Webdunia - Bharat's app for daily news and videos

Install App

ನಕ್ಕು ಹಗುರಾಗಲು ಐತಲಕ್ಕಡಿ ನೋಡಿ, ಮಜಾ ಮಾಡಿ

Webdunia
MOKSHA
ಹಾಸ್ಯಕ್ಕೆ ಹೇಳಿ ಮಾಡಿಸಿದ ಚಿತ್ರ. ಹಾಸ್ಯಪ್ರಿಯರು, ಮೆಚ್ಚುವವರು ಮಾತ್ರವಲ್ಲ, ವಿರೋಧಿಸುವವರೂ ಒಮ್ಮೆ ನೋಡಬೇಕು. ಅಷ್ಟು ಚೆನ್ನಾಗಿದೆ ಐತಲಕ್ಕಡಿ.

ಸಕುಟುಂಬ ಸಪರಿವಾರ ಸಮೇತರಾಗಿ ಒಂದು ಸಂಜೆ ಹಾಯಾಗಿ ನೋಡಿ ಮನಸ್ಸಿನ ಎಲ್ಲ ದುಗುಡ ಕಳೆದು ನಕ್ಕು ಹಗುರಾಗಲು ಈ ಚಿತ್ರ ನೋಡಲೇಬೇಕು.

ಚಿತ್ರ ಕುಟೀರ ಸಂಸ್ಥೆ ನಿರ್ಮಿಸಿರುವ ಈ ಚಿತ್ರದಲ್ಲಿ 108 ಮಂದಿ ಹಾಸ್ಯ ಕಲಾವಿದರನ್ನು ಸೇರಿಸಿ, ಚಿತ್ರ ಮುಗಿಯುವವರೆಗೂ ನೆನಪಿನಲ್ಲಿ ಉಳಿಯುವಂತೆ ಮಾಡಿಸುವಲ್ಲಿ ಬುಲೆಟ್ ಪ್ರಕಾಶ್ ಯಶಸ್ವಿಯಾಗಿದ್ದಾರೆ. ಇದೊಂದು ಅಪರೂಪದ ಚಿತ್ರವಾಗಿದ್ದು ಎಲ್ಲರಿಗೂ ಹಿಡಿಸುವಂತಿದೆ.

ರಂಗಾಯಣ ರಘು, ಬುಲೆಟ್ ಪ್ರಕಾಶ್ ಅಭಿನಯ ಅತ್ಯುತ್ತಮ. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್, ದುನಿಯಾ ವಿಜಯ್, ಸುದೀಪ್, ನವರಸನಾಯಕ ಜಗ್ಗೇಶ್, ವಿಜಯ್ ರಾಘವೇಂದ್ರ ಎಂಬ ಐವರು ಜನಪ್ರಿಯ ನಾಯಕರು ಮುದ್ದಾಗಿ ಬಂದು ಹೋಗುತ್ತಾರೆ. ನಟಿ ನೀತು ಹಾಡು, ಕುಣಿತ ಅಭಿನಯಕ್ಕೆ ಸೈ ಅನ್ನಿಸಿಕೊಳ್ಳುತ್ತಾರೆ.

ಕಲಾವಿದರು ಹಾಗೂ ತಂತ್ರಜ್ಞರ ಪ್ರಯತ್ನದ ಫಲವಾಗಿ ಚಿತ್ರ ಗೆದ್ದಿದೆ ಎನ್ನಬಹುದು. ಸಾದು ಸಂಗೀತ ಸಹ್ಯವಾಗಿದೆ. ಜೆ.ಜೆ. ಕೃಷ್ಣ ಕಥೆ, ಚಿತ್ರಕಥೆಯನ್ನು ಉತ್ತಮವಾಗಿ ರಚಿಸಿದ್ದಾರೆ. ಛಾಯಾಗ್ರಹಣ ಹಾಗೂ ನಿರ್ದೇಶನದ ಹೊಣೆಯನ್ನೂ ಇವರೇ ಹೊತ್ತಿದ್ದು, ಎಲ್ಲಾ ಕಡೆ ಗೆದ್ದಿದ್ದಾರೆ. ಆರ್.ಡಿ. ರವಿ ಸಂಕಲನ ಚೆನ್ನಾಗಿದೆ. ತುಷಾರ್ ರಂಗನಾಥ್ ಸಂಭಾಷಣೆಯೂ ಅಡ್ಡಿ ಇಲ್ಲ. ಉತ್ತಮ ಅಭಿನಯದಿಂದ ಚಿತ್ರ ಗೆದ್ದಿರುವಲ್ಲಿ ಸಂಶಯವಿಲ್ಲ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments