Webdunia - Bharat's app for daily news and videos

Install App

ಪ್ರೇಕ್ಷಕನನ್ನು ಫೂಲ್ ಮಾಡುವ 'ಕೂಲ್'

Webdunia
PR
PR
ಪತ್ನಿ ಶಿಲ್ಪಾ ಗಣೇಶ್ ಅವರ ನಿರ್ಮಾಣದ 'ಕೂಲ್' ಚಿತ್ರದಲ್ಲಿ ನಿರ್ದೇಶನದ ಜವಾಬ್ದಾರಿಯನ್ನೂ ಮೈ ಮೇಲೆ ಎಳೆದುಕೊಂಡಿರುವ ನಾಯಕ ನಟ ಗಣೇಶ್ ಆ ಕೆಲಸವನ್ನು ಚಾಣಾಕ್ಷತನದಿಂದ ನಿಭಾಯಿಸಿದ್ದಾರಾದರೂ ಇಡೀ ಚಿತ್ರದಲ್ಲಿ ಕೂಲ್ ಕೂಲ್ ಎಂದು ಹೇಳುತ್ತಾ ಪ್ರೇಕ್ಷಕರನ್ನು ಫೂಲ್ ಮಾಡುತ್ತಾ ಹೋಗುತ್ತಾರೆ. ಈ ಚಿತ್ರ ಏಪ್ರಿಲ್ ಒಂದರಂದು ಬಿಡುಗಡೆ ಆಗಿದ್ದರೆ ಒಂದಷ್ಟು ಅರ್ಥಪೂರ್ಣವೆನಿಸುತಿತ್ತು.

' ಕೂಲ್'ನಲ್ಲಿ ಲಾಜಿಕ್ ಇಲ್ಲ, ಮ್ಯಾಜಿಕ್ ಇದೆ ಎಂದು ಗಣೇಶ್ ಹೇಳಿಕೊಂಡಿದ್ದರು. ಲಾಜಿಕ್ ಇಲ್ಲ ನಿಜ. ಆದರೆ ಮ್ಯಾಜಿಕ್ ಮಾಡುವಲ್ಲಿ ಸಫಲರಾಗಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವುದು ಕಷ್ಟ. ಯಾಕೆಂದರೆ ಕಥೆಯಲ್ಲಾಗಲೀ ಚಿತ್ರಕಥೆಯಲ್ಲಾಗಲೀ ಹೊಸತನವೇನೂ ಇಲ್ಲ. ನಿರೂಪಣೆಯಲ್ಲೂ ಅವರು ಇನ್ನೂ ಸಾಕಷ್ಟು ದೂರ ಸಾಗಬೇಕಿದೆ. 'ಕೂಲ್' ಮೂಲಕ ಅವರು ಏನನ್ನು ಹೇಳ ಹೊರಟಿದ್ದಾರೆ ಎಂಬುದನ್ನು ಎಷ್ಟು ಕೂಲಾಗಿ ಕುಳಿತು ಯೋಚಿಸಿದರೂ ಪತ್ತೆಯಾಗುವುದಿಲ್ಲ.

ದಶಕದ ಹಿಂದೆ ತೆರೆ ಕಂಡಿದ್ದ ಹೃತಿಕ್ ರೋಶನ್ ಅಭಿನಯದ ಚೊಚ್ಚಲ ಚಿತ್ರ 'ಕಹೋನಾ ಪ್ಯಾರ್ ಹೈ' ಸ್ಪೂರ್ತಿ 'ಕೂಲ್'ನಲ್ಲಿ ಎದ್ದು ಕಾಣುತ್ತದೆ. ಮಧ್ಯಂತರ ಬಳಿಕವಂತೂ ಆ ಚಿತ್ರವನ್ನು ಯಥಾವತ್ತಾಗಿ ಭಟ್ಟಿ ಇಳಿಸಿದಂತಿದೆ. ಅನೇಕ ಚಿತ್ರಗಳಲ್ಲಿ ಅಸಿಸ್ಟೆಂಟ್, ಅಸೋಸಿಯೇಟ್ ಹಾಗೂ ನಾಯಕರಾಗಿದ್ದರೂ ಒಟ್ಟಾರೆ ನಿರ್ದೇಶನದಲ್ಲಿ ಗಣೇಶ್ ಸೋತಿದ್ದಾರೆಂದೇ ಹೇಳಬೇಕಾಗುತ್ತದೆ.

ಈಗಾಗಲೇ ಹಲವಾರು ಚಿತ್ರಗಳಲ್ಲಿ ಬಂದು ಹೋಗಿರುವ ಕಾಮಿಡಿ ಸರಕನ್ನೇ 'ಕೂಲ್'ನಲ್ಲಿ ಬಳಸಿರುವುದು ವಿಪರ್ಯಾಸ. ಶರಣ್, ಸಾಧು ಕೋಕಿಲಾ ಇದ್ದರೂ ಕಾಮಿಡಿಗೆ ಹೊಸತನದ ಯಾವ ರಂಗೂ ಇಲ್ಲ. ಪ್ರತಿ ದೃಶ್ಯದಲ್ಲೂ ಗಣೇಶನ ದರ್ಶನವಾಗಬೇಕೆಂಬ ಹುಚ್ಚು ಲೋಭತನದಿಂದಾಗಿ ಕಥೆ ಒಮ್ಮೆಲೆ ಬೋರ್ ಹೊಡಿಸುತ್ತದೆ. ಅಭಿನಯದಲ್ಲೂ ಗಣೇಶ್ ಸೊರಗಿದಂತೆ ಕಾಣುತ್ತದೆ. ಚಿತ್ರದ ನಾಯಕಿ ಸಾನಾ ಖಾನ್ ಒಂದಷ್ಟು ಸ್ಟೈಲ್ ಪ್ರದರ್ಶನಕ್ಕೆ ಹಾಗೂ ಒಂದೆರಡು ಹಾಡುಗಳಿಗೆ ಹೆಜ್ಜೆ ಹಾಕಲಷ್ಟೇ ಬಂದಂತಿದೆ.

ಹಿನ್ನೆಲೆ ಸಂಗೀತ ಎಲ್ಲೋ ಕೇಳಿದಂತೆ ಭಾಸವಾಗುತ್ತದೆ, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹೂವುಗಳಂತೆ ಹಾಡುಗಳು ಕಂಡ ಕಂಡಲ್ಲಿ ಹರಿಹಂಚಿ ಹೋಗಿದ್ದರೂ ಹರಿಕೃಷ್ಣ ಅವರ ಸಂಗೀತದಲ್ಲಿ ಎರಡು ಹಾಡುಗಳಷ್ಟೇ ಕೇಳಲು ಯೋಗ್ಯವಾಗಿವೆ. ಚಿತ್ರಕ್ಕೆ ಕರೆತಂದ ತಂತ್ರಜ್ಞರ ಮೂಲಕ ಪ್ರೇಕ್ಷಕರನ್ನು ಕೂಲಾಗಿರಿಸಲು ಗಣೇಶ್ ಮತ್ತು ಶಿಲ್ಪಾ ಗಣೇಶ್ ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ.

ರತ್ನವೇಲು ಅವರ ಕ್ಯಾಮರಾ ಚಿತ್ರದ ದೃಶ್ಯಗಳನ್ನು ಶ್ರೀಮಂತವಾಗಿ ಕಟ್ಟಿಕೊಟ್ಟಿದೆಯಾದರೂ ಕಥೆಗೆ ಪೂರಕವಾದ ಫೀಲ್ ನೀಡಲು ಸಾಧ್ಯವಾಗಿಲ್ಲ. ಹಾಡುಗಳ ಚಿತ್ರೀಕರಣ ಸೊಗಸಾಗಿದೆ. ಸಂಕಲನಕಾರ ಆಂಟನಿ ಇನ್ನಷ್ಟು ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಭಾವಲೋಕ ಮತ್ತು ತಾಂತ್ರಿಕ ಕೌಶಲ್ಯ ಏಕೀಭವಗೊಂಡಿಲ್ಲದಿರುವುದು ಚಿತ್ರ ಸಾಗುತ್ತಾ ಪ್ರೇಕ್ಷಕನಿಗೆ ಸ್ಪಷ್ಟವಾಗುತ್ತದೆ. ಕಥನಗಳೇ ದುರ್ಬಲವಾಗಿರುವುದು ಚಿತ್ರದ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments