Webdunia - Bharat's app for daily news and videos

Install App

ಸೂಪರ್ ಶಾಸ್ತ್ರಿ ಚಿತ್ರವಿಮರ್ಶೆ: ರಿಮೇಕ್ ಶಾಸ್ತ್ರಿಗೆ ಶಾಸ್ತಿ

Webdunia
PR
ಚಿತ್ರ: ಸೂಪರ್ ಶಾಸ್ತ್ರಿ
ತಾರಾಗಣ: ಪ್ರಜ್ವಲ್ ದೇವರಾಜ್, ಹರಿಪ್ರಿಯಾ, ಉಮಾಶ್ರೀ, ಬುಲೆಟ್ ಪ್ರಕಾಶ್
ನಿರ್ದೇಶನ: ರವಿರಾಜ್
ಸಂಗೀತ: ದೇವ

ಇಂತಹ ಚಿತ್ರವನ್ನೂ ರಿಮೇಕ್ ಮಾಡುವ ಅಗತ್ಯವಿದೆಯೇ? ನಮ್ಮ ಕನ್ನಡ ಚಿತ್ರರಂಗದ ಹೊಸ ನಿರ್ದೇಶಕರಿಗೆ ಇಷ್ಟೊಂದು ಬರವೇ? ಇಂತಹ ಪ್ರಶ್ನೆ 'ಸೂಪರ್ ಶಾಸ್ತ್ರಿ' ಚಿತ್ರ ನೋಡಿದ ನಂತರ ಯಾರಿಗಾದರೂ ಮೂಡದೇ ಇರದು. ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೂ ಇಂತಹ ಚಿತ್ರಗಳು ಆಹಾರವಾಗುವುದರಲ್ಲಿ ಸಂಶಯವಿಲ್ಲ.

ಇದು ತೆಲುಗಿನ 'ಸೀಮಾ ಶಾಸ್ತ್ರಿ' ಚಿತ್ರದ ರಿಮೇಕ್. ಅಲ್ಲೇನೂ ದೊಡ್ಡ ಹಿಟ್ ಆಗಿರಲಿಲ್ಲ. ಅಂತಹ ಕಥೆಯೂ ಚಿತ್ರದಲ್ಲಿರಲಿಲ್ಲ. ಅಷ್ಟಾದರೂ ಆ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಿದ್ದಾರೆ ರವಿರಾಜ್ ಎಂಬ ನಿರ್ದೇಶಕರು. ಹೀಗೆ ರಿಮೇಕ್ ಮಾಡಿದಾಗಲಾದರೂ ನೀಟಾಗಿ ಮಾಡುತ್ತಿದ್ದರೆ ಯಾರ ತಕರಾರು ಇರುತ್ತಿರಲಿಲ್ಲ. ಆದರೆ ಅದನ್ನೂ ಮಾಡಿಲ್ಲ. ಅಂತಿಮವಾಗಿ ರಿಮೇಕ್ ಮಾಡಲೂ ಬರೋದಿಲ್ಲ ಎಂದು ಸಾಬೀತುಪಡಿಸಿದ್ದಾರೆ.

ಬ್ರಾಹ್ಮಣರ ಹುಡುಗ ಮತ್ತು ಗೌಡರ ಹುಡುಗಿಯ ನಡುವಿನ ಪ್ರೇಮಕಥೆಯನ್ನೇ ಹಿಡಿದು ಜಗ್ಗಲಾಗಿದೆ. ಅರ್ಚಕನ ಮಗ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಕೆಚ್ಚಿನ ಗೌಡರ ಮಗಳು ಸೌಮ್ಯ ಲವ್ ಮ್ಯಾರೇಜ್‌ಗೆ ಅಡ್ಡಿಯಾದಾಗ ಬ್ರಾಹ್ಮಣರ ಹುಡುಗ ಹೇಗೆ ಇನ್ನೊಂದು ಸಮುದಾಯದಂತೆ ಪೋಸ್ ಕೊಡುತ್ತಾನೆ? ಸಿಕ್ಕಿಬಿದ್ದಾಗ ಏನಾಗುತ್ತದೆ ಮುಂತಾದುವುಗಳನ್ನು ಆಕ್ಷನ್ ಕಮ್ ಹಾಸ್ಯ ಧಾಟಿಯಲ್ಲಿ ಹೇಳಲು ಹೊರಟು ಎಡವಿದ್ದಾರೆ ನಿರ್ದೇಶಕರು.

ಇಲ್ಲಿ ನೆಪಕ್ಕಷ್ಟೇ ಹಾಸ್ಯ. ಪ್ರತಿ ಸನ್ನಿವೇಶದಲ್ಲೂ ಮನರಂಜನೆ ಬದಲು ಹಿಂಸೆಯೇ ರಾಚುತ್ತದೆ. ತೆಲುಗು ಶೈಲಿಯ ಅರಚಾಟವನ್ನೂ ರಿಮೇಕ್ ಭರದಲ್ಲಿ ನಿರ್ದೇಶಕರು ಕಾಪಿ ಹೊಡೆದಿದ್ದಾರೆ. ಕನ್ನಡದ ಸೊಗಡು ನಿರ್ದೇಶಕರಿಗೆ ಅರ್ಥವೇ ಆದಂತಿಲ್ಲ. ಪುರಾತನ ನಿರೂಪನೆ, ಕಿಕ್ ಇಲ್ಲದ ಸಂಭಾಷಣೆ, ನಿಧಾನಗತಿಯಲ್ಲಿ ದೃಶ್ಯಗಳು ಉರುಳುವುದು ಕಣ್ಣುಗಳಿಗೆ ತುಂಬಾ ತ್ರಾಸ ಒದಗಿಸುತ್ತದೆ.

ಇನ್ನು ಈ ಚಿತ್ರದಲ್ಲಿ ಕನ್ನಡ ಪ್ರೇಕ್ಷಕರಿಗೆ ಹೊಸತೇನಿದೆ ಎಂಬ ಪ್ರಶ್ನೆ? ಇಂತಹ ಚಿತ್ರಗಳು ಈಗಾಗಲೇ ಹತ್ತಾರು ಬಂದು ಹೋಗಿವೆ. ಅಲ್ಲಿಂದ ಇಲ್ಲಿಂದ ಎತ್ತಿಕೊಂಡ ಸರಕುಗಳನ್ನೇ ಬಳಸಿರುವುದರಿಂದ ಎಲ್ಲೂ ವಿಶೇಷ ಎಂಬ ಭಾವನೆ ಬರುವುದೇ ಇಲ್ಲ.

ಪ್ರಜ್ವಲ್ ತನಗೆ ಸಿಕ್ಕಿರುವ ಅವಕಾಶದಲ್ಲಿ ಮಿಂಚಿದ್ದಾರೆ. ಆದರೆ ಪಾತ್ರ ಅವರಿಗೆ ಹೊಂದುವುದೇ ಇಲ್ಲ. ಇನ್ನಾದರೂ ಪಾತ್ರಗಳ ಆಯ್ಕೆಯಲ್ಲಿ ಅವರು ಎಚ್ಚರಿಕೆ ವಹಿಸದೇ ಇದ್ದರೆ ಮೂಲೆಗುಂಪಾಗುವುದು ಖಚಿತ. ನಾಯಕಿ ಹರಿಪ್ರಿಯಾ ಎಂದಿನಂತೆ ಕುಲುಕುತ್ತಾರೆ, ಬಳುಕುತ್ತಾರೆ. ಉಳಿದವರನ್ನೂ ಸರಿಯಾಗಿ ಬಳಸಿಕೊಂಡಿಲ್ಲ.

ದೇವ ಸಂಗೀತದ ಎರಡು ಹಾಡುಗಳು ಅಲ್ಲಿಂದಲ್ಲಿಗೆ ಸಹಿಸಿಕೊಳ್ಳಬಹುದು. ಹಾಗೆ ನೋಡಿದರೆ ಇಡೀ ಚಿತ್ರದಲ್ಲಿ ಹಾಡುಗಳು ಬಂದಾಗಲಷ್ಟೇ ಪ್ರೇಕ್ಷಕ ನಿರಾಳನಾಗುತ್ತಾನೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shruti Haasan, ಚೆನ್ನೈಗೆ ಸೋಲಾಗುತ್ತಿದ್ದ ಹಾಗೇ ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ನಟಿ, Video Viral

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

Show comments