Webdunia - Bharat's app for daily news and videos

Install App

ಛತ್ರಿಗಳು ಸಾರ್ ಛತ್ರಿಗಳು ವಿಮರ್ಶೆ: ತ್ರಿಮೂರ್ತಿಗಳಿಂದ ನಗೆ ಬಾಂಬ್!

Webdunia
ಸೋಮವಾರ, 22 ಏಪ್ರಿಲ್ 2013 (13:26 IST)
PR
PR
ಚಿತ್ರ: ಛತ್ರಿಗಳು ಸಾರ್ ಛತ್ರಿಗಳು
ತಾರಾಗಣ: ನಾರಾಯಣ್, ರಮೇಶ್, ಮೋಹನ್, ಸಾಧು ಕೋಕಿಲಾ, ಉಮಾಶ್ರೀ
ನಿರ್ದೇಶನ: ಎಸ್. ನಾರಾಯಣ್
ಸಂಗೀತ: ಅರ್ಜುನ್ ಜನ್ಯ

ಬಣ್ಣದ ಲೋಕದ ಸಹವಾಸ ಬೇಡವೆಂದು ತೀರಾ ಭಾವುಕರಾಗಿ, ನೊಂದು ದೂರ ಹೋಗಿದ್ದ ಎಸ್. ನಾರಾಯಣ್ ಮರಳಿದ್ದಾರೆ. ಅದೇ ಲವ್ ಸ್ಟೋರಿ, ಕೌಟುಂಬಿಕ ಡ್ರಾಮಾ ಸಿನಿಮಾಗಳನ್ನು ತೋರಿಸಿ ಬೀಗುತ್ತಾ ಕಳೆದು ಹೋಗಿದ್ದವರು ಈ ಬಾರಿ ಹಾಸ್ಯ ರಸಾಯಣದೊಂದಿಗೆ ಬಂದಿದ್ದಾರೆ. ಕತ್ತೆಗಳು ಸಾರ್ ಕತ್ತೆಗಳು, ಕೋತಿಗಳು ಸಾರ್ ಕೋತಿಗಳು, ಕುರಿಗಳು ಸಾರ್ ಕುರಿಗಳು ನಿರ್ದೇಶಿಸಿದ್ದ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹೆಸರಿಗೆ ಯಾವುದೇ ಕಳಂಕವಾಗದಂತೆ ಸರಣಿಯನ್ನು ನಾರಾಯಣ್ ಮುಂದುವರಿಸಿದ್ದಾರೆ.

ಈ ಹಿಂದಿನ ಸರಣಿಯಂತೆ ಮತ್ತು ಬಹುತೇಕ ಹಾಸ್ಯ ಚಿತ್ರಗಳಲ್ಲಿರುವಂತೆ ಇಲ್ಲೂ ಅದ್ಭುತ ಕಥೆಯೇನೂ ಇಲ್ಲ. ಆದರೆ ಹಾಸ್ಯ ಚಿತ್ರಕ್ಕೆ ಅಗತ್ಯವಿರುವ ಅಂಶಗಳನ್ನು ರಮೇಶ್ ಅರವಿಂದ್ ತನ್ನ ಕಥೆಯಲ್ಲಿ ಸೇರಿಸಿದ್ದಾರೆ. ಅದಕ್ಕೆ ತಕ್ಕ ಚಿತ್ರಕಥೆ ಬರೆದಿರುವುದು ರಮಣಿ. ನಿರ್ದೇಶನದ ಜವಾಬ್ದಾರಿ ಮಾತ್ರ ನಾರಾಯಣ್ ಅವರದ್ದು.

ಮೂವರು ನಿರುದ್ಯೋಗಿಗಳು ಹಣದ ಹಿಂದೆ ಬೀಳುವುದನ್ನೇ ಎರಡೂವರೆ ಗಂಟೆ ಸುತ್ತಲಾಗಿದೆ. ಆದರೆ ಎಲ್ಲೂ ಪ್ರೇಕ್ಷಕರು ಬೋರ್ ಆಗದ ಹಾಗೆ ಚಿತ್ರಕಥೆ ಹೆಣೆದಿರುವುದು ಹೆಗ್ಗಳಿಕೆ. ಹೆಚ್ಚು ಕಡಿಮೆ ಪ್ರತಿ ದೃಶ್ಯಗಳಲ್ಲೂ ಪ್ರೇಕ್ಷಕರು ಬಿದ್ದು ಬಿದ್ದು ನಗುತ್ತಾರೆ. ಆಗಿರುವ ಒಂದೇ ಒಂದು ಹಿನ್ನಡೆ, ಡಬಲ್ ಮೀನಿಂಗ್ ಡೈಲಾಗುಗಳು. ನಾರಾಯಣ್‌ರನ್ನು ಟೀಕಿಸುವ ಶೈಲಿಯಲ್ಲೇ ಹೇಳಬೇಕೆಂದರೆ ಟಾಯ್ಲೆಟ್ ಜೋಕ್ಸ್.

ರಮ್ಮಿ, ನಾಣಿ, ಮೋನಿಯ ಸುತ್ತ ಸುತ್ತುವ ಕಥೆ ವೇಗವಾಗಿ ಸಾಗುತ್ತದೆ. ಒಂದಷ್ಟು ಘಟನೆಗಳನ್ನು ಹಿಡಿದುಕೊಂಡು ಮಾಡಿರುವ ಚಿತ್ರದಲ್ಲಿ ಮನರಂಜನೆಯೇ ಉದ್ದೇಶವಾಗಿರುವುದರಿಂದ ಹೆಚ್ಚು ತಲೆ ಕೆಡಿಸಿಕೊಳ್ಳದೆ ನಗುವ ಹಾದಿಯನ್ನು ಪ್ರೇಕ್ಷಕರು ನೆಚ್ಚಿಕೊಳ್ಳುವುದು ಉತ್ತಮ.

ನಾರಾಯಣ್, ರಮೇಶ್ ಅರವಿಂದ್, ಮೋಹನ್ ಈ ಹಿಂದಿನ ಸರಣಿ ಚಿತ್ರಗಳಲ್ಲಿ ಇದ್ದಂತೆ ಇಲ್ಲೂ ಸಿಕ್ಕಾಪಟ್ಟೆ ನಗಿಸುತ್ತಾರೆ. ಅವರ ನಟನೆ ಬಗ್ಗೆ ಎರಡನೇ ಮಾತೇ ಇಲ್ಲ. ನಾಯಕಿಯರಾದ ಸನಾತಿನಿ, ಸುಷ್ಮಾ ರಾಜ್ ಮತ್ತು ಮಾನಸಿ ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿಕೊಂಡಿದ್ದಾರೆ. ಇನ್ನೊಬ್ಬ ನಾಯಕಿ ಪವಿತ್ರಾ ಗೌಡರಿಗೆ ಅವಕಾಶವೇ ಕಡಿಮೆ.

ರಾಜಮಂಡ್ರಿ ರಾಜಲಕ್ಷ್ಮಿಯಾಗಿ ಉಮಾಶ್ರೀ ಬೊಂಬಾಟ್. ಇವರ ಪತಿಯಾಗಿ ಶಿವರಾಮಣ್ಣ ಚೆನ್ನಾಗಿ ನಟಿಸಿದ್ದಾರೆ. ಸಾಧು ಕೋಕಿಲಾರಂತೂ ಹೆಜ್ಜೆ ಹೆಜ್ಜೆಗೂ ನಗಿಸುತ್ತಾರೆ. ಬುಲೆಟ್ ಪ್ರಕಾಶ್, ರಂಗಾಯಣ ರಘು ಓಕೆ.

ಹಾಸ್ಯ ಚಿತ್ರವಾಗಿರುವುದರಿಂದ ಅರ್ಜುನ್ ಜನ್ಯ ಸಂಗೀತ, ಜಗದೀಶ್ ವಾಲಿ ಛಾಯಾಗ್ರಹಣ ಹೆಚ್ಚು ಗಮನ ಸೆಳೆದಿಲ್ಲ.

ಶುಕ್ರವಾರವಷ್ಟೇ 'ಪರಾರಿ' ಬಿಡುಗಡೆಯಾಗಿತ್ತು. ಶನಿವಾರ 'ಛತ್ರಿಗಳು ಸಾರ್ ಛತ್ರಿಗಳು' ಬಿಡುಗಡೆಯಾಗಿದೆ. ಎರಡೂ ವಯಸ್ಕರು ಮಾತ್ರವೇ ನೋಡಬಹುದಾದ ಸಿನಿಮಾಗಳು. ಸ್ವಚ್ಛಂದವಾಗಿ ನಗುವ ಅವಕಾಶವಿದ್ದರೂ, ಮಕ್ಕಳು, ಕುಟುಂಬ ಸಮೇತ ನೋಡಲಾಗದ ಸಂದಿಗ್ಧತೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?