಡಾನ್ ಎಂದು ನಂಬಿ ಅಳಿಯಂದರು ತಮ್ಮ ಮನೆಗೆ ಕರೆತರುವ ಸಂಚು ಹೂಡುತ್ತಾರೆ. ರಾಜ ಮುಖ್ಯಸ್ಥನಿಗೆ 'ಬಾಟೆಲ್ ಮಣಿ'ಯೇ ತನ್ನ ಮೊಮ್ಮಗ ರಾಜ ರಾಜೇಂದ್ರ ಎಂದು ನಂಬಿಸುತ್ತಾರೆ. ಆದರೆ ನಿಜವಾದ ಡಾನ್ 'ಬಾಟಲ್ ಮಣಿ' ಕೂಡ ಜೈಲಿನಿಂದ ಹೊರಗೆ ಬರುತ್ತಾನೆ. ಅಳಿಯಂದಿರಿಗೆ ತಾವು ಕರೆತಂದ ಮಣಿ, ಬಾಟಲ್ ಮಣಿ ಅಲ್ಲ ಎಂಬುದ ತಿಳಿಯುತ್ತದೆ. ಆದರೆ ಮುಖ್ಯಸ್ಥನನ್ನು ರಕ್ಷಿಸಲು ಅವರ ತಂದೆಯ ಆತ್ಮ ದೆವ್ವವಾಗಿ 'ರಾಜರಾಜೇಂದ್ರ'ನ ದೇಹ ಹೊಕ್ಕುತ್ತದೆ. ಹೀಗೆ ಹತ್ತು ಹಲವು ಘಟನೆಗಳೊಂದಿಗೆ ಸಿನೆಮಾ ಮುಂದುವರೆಯುತ್ತದೆ.
 
ಹಿಸ್ ಹೈನೆಸ್ಸ್ ಅಬ್ದುಲ್ಲ' ೧೯೯೦ರ ಮೋಹನ್ ಲಾಲ್ ಅಭಿನಯದ ಸಂಗೀತಮಯ ಸಿನೆಮಾ. ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡು ಹಲವಾರು ಪ್ರಶಸ್ತಿಗಳನ್ನು ಪಡೆದ, ವಿಮರ್ಶಕರ ಮೆಚ್ಚುಗೆ ಪಡೆದ ಸಿನೆಮಾ ಇದು. ಇದರ ಕಥೆಯನ್ನೇ ಸಂಪೂರ್ಣ ನಕಲು ಮಾಡದೆ ಅತಿ ಕೆಟ್ಟ ರೀತಿಯಲ್ಲಿ ಕನ್ನಡಕ್ಕೆ ಅಳವಡಿಸಿಕೊಂಡಿದ್ದಾರೆ ನಿರ್ದೇಶಕ ಪಿ ಕುಮಾರ್. ಹಾಸ್ಯ ಎಂದಾಕ್ಷಣ ಎಲ್ಲ ತರ್ಕವನ್ನು-ಎಲ್ಲ ಸಾಮಾನ್ಯ ಲೋಕ ಜ್ಞಾನವನ್ನು ತ್ಯಜಿಸಿಬಿಡಬೇಕೆಂದೇನಿಲ್ಲ. ಆದರೆ ರಾಜರಾಜೇಂದ್ರ ಸಿನೆಮಾದಲ್ಲಿ ಆ ಲೋಕಜ್ಞಾನವನ್ನು ಕಡೆಗಣಿಸಿದ್ದಾರೆ. ಮಲಯಾಳಂ ಸಿನೆಮಾದಲ್ಲಿ ರಾಜ ಮುಖ್ಯಸ್ಥನನ್ನು ಕೊಲ್ಲಲು ಕರೆದುಕೊಂಡು ಬರುವ ಯುವಕ ಅರಮನೆಯನ್ನು ಅಧ್ಯಯನ ಮಾಡುವ ನೆಪದಲ್ಲಿ ಬಂದರೆ, ನಮ್ಮ ರಾಜ ರಾಜೇಂದ್ರ ಸಿನೆಮಾದಲ್ಲಿ ಐದು ವರ್ಷದ ಮಗನಾಗಿದ್ದಾಗ ಕಳೆದುಕೊಂಡ ಮಗನ ಮಗ, ಸುಲಭವಾಗಿ ಮೊಮ್ಮಗ ಎಂದು ಹೇಳಿಕೊಂಡು ಅರಮನೆಯನ್ನು ಹೊಕ್ಕುತ್ತಾನೆ.

ಹಾಸ್ಯಪ್ರಧಾನ ಸಿನೆಮಾ ಎಂದು ಹೇಳಿಕೊಂಡರೂ ಅದದೇ ಮತ್ತೆ ಮತ್ತೆ ರಿಪೀಟ್ ಆಗಿ ತಲೆ ಚಿಟ್ಟು ಹಿಡಿಸುತ್ತದೆ. ಹಾಸ್ಯ ನಟ ಪೂರ್ಣ ಪ್ರಮಾಣದ ನಾಯಕನಾಗಬೇಕೆ ಎಂಬ ಪ್ರಶ್ನೆ ತಲೆದೋರುವುದು ಆವಾಗಲೇ! ಹತ್ತು ಹಲವು ಅನಗತ್ಯ ಘಟನೆಗಳನ್ನು ತುರುಕಿ ಪ್ರೇಕ್ಷಕನನ್ನು ಹೈರಾಣ ಮಾಡಿಬಿಡುತ್ತಾರೆ ನಿರ್ದೇಶಕರು. ಬಹುಷಃ ಮೂಲ ಮಲಯಾಳಮ್ ಸಿನೆಮಾದಲ್ಲಿ ಶಾಸ್ತ್ರೀಯ ಸಂಗೀತದ ಸ್ಪರ್ಧೆ ಇತ್ತು ಎಂತಲೋ ಏನೋ, ಇಲ್ಲಿಯೂ ಕೂಡ ಆ ಒಂದು ಎಳೆಯನ್ನು ತಂದು, ಕೆಟ್ಟ ಹಾಡುಗಾರಿಕೆಯನ್ನು ಪ್ರದರ್ಶಿಸಿದ್ದಾರೆ. ಗ
 
ೀತ ಸಾಹಿತ್ಯದಲ್ಲಿ ಅದಕ್ಕೆ ಕೊಟ್ಟಿರುವ ಹಾಸ್ಯದ ಟಚ್ ಅಂತೂ ಅಸಹ್ಯ! ಚಲನಚಿತ್ರದಿಡೀ ಶರಣ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಾರೆ. ಮಾಮೂಲಿ ಎನ್ನಬಹುದಾದ ನಟನೆ. ಹೊಸ ಪರಿಚಯ ಇಶಿತಾ ದತ್ತ ಪರವಾಗಿಲ್ಲ. ಸಾಧು ಕೋಕಿಲಾ, ರಾಮಕೃಷ್ಣ ಸೇರಿದಂತೆ ಪೋಷಕ ಪಾತ್ರವರ್ಗದ ನಟನೆ ಸಾಮಾನ್ಯ. ಅರ್ಜುನ್ ಜನ್ಯ ಅವರ ಸಂಗೀತ ಕನ್ನಡ ಚಿತ್ರೋದ್ಯಮದಲ್ಲಿ ಯಾರು ಬೇಕಾದರೂ ಸಂಗೀತ ನಿರ್ದೇಶಕನಾಗಬಹುದು ಎಂಬುದನ್ನು ನೆನಪಿಸುತ್ತದೆ. ಒಟ್ಟಿನಲ್ಲಿ ಸತ್ವ ಕತೆಯಿಲ್ಲದೆ, ಚುರುಕು ಹಾಸ್ಯ ಸಂಭಾಷಣೆ-ಸನ್ನಿವೇಶಗಳ ಕೊರತೆಯಿಂದ, ಕೆಟ್ಟ ಸಂಗೀತದಿಂದ ಸಿನೆಮಾ ಹಿಸ್ ಹೈನೆಸ್ಸ್ ಯಾವಾಗ ಮುಗಿಯುತ್ತಪ್ಪಾ ಎಂದೆನಿಸುತ್ತದೆ.

 
ರೇಟಿಂಗ್ ‌: 3.5 / 5 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments