Webdunia - Bharat's app for daily news and videos

Install App

ಪ್ರಚಾರಕ್ಕೂ ನಿಜಕ್ಕೂ ತಾಳೆಯಾಗದ 'ಯೋಗಿ'

Webdunia
ಶನಿವಾರ, 31 ಅಕ್ಟೋಬರ್ 2009 (13:57 IST)
ಕೆಲವೊಮ್ಮೆ ಹೀಗಾಗುತ್ತೆ. ಉತ್ಪನ್ನವೊಂದರ ಪ್ಯಾಕಿಂಗ್, ಅದರ ರ‌್ಯಾಪರ್, ರ‌್ಯಾಪರ್‌ನ ಬಣ್ಣ, ಅದರಲ್ಲಿ ಮಿಳಿತವಾಗಿರುವ ವಿನ್ಯಾಸಗಳು, ವಿಶಿಷ್ಟ ವಿನ್ಯಾಸದ ಅಕ್ಷರಗಳು ಇವನ್ನೆಲ್ಲಾ ನೋಡಿ ಮರುಳಾಗಿ ಅದನ್ನು ಖರೀದಿಸಿಬಿಡುತ್ತೇವೆ. ಅದನ್ನು ಬಳಸಿದಾಗಲೇ ಗೊತ್ತಾಗೋದು ಅದರ ಗುಣಮಟ್ಟ ಎಂಥಾದ್ದು ಅಂತ!!.
NRB

' ಯೋಗಿ' ಚಿತ್ರದ ವಿಮರ್ಶೆಯನ್ನು ಬರೆಯುವಾಗಲೂ ಇದೇ ಹೋಲಿಕೆ ನೆನಪಿಗೆ ಬಂದರೆ ಅದು ನಮ್ಮ ತಪ್ಪಲ್ಲ, ಚಿತ್ರವಿರುವುದೇ ಹಾಗೆ. ಚಿತ್ರದ ಬಿಡಗಡೆಗೆ ಪೂರ್ವ ಪ್ರಚಾರದಲ್ಲಿ ಅಥವಾ ಸ್ಟುಡಿಯೋ ಮೂಲದ ವರದಿಗಳಲ್ಲಿ ಇದನ್ನು ಭಾರೀಯಾಗಿ ಬಿಂಬಿಸಲಾಗಿತ್ತು. ದಾಖಲೆಯ ಪ್ರಮಾಣದ ಚಿತ್ರಮಂದಿರಗಳಲ್ಲಿ, ಅದರಲ್ಲೂ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿಕ್ಕೆ ಸಿದ್ಧವಾಗಿರುವುದನ್ನೇ ಒಂದು ಎಂಟನೇ ಅದ್ಭುತ ಎಂಬಂತೆ ಬಿಂಬಿಸಲಾಗಿತ್ತು. ಸಂಗೀತ ನಿರ್ದೇಶಕ ಎಮಿಲ್ ಅವರ ರಾಗ ಸಂಯೋಜನೆಯ ಹಾಡುಗಳೇ ಈ ಚಿತ್ರದ ಬಹುದೊಡ್ಡ ಆಸ್ತಿಯಾಗಿದ್ದು, ಅದು ಚಿತ್ರವನ್ನು ಸೂಪರ್ ಹಿಟ್ ಮಾಡುತ್ತೆ ಎಂತೆಲ್ಲಾ ಪ್ರಚಾರ ಮಾಡಲಾಗಿತ್ತು.

ಇದರಲ್ಲಿ ಕೊನೆಯ ವಾಕ್ಯಮಾತ್ರ ನಿಜ ಎಂಬುದು ಚಿತ್ರ ನೋಡಿದಾಗ ವೇದ್ಯವಾಗುತ್ತದೆ. ಸಾಮಾನ್ಯ ಕಥೆಯನ್ನುಳ್ಳ ಅಥವಾ ಸಾಮಾನ್ಯ ನಿರೂಪಣೆಯುಳ್ಳ ಇಂಥಾ ಚಿತ್ರಕ್ಕೆ ಈ ಪರಿಯ ದುಬಾರಿ ಚೌಕಟ್ಟು ಹಾಕಬೇಕಿತ್ತಾ ಅನಿಸುತ್ತೆ ಚಿತ್ರ ನೋಡಿ ಹೊರಬಂದಾಗ.
NRB

ತನ್ನ ಬಾಲ್ಯದ ಗೆಳತಿಯನ್ನು ಅರಸುತ್ತಿರುವ ಕಥಾನಾಯಕ ಯೋಗಿ ಮಾಂಸಾಹಾರಿ ಹೊಟೇಲೊಂದರಲ್ಲಿ ಸಪ್ಲೈಯರ್ ಆಗಿರುತ್ತಾನೆ. ಅಲ್ಲಿಗೆ ಅಟಕಾಯಿಸಿಕೊಳ್ಳುವ ರೌಡಿಪಡೆಯೊಂದಿಗೆ ಆಕಸ್ಮಿಕವಾಗಿ ಜಗಳಕ್ಕೆ ಇಳಿಯಬೇಕಾಗುತ್ತೆ ಯೋಗಿಗೆ. ಇದರ ಪರಿಣಾಮವಾಗಿ ಅನಿವಾರ್ಯವಾಗಿ ಮತ್ತೊಂದು ರೌಡಿ ತಂಡದೊಂದಿಗೆ ಆತ ಗುರುತಿಸಿಕೊಳ್ಳಬೇಕಾಗುತ್ತೆ. ಇಷ್ಟೇ ಕಥೆ!! ಮುಂದಿನದು ಏನೆಂದು ಯಾರು ಬೇಕಾದರೂ ಊಹಿಸಬಹುದು. ಕಥೆ-ಚಿತ್ರಕಥೆ ಹೀಗೆ ಸಾಗುತ್ತಿರುವಾಗ ಪ್ರೇಕ್ಷಕ ಮೈಮುರಿಯುತ್ತಾನೆ-ಆಕಳಿಸುತ್ತಾನೆ.

ಚಿತ್ರದಲ್ಲಿರುವ ಕಸುವು ಎಂದರೆ, ಅದು ಯೋಗಿಯ 'ಹೆಣಗಾಟಾತ್ಮಕ' ಅಭಿನಯ ಮತ್ತು ಎಮಿಲ್ ಅವರ ಸಂಗೀತ. ಚಿತ್ರಕ್ಕೆ ತನ್ನ ಕೈಲಿ ಸಾಧ್ಯವಿದ್ದಷ್ಟು ಜೀವ ತುಂಬಲು ಯೋಗೀಶ್ ಶ್ರಮವಹಿಸಿದ್ದರೆ, ಸರ್ಕಸ್ ಸೋಲಿನಿಂದ ಸುಧಾರಿಸಿಕೊಂಡಿರುವ ಎಮಿಲ್ ಹೊಚ್ಚ ಹೊಸ ಟ್ಯೂನುಗಳನ್ನು ಕೊಟ್ಟಿದ್ದಾರೆ. ಚಿತ್ರವೇನಾದರೂ ಥಿಯೇಟರ್ ಕಚ್ಚಿಕೊಂಡರೆ ಅದು ಎಮಿಲ್ ಅವರ ಸಂಗೀತದಿಂದ ಮಾತ್ರ ಎನ್ನಬಹುದು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sonu Nigam: ವಿವಾದದ ಬಳಿಕ ಸೋನು ನಿಗಂ ಕನ್ನಡ ಬೆದರಿಕೆ ಕುರಿತು ಸ್ಪಷ್ಟನೆ ಕೊಟ್ಟಿದ್ದು ಹೀಗೆ

ಕನ್ನಡತನದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಗಾಯಕ ಸೋನು ನಿಗಮ್‌ಗೆ ಸಂಕಷ್ಟ: ದೂರು ದಾಖಲು

Harshika Poonaccha: ಮಗಳಿಗೆ ದೈವಿಕ ಹೆಸರಿಟ್ಟ ಹರ್ಷಿಕಾ ಪೂಣಚ್ಚ ದಂಪತಿ

ಎಡವಟ್ಟು ಮಾಡಿಕೊಂಡ ನಟ ವಿಜಯ್​ ದೇವರಕೊಂಡ: ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದೇಕೆ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Show comments