Webdunia - Bharat's app for daily news and videos

Install App

ನರಸಿಂಹ ಚಿತ್ರವಿಮರ್ಶೆ; ಹಳೆ ಬಾಟಲಿಯಲ್ಲಿ ಹಳೆ ಮದ್ಯ

Webdunia
ಚಿತ್ರ: ನರಸಿಂಹ
ತಾರಾಗಣ: ರವಿಚಂದ್ರನ್, ನಿಕೇಶಾ ಪಟೇಲ್, ರವಿಶಂಕರ್, ಜಯಂತಿ
ನಿರ್ದೇಶನ: ಮೋಹನ್
ಸಂಗೀತ: ಹಂಸಲೇಖಾ
SUJENDRA

ಕಥೆ ಹಳೆಯದಾಗಿದ್ದರೂ, ಅದನ್ನು ಪ್ರಸಕ್ತ ಸನ್ನಿವೇಶಗಳಿಗೆ ಹೊಂದಿಸುವುದು ನಿರ್ದೇಶಕನ ಜಾಣ್ಮೆಯಷ್ಟೇ ಅಲ್ಲ, ಸಾಮಾನ್ಯ ಪ್ರೇಕ್ಷಕನ ನಿರೀಕ್ಷೆಯೂ ಹೌದು. ಆದರೆ ನಿರ್ದೇಶಕ ಮೋಹನ್ ಅಂತಹ ಯಾವುದೇ ಪ್ರಯತ್ನ ಮಾಡಿರುವ ಸುಳಿವು 'ನರಸಿಂಹ' ಚಿತ್ರದಲ್ಲಿ ಕಾಣಿಸುವುದಿಲ್ಲ. ಬದಲಿಗೆ ಬೇಕೋ ಬೇಡವೋ ಎಂಬಂತೆ ಕಾಣಿಸಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ತೀರಾ ಕೃತಕವೆನಿಸೋ ಗಡ್ಡ-ತಲೆಗೂದಲಿನಿಂದ ರಾಚುತ್ತಾರೆ.

ತಾಯಿಯ ಪ್ರೀತಿಯಿಂದ ವಂಚಿತನಾದ ನರಸಿಂಹ (ರವಿಚಂದ್ರನ್) ತಂದೆಯ ಆಶ್ರಯದಲ್ಲೇ ಬೆಳೆಯುತ್ತಾನೆ. ಆದೂ ಪಕ್ಕಾ ಸಿದ್ಧಾಂತವಾದಿಯಾಗಿ. ನೆಲದಲ್ಲೇ ಮಲಗೋದು, ರಾಗಿ ಮುದ್ದೆಯನ್ನೇ ತಿನ್ನೋದು, ಸತ್ಯ ಹರಿಶ್ಚಂದ್ರನ ತುಂಡಿನಂತೆ ನಡೆದುಕೊಳ್ಳೋದು ನರಸಿಂಹನ ಟ್ರೇಡ್ ಮಾರ್ಕ್. ಇವುಗಳ ಜತೆ ಆತನಲ್ಲಿ ವಿಚಿತ್ರ ಗುಣಗಳೂ ಇರುತ್ತವೆ. ನಾಯಕಿಯಲ್ಲಿ ಸರಸ ಆಡದೇ ಇರುವ ಮತ್ತು ಆಕೆಯನ್ನು ತಾಯಿಯಂತೆ ನೋಡುವುದೂ ಇವುಗಳಲ್ಲೊಂದು!

ಹೀಗೆ ಎಲ್ಲದರಲ್ಲೂ ಪ್ರಬಲನಾಗಿ ಬೆಳೆಯುವ ನರಸಿಂಹನಿಗೆ ಊರಿನಲ್ಲೇ ಉಗ್ರಪ್ಪನೆಂಬ (ರವಿಶಂಕರ್) ಎದುರಾಳಿ ಹುಟ್ಟಿಕೊಳ್ಳುತ್ತಾನೆ. ಊರಿನ ನಿಯಮವನ್ನು ಪಾಲಿಸದೇ ಭಂಡತನ ಪ್ರದರ್ಶಿಸಿ ಸೋತ ಆತನಿಗೆ ನರಸಿಂಹನ ಮೇಲೆ ಕೋಪ. ಅದು ಸೇಡಾಗಿ ಪರಿವರ್ತನೆಯಾಗುತ್ತದೆ.

ಈ ನಡುವೆ ಅಪ್ಪನಿಗೆ ಇನ್ನೊಂದು ಮದುವೆಯಾಗಿರುವ ಸಂಗತಿ ನರಸಿಂಹನಿಗೆ ಗೊತ್ತಾಗುತ್ತದೆ. ಜನ್ಮದಾತನನ್ನೇ ಮುಗಿಸಲೂ ನಿರ್ಧರಿಸುತ್ತಾನೆ. ಆದರೆ ಅಷ್ಟರಲ್ಲೇ ಅಪ್ಪ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಮಲಮಗಳಿಗೆ ನರಸಿಂಹ ಆಶ್ರಯ ನೀಡುತ್ತಿದ್ದಂತೆ, ಆಕೆಗೆ ಉಗ್ರಪ್ಪನೊಂದಿಗೆ ಇರೋ ಪ್ರೀತಿ ಗೊತ್ತಾಗುತ್ತದೆ. ಈ ನಡುವೆ ಬರುವವಳು ವರ್ಷಾ (ನಿಕೇಶಾ ಪಟೇಲ್). ನರಸಿಂಹ ಪೀಕಲಾಟ ಎದುರಿಸೋದು ಕೂಡ ಅವಳಿಂದಲೇ. ಆಕೆಯ ಪ್ರೀತಿಯಲ್ಲಿ ನರಸಿಂಹ ಏನಾಗುತ್ತಾನೆ, ಉಗ್ರಪ್ಪನ ಸೇಡು ಎಲ್ಲಿಗೆ ತಲುಪುತ್ತದೆ ಅನ್ನೋದಷ್ಟೇ ಉಳಿದ ಕಥೆ.

ದಶಕಗಳ ಹಿಂದೆ ತೆಲುಗಿನಲ್ಲಿ ಬಂದ 'ಸಿಂಹರಾಶಿ'ಯ ಪಕ್ಕಾ ಪಡಿಯಚ್ಚು 'ನರಸಿಂಹ'. ಅದೇ ಕಥೆಯನ್ನು ಒಂಚೂರೂ ಬದಲಾಯಿಸದೆ, ಎಲ್ಲಾ ಕ್ರೆಡಿಟ್‌ಗಳನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ ಮೋಹನ್. ಎರಡನೇ ಚಿತ್ರದಲ್ಲೂ ಅವರು ಕಲಿತಂತೆ ಕಾಣುತ್ತಿಲ್ಲ, ಬಲಿಯಲು ಇನ್ನೂ ಒಂದಷ್ಟು ಚಿತ್ರಗಳು ಬೇಕಾಗಬಹುದು.

ಇನ್ನು ಭಾರೀ ನಿರೀಕ್ಷೆ ಹುಟ್ಟಿಸಿದ್ದ ಪ್ರೇಮಲೋಕದ ಪ್ರೇಮಿಗಳ ಮ್ಯಾಜಿಕ್ ಕೆಲಸ ಮಾಡಿಲ್ಲ. ರವಿಚಂದ್ರನ್ ಎಲ್ಲೋ, ಹಂಸಲೇಖಾ ಎಲ್ಲೋ ಎಂಬಂತಿದೆ. ರವಿಚಂದ್ರನ್ ಅವರಂತೂ ಹಲವು ಫ್ರೇಮುಗಳಲ್ಲಿ ಅನ್ಯಮನಸ್ಕರಾಗಿ ಕಾಣುತ್ತಾರೆ. ಆದರೂ ಅವರ ಮಾತಿನ ಶೈಲಿ ಇಷ್ಟವಾಗುತ್ತದೆ.

ನಿಕೇಶಾ ಪಟೇಲ್ 'ದಹನ ದಹನ' ಹಾಡಿನಲ್ಲಿ ಪ್ರೇಕ್ಷಕರನ್ನು ದಹಿಸುತ್ತಾರೆ. ಸಂಜನಾ ಒಂದು ತುಂಡು ಹಾಡು, ಮತ್ತು ತುಂಡು ದೃಶ್ಯದಲ್ಲಿ ಬಂದು ಹೋಗುತ್ತಾರೆ. ಇವರೆಲ್ಲರಿಗಿಂತ ಹೆಚ್ಚು ಗಮನ ಸೆಳೆಯೋದು ರವಿಶಂಕರ್. ಉಗ್ರಪ್ಪನ ಪಾತ್ರದಲ್ಲವರು ಬೊಂಬಾಟ್.

ಇಷ್ಟು ಹೇಳಿದ ನಂತರವೂ ಚಿತ್ರವನ್ನು ನೋಡೋದು ನಿಮಗೆ ಬಿಟ್ಟದ್ದು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments