Webdunia - Bharat's app for daily news and videos

Install App

ವಿಜಯ್ ಮೈಮೇಲೆ ಬಂದ 'ದೇವ್ರು' ಥಿಯೇಟರಿಗೆ!

Webdunia
MOKSHA
ಚಿತ್ರ ವಿಮರ್ಶೆ: ದೇವ್ರು
ತಾರಾಗಣ: ವಿಜಯ್, ಪ್ರಜ್ಞಾ
ನಿರ್ದೇಶಕ: ಕೋಕಿಲಾ ಸಾಧು

ಒಬ್ಬನನ್ನು ಕೊಂದು ಮತ್ತೊಬ್ಬ ಬದುಕುತ್ತಾನೆ ಅವನನ್ನೂ ಮುಗಿಸಲು ಆ ದೇವರಿರುತ್ತಾನೆ. ಇದೇ ಎಳೆಯೊಂದಿಗೆ ರೌಡಿಸಂ ಹಾಗೂ ರಾಜಕೀಯ ಒಟ್ಟಾಗಿ ಕಲೆಸಿದರೆ ಪ್ರೇಕ್ಷಕನ ಮುಂದೆ ಬರುವುದು ದೇವ್ರು.

ಈ ಚಿತ್ರ ಮೂಲತಃ ತಮಿಳಿನ ತಲೈ ನಗರಂ ಚಿತ್ರದ ರಿಮೇಕು. ಒಬ್ಬನನ್ನು ಕೊಂದ ಎಂಬ ಕಾರಣಕ್ಕೆ ಅವನ ಕಡೆಯವರು ಇನ್ನೊಬ್ಬನನ್ನ ಕೊಲ್ಲುವುದು, ರಕ್ತದೋಕುಳಿ, ದೊಂಬಿ, ದರ್ಬಾರು, ನಡುವೆ ನುಸುಳುವ ಹಾಡುಗಳು ದೇವ್ರು ಚಿತ್ರದ ಹೈಲೈಟ್ಸ್.

ಚಿತ್ರದಲ್ಲಿ ವಿಜಿ ಕೇಶ ರಹಿತರಾಗಿ ಸಖತ್ ಸ್ಮಾರ್ಟ್ ಆಗಿ ಕಾಣಿಸುತ್ತಾರೆ. ಮೈ ನವಿರೇಳಿಸುವ ಹೊಡಪೆಟ್ಟುಗಳು ಸೂಪರ್. ಕೋಕಿಲಾ ಸಾಧು ತಮ್ಮ ನಿರ್ದೇಶನದ ಜವಾಬ್ದಾರಿಯನ್ನು ಸೊಗಸಾಗಿ ಮುಗಿಸಿದ್ದಾರೆ. ಸಣ್ಣ ಎಳೆಯ ಕಥೆಯನ್ನು ಎರಡುವರೆ ಗಂಟೆ ಪ್ರೇಕ್ಷಕನ ನೆಮ್ಮದಿ ಹಾಳು ಮಾಡದೆ ಎಳೆದಿದ್ದಾರೆ ಅಂದರೆ ಸಾಧು ಈಸ್ ಗ್ರೇಟ್. ಹಾಸ್ಯ ದೃಶ್ಯಗಳಲ್ಲೂ ಸಾಧುವಿನ ಕೈ ಚಳಕ ಚೆನ್ನಾಗಿ ಮೂಡಿಬಂದಿದೆ.

ವಿಜಯ್ ನಟನೆ, ನಾಟ್ಯ ಎಲ್ಲವೂ ವಿಶೇಷವಾಗಿದೆ. ಆದರೆ ನಾಯಕಿ ಪ್ರಜ್ಞಾ ಮಾತ್ರ ನಟನೆ ಹಾಗೂ ನೃತ್ಯ ಎರಡರಲ್ಲೂ ಪಳಗಬೇಕು. ಶೋಭ್ ರಾಜ್, ರವಿಕಾಳೆ, ಯತಿರಾಜ್, ಆಶಿಷ್ ವಿದ್ಯಾರ್ಥಿ ಇವರುಗಳೆಲ್ಲ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಇನ್ನೊಂದು ವಿಶೇಷವೆಂದರೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಬಣ್ಣಹಚ್ಚಿದ್ದು. ರಾಕ್ ಲೈನ್ ವೇಂಕಟೇಶ್ ಪೊಲೀಸ್ ಪಾತ್ರದಲ್ಲಿ ಅದ್ಬುತವಾಗಿ ನಟಿಸಿದ್ದಾರೆ. ಭವಿಷ್ಯದಲ್ಲಿ ಕನ್ನಡಕ್ಕೆ ಉತ್ತಮ ಪೋಷಕ ನಟನಾಗಬಲ್ಲೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

ದೇಶ ಎಂಬ ವಿಚಾರ ಬಂದಾಗ ಹಿಂದೆ ನೋಡಬಾರದು: ಸುನಿಲ್ ಶೆಟ್ಟಿ

Fighter ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ತರುತ್ತಾರೆ: ರಜನಿಕಾಂತ್ ಬಣ್ಣನೆ

Sonu Nigam: ಕನ್ನಡ ಹಾಡು ಹಾಡಿ ಎಂದು ಯುವಕನಿಂದ ಸೋನು ನಿಗಂಗೆ ಎಚ್ಚರಿಕೆ: ಗಾಯಕ ಹೇಳಿದ್ದೇನು ಗೊತ್ತಾ

Show comments