Webdunia - Bharat's app for daily news and videos

Install App

ವಿಕ್ಟರಿ ಚಿತ್ರಕ್ಕೆ ಭರ್ಜರಿ ಓಪನಿಂಗ್‌

Webdunia
ಶುಕ್ರವಾರ, 23 ಆಗಸ್ಟ್ 2013 (15:20 IST)
PR
PR
ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು.. ಆಚೇಗಾಕೋಳೆ ವೈಫು... ಹಾಡಿನಿಂದಲೇ ಮೋಡಿ ಮಾಡಿದ ಚಿತ್ರ ವಿಕ್ಟರಿ. ಕಾಮಿಡಿ ಸ್ಟಾರ್‌ ಶರಣ್ ಇದೀಗ ಸೂಪರ್‌ ಸ್ಟಾರ್‌ ಹಂತ ತಲುಪಿದ್ದಾನೆ. ಯಾಕೆಂದ್ರೆ ಅವರ ವಿಕ್ಟರಿ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ.

ಗಾಂಧೀನಗರದ ಥಿಯೇಟರ್‌ಗಳಲ್ಲಿ ಸಿನಿಮಾ ನೋಡೋಕೆ ಅಂತಲೇ ಅಬ್ಬರದಿಂದ ಬರ‍್ತಿದ್ದಾರೆ ಅಭಿಮಾನಿ ದೇವರುಗಳು. ಪಡ್ಡೆ ಹುಡುಗರ ಮಸ್ತ್ ಮಸ್ತ್ ಡೈಲಾಗ್‌ ಗಳು ವಿಕ್ಟರಿ ಚಿತ್ರದ ಮತ್ತೊಂದು ಪ್ಲಸ್‌ ಪಾಯಿಂಟ್‌..

" ಗಂಡಸು ಕೆಟ್ಟವನಾದರೆ ಆತನ ಅದೃಷ್ಟ ಸರಿ ಇಲ್ಲ ಅಂತಾರೆ, ಅದೇ ಹೆಣ್ಣು ಕೆಟ್ಟವಳಾದರೆ ಅವಳೇ ಸರಿ ಇಲ್ಲ ಅಂತಾರೆ...
ಇದು ವಿಕ್ಟರಿ ಚಿತ್ರದ ಒಂದು ಸ್ಯಾಂಪಲ್‌ ಡೈಲಾಗ್. ಗಂಡ ಹೆಂಡತಿಯ ನಡುವಿನ ಸಂಬಂಧಗಳ ಸಾಮರಸ್ಯದ ಬಗ್ಗೆ ಮತ್ತು ಬದುಕಿನ ಸರಿ, ತಪ್ಪುಗಳನ್ನು ವಿವರಿಸುವ ಯತ್ನ ಮಾಡಿದ್ದಾರೆ ನಿರ್ದೇಶಕ ನಂದಕಿಶೋರ್.

ತಾಕತ್, ಶಾಂತಿನಿವಾಸ, ಕೆಂಪೇಗೌಡ ಸಿನೆಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿರುವ ಅನುಭವವಿರುವ ನಂದಕಿಶೋರ್ ವಿಕ್ಟರಿ ಸಿನೆಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಮೊದಲ ನಿರ್ದೇಶನದಲ್ಲೇ ಭಾರೀ ಭರವಸೆ ಹುಟ್ಟಿಸಿದ್ದಾರೆ.

" ನಾಯಕ ಶರಣ್ ನನ್ನ ಬಾಲ್ಯ ಸ್ನೇಹಿತ. ಹೀಗಾಗಿ ಆತನ ಜತೆ ಕೆಲಸ ಮಾಡುವುದು ನನಗೆ ಬಹಳ ಖುಷಿ ಕೊಟ್ಟಿದೆ. ಪ್ರೇಕ್ಷಕರನ್ನು ನನ್ನಿಂದ ಸಾಧ್ಯವಾದಷ್ಟು ನಗಿಸುವ ಪ್ರಯತ್ನ ಮಾಡಿದ್ದೇನೆ. ಜೊತೆಗೆ ಈ ಚಿತ್ರದ ಮೂಲಕ ಒಂದು ಸಂದೇಶವನ್ನೂ ನೀಡಿದ್ದೇನೆ. ಜನರು ಈ ಸಿನೆಮಾ ನೋಡಿ ಖುಷಿಯಿಂದಲೇ ಥಿಯೇಟರ್ನಿಂದ ಹೊರಬರುತ್ತಿದ್ದಾರೆ. ಇದಕ್ಕಿಂತ ಖುಷಿ ನಿರ್ದೇಶಕನಿಗೆ ಇನ್ನೇನಿದೆ ಹೇಳಿ" ಅಂತ ವಿನಮ್ರವಾಗಿ ಹೇಳಿದ್ರು ನಿರ್ದೇಶಕರು.

ಒಟ್ನಲ್ಲಿ ಮೊದಲ ನಿರ್ದೇಶನದಲ್ಲಿ ನಿರ್ದೇಶಕ ಗೆದ್ದಿದ್ದಾರೆ. ಶರಣ್‌ ಮತ್ತೊಮ್ಮೆ ಅದ್ಭುತ ನಟನಾಗಿ ಹೊರ ಹೊಮ್ಮಿದ್ದಾರೆ. ನೀವೂ ಸಿನೆಮಾ ನೋಡಿ. ಗ್ಯಾರಂಟಿ ನಗ್ತೀರ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಥಗ್ ಲೈಫ್‌ ಸಿನಿಮಾಗೆ ಸೋಲಿನ ನಡುವೆ ಕಮಲ್ ಹಾಸನ್ ಸಿನಿಮಾಗೆ ಬಿಗ್ ಶಾಕ್‌

ತಮಿಳು ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಡ್ರಗ್ಸ್ ಪ್ರಕರಣ: ಖ್ಯಾತ ನಿರ್ದೇಶಕನ ಸಹೋದರ ಅರೆಸ್ಟ್‌

Video, ಇವರೇನಾ ಸೂರ್ಯವಂಶದ ಸೊಸೆ: ಇಶಾ ಕೊಪ್ಪಿಕರ್ ನ್ಯೂ ಲುಕ್‌ಗೆ ದಂಗಾದ ಕನ್ನಡ ಫ್ಯಾನ್ಸ್‌

ಒಂದೇ ಬಾರಿಗೆ ಏಳು ಸಿನಿಮಾಗಳನ್ನು ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಸ್‌, ಇಲ್ಲಿದೆ ಡೀಟೆಲ್ಸ್‌

ಪ್ರಶಾಂತ್ ನೀಲ್, ಅಲ್ಲು ಅರ್ಜುನ್ ಜೋಡಿಯಲ್ಲಿ ಹೊಸ ಸಿನಿಮಾ

Show comments