Webdunia - Bharat's app for daily news and videos

Install App

ವಿಮರ್ಶೆ: 'ಜೋಗಯ್ಯ'ನ ಆರ್ಭಟ ಥಿಯೇಟರ್‌ನಲ್ಲಿ ನೋಡಿದ್ರೇ ಚಂದ

Webdunia
EVENT
' ಜೋಗಯ್ಯ' ಚಿತ್ರದ ಮೂಲಕ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ನಿರ್ದೇಶಕ ಪ್ರೇಮ್‌ ಒಂದು ಮಟ್ಟಕ್ಕೆ ಗೆದ್ದಿದ್ದಾರೆ ಎಂಬ ಪೀಠಿಕೆಯೊಂದಿಗೆ 'ಜೋಗಯ್ಯ'ನನ್ನು ಅವಲೋಕಿಸೋಣ. ಭೂಗತಲೋಕದ ಗೋಜಲುಗಳು ಮತ್ತು ತಪ್ಪುಕಲ್ಪನೆಯೊಳಗೆ ಸಿಕ್ಕಿಕೊಂಡ ಜೋಗಯ್ಯ ಬೆಂಗಳೂರನ್ನು ತೊರೆದು ಮುಂಬಯಿಯನ್ನು ಸೇರಿಕೊಳ್ಳಬೇಕಾಗಿ ಬರುತ್ತದೆ. ಅಲ್ಲಿನ ಜಮೀನುದಾರನೊಬ್ಬನ ಮನೆಯಲ್ಲಿ ಆತ ಕೆಲಸ ಮಾಡಿಕೊಂಡಿರುತ್ತಾನೆ. ಜಮೀನುದಾರನ ಮಗಳು ವಿದ್ಯಾಗೆ ಮದುವೆ ಗೊತ್ತಾಗಿರುತ್ತದೆ. ಆದರೆ ಆಕೆ ಕ್ರಮೇಣವಾಗಿ ಜೋಗಯ್ಯನಲ್ಲಿ ಅನುರಕ್ತಳಾಗುತ್ತಾಳೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಜೋಗಯ್ಯನನ್ನು ಅನಿರೀಕ್ಷಿತವಾಗಿ ಬಂಧಿಸಿ ಮುಂಬಯಿಯಿಂದ ಬೆಂಗಳೂರಿಗೆ ಕರೆತರುವವರೆಗೂ ಅವನೊಬ್ಬ ಭೂಗತಲೋಕದ ದೊರೆ ಎಂದು ಅಲ್ಲಿನ ಯಾರಿಗೂ ಗೊತ್ತಿರುವುದಿಲ್ಲ. ಜೋಗಯ್ಯನಿಗೆ ಅವನ ನ್ಯಾಯಾಲಯದ ಪ್ರಕರಣಗಳಲ್ಲಿ ನೆರವಾಗಲೆಂದು ವಿದ್ಯಾ ತನ್ನ ನಿಶ್ಚಿತಾರ್ಥವನ್ನು ಮುರಿದುಕೊಳ್ಳುತ್ತಾಳೆ.

ಆದರೆ ಅಷ್ಟು ಹೊತ್ತಿಗಾಗಲೇ ಜೋಗಯ್ಯನ ಅನುಪಸ್ಥಿತಿಯಲ್ಲಿ ಭೂಗತಲೋಕದ ಹಲವು ಮಂದಿ ಅವನ ಹೆಸರನ್ನು ದುರುಪಯೋಗಪಡಿಸಿಕೊಂಡಿರುತ್ತಾರೆ. ಹೀಗಾಗಿ ಅವನ ವಿರುದ್ಧ ಮತ್ತಷ್ಟು ಪ್ರಕರಣಗಳು ದಾಖಲುಗೊಂಡಿರುತ್ತವೆ. ಇವನ್ನೆಲ್ಲಾ ಜೋಗಯ್ಯ ಹೇಗೆ ಜಯಿಸಿಕೊಂಡ ಮತ್ತು ಅವನನ್ನು ಚಿತ್ರದಲ್ಲಿ ಅಂತಿಮವಾಗಿ ಹೇಗೆ ಬಿಂಬಿಸಲಾಗುತ್ತದೆ ಎಂಬುದನ್ನು ಚಿತ್ರವನ್ನು ನೋಡಿಯೇ ತಿಳಿಯಬೇಕು.

ಇದು ಶಿವಣ್ಣನ ನೂರನೇ ಚಿತ್ರ ಎಂಬ ಸಂಭ್ರಮಕ್ಕೆ ಚಿತ್ರದಲ್ಲಿ ಹಲವಾರು ಸನ್ನಿವೇಶಗಳು ಸಾಕ್ಷಿಯಾಗಿವೆ. ಹರಿಕೃಷ್ಣ ನೀಡಿರುವ ಹಾಡುಗಳು, ಅವುಗಳನ್ನು ವೈಭವೋಪೇತವಾಗಿ ಚಿತ್ರೀಕರಿಸಿರುವ ರೀತಿ, ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿ ಕನ್ನಡ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿರುವ ಛಾಯಾಗ್ರಾಹಕ ನಂದಕುಮಾರ್ ತೋರಿರುವ ಕಾರ್ಯದಕ್ಷತೆ ಚಿತ್ರದ ಪ್ಲಸ್‌ಪಾಯಿಂಟ್‌ಗಳು ಎನ್ನಬಹುದು. ಅಭಿನಯದ ವಿಷಯದಲ್ಲಿ ಶಿವಣ್ಣ ಉತ್ತಮಿಕೆಯನ್ನು ಮೆರೆದಿದ್ದಾರೆ. ಆದರೆ ಅವರ ವೇಷಭೂಷಣಗಳು ಕೆಲವೊಮ್ಮೆ ಸಹ್ಯವೆನಿಸುವುದಿಲ್ಲ. ಈ ಕುರಿತು ಒಂದಷ್ಟು ಗಮನ ಹರಿಸಬೇಕಿತ್ತು.

' ಅಂತ' ಚಿತ್ರದ ಮುಂದುವರೆದ ಭಾಗವಾಗಿ ನಟ-ನಿರ್ದೇಶಕ ಉಪೇಂದ್ರ 'ಆಪರೇಷನ್‌ ಅಂತ' ಎಂಬ ಚಿತ್ರವನ್ನು ಸುಮಾರು ಒಂದು ದಶಕದಷ್ಟು ಹಿಂದೆ ನಿರ್ದೇಶಿಸಿದಾಗ, ಕೆಲವು ರಾಜಕಾರಣಿಗಳನ್ನು ಮತ್ತು ಪ್ರಮುಖ 'ಫೈರ್‌ಬ್ರಾಂಡ್‌' ಪತ್ರಕರ್ತರೊಬ್ಬರನ್ನು ಹೋಲುವ ಪಾತ್ರಧಾರಿಗಳನ್ನು ಬಳಸಿಕೊಂಡು ಒಂದಷ್ಟು ಸಂಗತಿಗಳನ್ನು ಹಸಿಹಸಿಯಾಗಿ ಬಿಂಬಿಸುವ ಪ್ರಯತ್ನ ಮಾಡಿದ್ದರು.

ಪ್ರಸ್ತುತ 'ಜೋಗಯ್ಯ' ಚಿತ್ರದಲ್ಲೂ ಸದ್ಯದ ರಾಜಕೀಯ ಸನ್ನಿವೇಶದಲ್ಲಿನ ಒಂದಷ್ಟು ರಾಜಕಾರಣಿಗಳನ್ನು ಹೋಲುವ ಪಾತ್ರಧಾರಿಗಳಿದ್ದು ಅವರನ್ನು ಪ್ರೇಕ್ಷಕರು ಸುಲಭವಾಗಿ ಗುರುತಿಸುತ್ತಾರೆ ಮತ್ತು ಸಂಬಂಧಪಟ್ಟವರೊಂದಿಗೆ ಹೋಲಿಸುತ್ತಾರೆ. ಇದು ಚಿತ್ರಕ್ಕೆ ಎಷ್ಟರಮಟ್ಟಿಗೆ ನೆರವಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾಣಬಹುದು.

ಹರಿತವಾದ ಸಂಭಾಷಣೆ 'ಜೋಗಯ್ಯ'ನಲ್ಲಿ ಮೆಚ್ಚುಗೆಯಾಗುವ ಅಂಶ. ಇದಕ್ಕಾಗಿ ಸಂಭಾಷಣಾಕಾರ ನರೇಂದ್ರಬಾಬು ಶ್ಲಾಘನೆಗೆ ಅರ್ಹರಾಗುತ್ತಾರೆ. ಚಿತ್ರದ ಪ್ರತಿಯೊಂದು ಫ್ರೇಮ್‌ನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಡಲು ಮತ್ತು ಶಿವಣ್ಣನ ನೂರನೇ ಚಿತ್ರವನ್ನು ಒಂದು ಸ್ಮರಣೀಯ ಚಿತ್ರವಾಗಿಸಲು ಇಡೀ ಚಿತ್ರತಂಡ ದುಡಿದಿರುವುದು ಎದ್ದು ಕಾಣುತ್ತದೆ ಎನ್ನಬಹುದು. ಆದರೂ ಸಹ ನಿರ್ದೇಶಕ ಪ್ರೇಮ್‌ ಗಿಮಿಕ್‌ ಮತ್ತು ಪ್ರಚಾರದ ಹಪಾಹಪಿಗೆ ಮೊರೆಹೋಗದೆ ತಮ್ಮ ಪ್ರತಿಭೆಯನ್ನು ಇನ್ನಷ್ಟು ಹರಿತಗೊಳಿಸಿಕೊಂಡರೆ ಮತ್ತಷ್ಟು ಉತ್ತಮ ಚಿತ್ರಗಳನ್ನು ಅವರು ನೀಡಬಲ್ಲರು ಎನಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ 'ಜೋಗಯ್ಯ' ಒಂದು ಸಹನೀಯ ಚಿತ್ರ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rohit Basfore: ಸ್ನೇಹಿತರ ಜತೆ ಹೊರಗಡೆ ಹೋದ ಬಾಲಿವುಡ್ ನಟ ರೋಹಿತ್ ಬಾಸ್ಪೋರ್ ಶವವಾಗಿ ಪತ್ತೆ

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

ತಿರುಪತಿ ತಿಮ್ಮಪ್ಪನ ದರ್ಶನ್ ಪಡೆದ ನಟಿ ಆಶಿಕಾ ರಂಗನಾಥ್‌: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

ಬಿಜೆಪಿಗೆ ಪ್ರೀತಿ ಜಿಂಟಾ ಸೇರ್ಪಡೆ: ವದಂತಿಗೆ ಕೌಂಟರ್‌ ಕೊಟ್ಟ ಬಾಲಿವುಡ್ ನಟಿ

Prithwi Bhat marriage: ಮದುವೆ ಬಳಿಕ ಗಾಯಕಿ ಪೃಥ್ವಿ ಭಟ್ ಮೊದಲ ಬಾರಿಗೆ ಗಂಡನ ಜೊತೆ ಇರುವ ಫೋಟೋ ರಿವೀಲ್

Show comments