ದೇವ್ ಬದುಕಲ್ಲಿ ಕಾವ್ಯ ಹೊಸ ಕಾವ್ಯ ಬರೆಯುತ್ತಾಳೆ. ಬೀದಿಗೆ ಬಂದವನು ಆಕೆಯ ಮನೆ ಸೇರುತ್ತಾನೆ. ಆಕೆಯನ್ನು ನೋಡಿ ಬದಲಾಗುತ್ತಾನೆ. ಜವಾಬ್ದಾರಿ ಅರಿತುಕೊಳ್ಳುತ್ತಾನೆ. ಕೊನೆಗೆ ಅಂದುಕೊಂಡಂತೆ ಹೀರೋ ಕೂಡ ಆಗುತ್ತಾನೆ. ಅಪ್ಪನ ಮುಂದೆ ಬಂದು ಮೊದಲ ಸಂಪಾದನೆಯ ದುಡ್ಡನ್ನು ಹರವುತ್ತಾನೆ.
ಮುದ್ದೇಗೌಡರ ಮುಂದೆ ಮಗ ಗೆಲ್ಲುತ್ತಾನೆ. ದೇವ್ ಮುಂದೆ ಆತನ ಅಪ್ಪ ಸೋಲುತ್ತಾರೆ!
ಕಥೆಯೇ ಮೈನಸ್ ಪಾಯಿಂಟ್, ಚಿತ್ರಕಥೆ ಬಿಗಿಯಾಗಿಲ್ಲ, ಸಂಭಾಷಣೆಯಲ್ಲಿ ಚುರುಕು ಬೇಕಾಗಿತ್ತು ಅನ್ನೋ ದೂರುಗಳ ನಡುವೆ ಇಂದ್ರಜಿತ್ ಲಂಕೇಶ್‌ರನ್ನು ಹೊಗಳಲು ಕಾರಣಗಳಿವೆ. ಬೇರೆ ಯಾವುದೇ ನಿರ್ದೇಶಕರಿಗೆ ಸಾಧ್ಯವಿಲ್ಲದ ರೀತಿಯಲ್ಲಿ ಚಿತ್ರವನ್ನು ಸ್ಟೈಲಿಶ್ ಆಗಿ ಪ್ರೆಸೆಂಟ್ ಮಾಡಿದ್ದಾರೆ. ಪ್ರತಿ ಫ್ರೇಮೂ ಶ್ರೀಮಂತವಾಗಿದೆ. ನಾಯಕ-ನಾಯಕಿಯರನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾ ಅದ್ಭುತವಾಗಿದೆ. ದಿಗಂತ್ ತುಂಬಾ ಮುದ್ದಾಗಿ ಕಾಣುತ್ತಾರೆ. ಕೆಲವು ಕಡೆ ಆಲಸಿಯಂತೆ ಕಂಡರೂ, ಪಾತ್ರಕ್ಕೆ ಮೋಸ ಮಾಡಿದಂತಿಲ್ಲ. ನಾಯಕಿ ಚಾರ್ಮಿ ಓಕೆ. ಅನಂತ್ ನಾಗ್ ಎಂದಿನಂತೆ ಸಾದಾ ಸೀದಾ. ರಾಜು ತಾಳಿಕೋಟೆ, ತಬಲಾ ನಾಣಿ, ಸ್ವಯಂವರ ಚಂದ್ರು ಆಗಾಗ ಬಂದು ನಗಿಸುತ್ತಾರೆ.
ಇಂದ್ರಜಿತ್ ಲಂಕೇಶ್ ಸ್ಟೈಲಿಶ್ ಸಿನಿಮಾ ಮಾಡೋದು ಓಕೆ, ಆದ್ರೆ ಕಥೆ-ಚಿತ್ರಕಥೆ ಸರಿಯಿರೋದಿಲ್ಲ ಯಾಕೆ?