Webdunia - Bharat's app for daily news and videos

Install App

ಯಾರದು?: ಒಮ್ಮೆ ನೋಡಲು ಅಡ್ಡಿಯಿಲ್ಲ

Webdunia
MOKSHA
ಚಿತ್ರ: ಯಾರದು?
ನಿರ್ದೇಶನ: ಶ್ರೀನಿವಾಸ ಕೌಶಿಕ್
ನಿರ್ಮಾಣ: ಲೀಲಾವತಿ ಕಂಬೈನ್ಸ್
ತಾರಾಗಣ: ವಿನೋದ್ ರಾಜ್, ಅಶ್ವಿನಿ, ಲೀಲಾವತಿ
ಜೀವನದಲ್ಲಿ ಚೇಂಜ್ ಇರಲಿ ಎಂದು ಬಯಸುವ ಚುರುಕು ಹುಡುಗರ ಗುಂಪೊಂದು ಔಟಿಂಗ್‌ಗೆ ಅಂತ ಕಾಡಿಗೆ ತೆರಳಿದಾಗ ಇದ್ದಕ್ಕಿದ್ದಂತೆ ಕಾಣೆಯಾಗೋದು, ಅವರನ್ನು ಹುಡುಕಲು ವಿಶೇಷ ತನಿಖಾಧಿಕಾರಿಯೊಬ್ಬ ಬರುವುದು, ಈ ಹುಡುಗರು ಅಂದುಕೊಂಡಂತೆ ಕಣ್ಮರೆಯಾಗಿದ್ದಾರೋ ಅಥವಾ ಕೊಲೆಯೇ ಆಗಿದ್ದಾರೋ ಎಂಬ ಪ್ರಶ್ನೆಗಳನ್ನು ಆ ಅಧಿಕಾರಿ ಬೆನ್ನುಹತ್ತಿ ಹೋಗುವುದು... ಇವೇ ಮೊದಲಾದ ಎಳೆಗಳನ್ನು ಇಟ್ಟುಕೊಂಡು ಒಂದು ಉತ್ತಮ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಶ್ರೀನಿವಾಸ ಕೌಶಿಕ್.

ವಾಸ್ತವವಾಗಿ, 'ಯಾರದು?' ಎಂಬ ಚಿತ್ರದ ಶೀರ್ಷಿಕೆಯನ್ನು ಕೇಳಿದಾಗ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಇರಬಹುದಾ ಎಂದು ಪ್ರೇಕ್ಷಕರು ಊಹಿಸಿಯಾಗಿದೆ. ಆದರೆ ಅದನ್ನೂ ಮೀರಿದ ಹಲವು ಅಂಶಗಳು ಚಿತ್ರದಲ್ಲಿವೆ ಎಂಬುದೇ ಸಮಾಧಾನಕರ ಅಂಶ. ಇದಕ್ಕಾಗಿ ಇಡೀ ಚಿತ್ರವು ಶ್ರಮಪಟ್ಟಿರುವುದು ಪ್ರತಿ ಫ್ರೇಮಿನಲ್ಲಿಯೂ ಗೋಚರಿಸುತ್ತದೆ.

ವಾಸ್ತವವಾಗಿ ಚಿತ್ರದಲ್ಲಿ ನಾಯಕನ ಪಾತ್ರದ ಪ್ರವೇಶವಾಗಿಬಿಟ್ಟಿತೆಂದರೆ, ಉಳಿದೆಲ್ಲಾ ಪಾತ್ರಗಳೂ ಗೌಣವಾಗಿ ಕೇವಲ ಅವನೊಬ್ಬನೇ ವಿಜೃಂಭಿಸುವುದು ಕೆಲವೊಂದು ನಾಯಕ ಪ್ರಧಾನ ಚಿತ್ರಗಳ ಹಣೆಬರಹ. ಆದರೆ ಇಲ್ಲಿ ಇತರ ಕಲಾವಿದರ ಅಭಿನಯಕ್ಕೂ ವಿಶೇಷ ಅವಕಾಶ ಸಿಕ್ಕಿರುವುದು ಮತ್ತೊಂದು ಸಮಾಧಾನಕರ ಅಂಶವೆನ್ನಬೇಕು. ಅಷ್ಟೇ ಅಲ್ಲ, ತನಿಖಾಧಿಕಾರಿ ಪಾತ್ರದಲ್ಲಿ ಬರುವ ವಿನೋದ್ ರಾಜ್ ಕಾಣಿಸಿಕೊಳ್ಳುವುದೂ ಸಹ ವಿರಾಮದ ನಂತರವೇ ಎಂಬುದಿಲ್ಲಿ ಗಮನಾರ್ಹ ಅಂಶ. ಈ ದೊಡ್ಡ ಗುಣಕ್ಕಾಗಿ ಅವರು ಹೊಗಳಿಕೆಗೆ ಪಾತ್ರರಾಗುತ್ತಾರೆ.

ಥ್ರಿಲ್ಲರ್ ಕಥೆಯಂತೆ ಪ್ರಾರಂಭವಾದ ಸಿನಿಮಾ ನಂತರ ದೆವ್ವದ ಕಥೆಯ ಜಾಡು ಹಿಡಿಯುತ್ತದೆ. ಇದನ್ನು ನೋಡಿದಾಗ ಇತ್ತೀಚೆಗಷ್ಟೇ ಬಂದ ಕೆಲವೊಂದು ಹಿಂದಿ ಚಿತ್ರಗಳ ನೆನಪಾಗುತ್ತದೆ. ಆದರೂ ಸಹ ಚಿತ್ರ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಈ ಇಳಿವಯಸ್ಸಿನಲ್ಲಿಯೂ ಲೀಲಾವತಿಯವರು ಬಣ್ಣ ಹಚ್ಚಿ ಕಷ್ಟದ ಪಾತ್ರವೊಂದರಲ್ಲಿ ಅಭಿನಯಿಸಿರುವುದು ಅವರ ವೃತ್ತಿಪರತೆಗೆ ದ್ಯೋತಕ ಎಂದು ಹೇಳಬಹುದು. ಎರಡು ಹಾಡುಗಳು ಮತ್ತು ಫೈಟುಗಳೇನೇ ಇದ್ದರೂ, ಅವು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂಬುದೇ ಬೇಸರ. ಹಾಡುಗಳು ಇಲ್ಲದಿದ್ದರೂ ಚಿತ್ರದ ಓಟಕ್ಕೇನೂ ಧಕ್ಕೆಯಾಗುತ್ತಿರಲಿಲ್ಲ ಎಂಬುದೂ ಅಷ್ಟೇ ನಿಜ.

ಒಟ್ಟಿನಲ್ಲಿ ಚಿತ್ರದ ಪ್ರತಿ ಫ್ರೇಮಿನಲ್ಲೂ ಚಿತ್ರತಂಡದ ಹಾಗೂ ನಿರ್ಮಾಪಕಿ ಲೀಲಾವತಿಯವರ ಶ್ರಮ ಎದ್ದು ಕಾಣುತ್ತದೆ. ಅದಕ್ಕಾಗಿಯಾದರೂ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sonu Nigam: ವಿವಾದದ ಬಳಿಕ ಸೋನು ನಿಗಂ ಕನ್ನಡ ಬೆದರಿಕೆ ಕುರಿತು ಸ್ಪಷ್ಟನೆ ಕೊಟ್ಟಿದ್ದು ಹೀಗೆ

ಕನ್ನಡತನದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಗಾಯಕ ಸೋನು ನಿಗಮ್‌ಗೆ ಸಂಕಷ್ಟ: ದೂರು ದಾಖಲು

Harshika Poonaccha: ಮಗಳಿಗೆ ದೈವಿಕ ಹೆಸರಿಟ್ಟ ಹರ್ಷಿಕಾ ಪೂಣಚ್ಚ ದಂಪತಿ

ಎಡವಟ್ಟು ಮಾಡಿಕೊಂಡ ನಟ ವಿಜಯ್​ ದೇವರಕೊಂಡ: ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದೇಕೆ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Show comments