Webdunia - Bharat's app for daily news and videos

Install App

ಬ್ರಹ್ಮನ ಬಗ್ಗೆ ನಾಲ್ಕು ಮಾತುಗಳು ...

Webdunia
ಸೋಮವಾರ, 10 ಫೆಬ್ರವರಿ 2014 (09:31 IST)
PR
ಉಪೇಂದ್ರ ನಟನೆಯ ಚಂದ್ರು ನಿರ್ದೇಶನದ ಚಿತ್ರ ಬ್ರಹ್ಮ ಇತ್ತೀಚಿಗೆ ಬಿಡುಗಡೆ ಆಯಿತು, ಬಹು ನಿರೀಕ್ಷಿತ ಈ ಚಿತ್ರದ ಬಗ್ಗೆ ಆರಂಭದಿಂದಲೂ ಅನೇಕ ಸಂಗತಿಗಳು ಹೊರ ಬಂದಿದ್ದವು. ಅಂತು ಕಡೆಗೆ ಈ ಚಿತ್ರ ಅಭಿಮಾನಿಗಳ ಕೈಸೇರಿದೆ. ಉಪ್ಪಿ ಅವರ ಚಿತ್ರಗಳಲಿ ಏನಾದರೊಂದು ವಿಶೇಷ ಇರಲೇ ಬೇಕು. ಹಾಗೆ ಆಗಿದೆ ಇಲ್ಲಿ. ಇದೊಂದು ರಾಬಿನ್ ಹುದ್ ರೀತಿಯ ಸಿನಿಮ. ಅಮ್ಮನನ್ನು ಕಳೆದು ಕೊಂದ ಅನಾಥ ಹುಡುಗ ಬೆಳೆದು ದೊಡ್ಡವನಾದ ನಂತರ ಹಣ ಶ್ರೀಮಂತರ ಬಳಿ ಲೂಟಿ ಮಾಡಿ ಅದನ್ನು ಬಡವರಿಗೆ ಹಂಚಿ ಪಾಪ ತೊಳೆದುಕೊಳ್ಳುತ್ತಾ ಬಂದಿರುತ್ತಾನೆ.

ಆದರೆ ಈ ಕಥೆಯು ಹೇಳುವಾಗ ತುಂಬಾ ಸರಳ ಅಂತ ಅನ್ನಿಸುತ್ತೆ. ಚಿತ್ರದಲ್ಲಿ ಅಷ್ಟೊಂದು ಸರಳವಾಗಿ ಜನರ ಮುಂದೆ ಇಟ್ಟಿಲ್ಲ ಚಂದ್ರು. ಅದನ್ನು ಅನೇಕ ರೀತಿಯಲ್ಲಿ ಸುತ್ತಿಸಿ ಕೊನೆಗೊಂದು ಅಂತ್ಯ ನೀಡಿದ್ದಾರೆ, ಅಂದ್ರೆ ಅನೇಕ ಉಪೇಂದ್ರ ಸಿನಿಮಾಗಳ ನಿರ್ದೇಶನದಂತೆ ಈ ಚಿತ್ರವೂ ಸಹ ಇದೆ ಎನ್ನ ಬಹುದಾಗಿದೆ.

ಕೊಲೆ ಸುಳಿಗೆ ದರೋಡೆ ಪ್ರೀತಿ ಎಲ್ಲವನ್ನೂ ಮಾಡುವ ನಮ್ಮ ನಾಯಕ ಬ್ರಹ್ಮ ಆಪ್ತನಾಗುವುದಿಲ್ಲ.
ಇಲ್ಲಿ ನಿರ್ದೇಶಕ ಚಂದ್ರು ಒಂದು ಕತೆಯನ್ನು ಉಪೇಂದ್ರ ಶೈಲಿಯಲ್ಲಿ ಹೇಳಲು ಹೋಗಿದ್ದಾರೆ.ಚಿತ್ರಕತೆಯಲ್ಲಿ ಅನಗತ್ಯ ಟ್ವಿಸ್ಟ್ ಕೊಟ್ಟಿದ್ದಾರೆ. ಹಾಗೆಯೇ ನಾಯಕನನ್ನು ವಿಜೃಂಭಿಸುವ ಭರದಲ್ಲಿ ವಾಸ್ತವತೆಯನ್ನು ಪಕ್ಕಕ್ಕೆ ತಳ್ಳಿದ್ದಾರೆ. ಇಲ್ಲಿ ಪ್ರತಿ ಸಂಗತಿ ಸಿಮೀಯವಾಗಿದೆ ಮತ್ತು ಕಲರ್ಫುಲ್ ಆಗಿದೆ.

ಇಲ್ಲಿ ಯಾವ ಸಂಗತಿಯು ಅಂದರೆ ಅತ್ಯಂತ ಮಹತ್ವದ ಸಂಗತಿಯು ಹೆಚ್ಚಿನ ಪ್ರಾಮುಖ್ಯತೆ ಪಡೆಯುವುದಿಲ್ಲ. ರಂಗಾಯಣ ರಘು, ಸಾಧು ಕೋಕಿಲ ಪಾತ್ರಗಳಿಗೆ ತಾರ್ಕಿಕ ಅಂತ್ಯವಿಲ್ಲ. ಒಟ್ಟಾರೆ ಚಿತ್ರದ ರುಚಿಯು ಹೆಚ್ಚು ಕಾಲ ಮನದಲ್ಲಿ ಉಳಿಯುವುದಿಲ್ಲ.

ಚಿತ್ರದಲ್ಲಿ ಒಬ್ಬ ರಾಜಬ್ರಹ್ಮನ ಕತೆ ಬರುತ್ತದೆ. ಕೇವಲ ನಾಲ್ಕು ನಿಮಿಷಗಳಷ್ಟು ಬರುವ ಐತಿಹಾಸಿಕ ಕತೆಯಲ್ಲಿ 1600 ಇಸವಿಯ ಒಂದು ಯುದ್ಧ ಒಂದು ದಾನದ ಸನ್ನಿವೇಶ ಹಾಗೆ ಬಂದು ಹೀಗೆ ಹೋಗುತ್ತದೆ. ಅದರ ಮುಂದಿನ ಭಾಗವನ್ನು ಪ್ರೇಕ್ಷಕ ನಿರೀಕ್ಷಿಸಿದರೆ ಸಿಗುವುದು ಬರಿ ಸೊನ್ನೆ.
ಮೊದಲರ್ಧದ ಕತೆಯಲ್ಲಿ ಬುದ್ದಿವಂತನ ಶೈಲಿಯಲ್ಲಿ ಒಬ್ಬೊಬ್ಬರೇ ಬಂದು ಬ್ರಹ್ಮನನ್ನು ಬಿಚ್ಚಿಡುತ್ತಾ ಸಾಗುತ್ತಾರೆ. ಆನಂತರ ಸೂಪರ್ ರೀತಿಯಲ್ಲಿ ಹೆಂಗಸು ಅವನನ್ನು ಕೊಲ್ಲಲು ಹುಡುಕುತ್ತಾಳೆ. ಕೊಲೆ ಸುಳಿಗೆ ಡಕಾಯತಿ ಮಾಡುವ ನಾಯಕ ಕೊನೆಗೆ ರಾಜಕಾರಣಿಯಾಗುತ್ತಾನೆ. ಮೊದಲಾರ್ಧ ಇರುವಂತ ಚುರುಕು ಓಟ ಎರಡನೇ ಭಾಗದಲ್ಲಿ ಕಂಡು ಬರುವುದಿಲ್ಲ.

ಉಪೇಂದ್ರ ನಟನೆ ಎಲ್ಲ ಕಾಲದಲ್ಲೂ ಅದ್ಭುತ. ಇನ್ನು ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿರುವ ಶಾಹುರಾಜ್ ಶಿಂಧೆ ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿ ಬೋರ್ ಹೊಡೆಸಿದ್ದಾರೆ. ಇನ್ನುಳಿದಂತೆ ಸಾಧುಕೋಕಿಲ, ರಂಗಾಯಣ ರಘು ಮುಂತಾದವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಹಾಡುಗಳು ಹಿನ್ನೆಲೆ ಸಂಗೀತ ಛಾಯಾಗ್ರಹಣ ಯಷ್ಟು ಕಥೆ ಮತ್ತು ಚಿತ್ರಕಥೆ ಪರಿಣಾಮಕಾರಿಯಾಗಿಲ್ಲ ಅನ್ನುವುದೇ ಬ್ರಹ್ಮನ ಬಗ್ಗೆ ಬರೆಯ ಬೇಕಾದ ನಾಲ್ಕು ಸಾಲುಗಳು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments