Webdunia - Bharat's app for daily news and videos

Install App

ಚಿತ್ರವಿಮರ್ಶೆ: ಮಾಲಾಶ್ರೀ ಅದ್ದೂರಿ 'ವೀರ' ಆಕ್ಷನ್ ಬಲು ಜೋರು!

Webdunia
PR
ಚಿತ್ರ: ವೀರ
ತಾರಾಗಣ: ಮಾಲಾಶ್ರೀ, ಕೋಮಲ್ ಕುಮಾರ್, ಆಶಿಶ್ ವಿದ್ಯಾರ್ಥಿ, ರಾಹುಲ್ ದೇವ್, ಮುಕುಲ್, ಸಿ.ಆರ್. ಸಿಂಹ
ನಿರ್ದೇಶನ: ಅಯ್ಯಪ್ಪ ಶರ್ಮಾ
ಸಂಗೀತ: ಹಂಸಲೇಖ

ಮಾಲಾಶ್ರೀ ಸಿನಿಮಾ ಎಷ್ಟೇ ಅದ್ದೂರಿಯಾಗಿದ್ದರೂ, ಯಾರೇ ನಿರ್ದೇಶಿಸಿದರೂ ಸಿದ್ಧಸೂತ್ರಗಳಿಂದ ಹೊರಗೆ ಬರುವುದಿಲ್ಲ ಎನ್ನುವುದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಇಲ್ಲಿ ಕಾಣಸಿಗುವ ಹೆಚ್ಚುಗಾರಿಕೆ ಇಡೀ ಸಿನಿಮಾ ಶ್ರೀಮಂತವಾಗಿರುವುದು ಮಾತ್ರ!

ಹಾಗೆಂದು 'ವೀರ' ಕೆಟ್ಟ ಸಿನಿಮಾ ಎಂದು ಹೇಳಲಾಗದು. ಉತ್ತಮ ಸಿನಿಮಾವೇ. ಆದರೆ ನಿರೀಕ್ಷಿತ ಪಾತ್ರ ಕುತೂಹಲ ಕೆರಳಿಸುವುದಿಲ್ಲ. ಒಂದು ಚೌಕಟ್ಟಿನೊಳಗಿನ ಕಥೆಯನ್ನು ದೃಶ್ಯ ರೂಪಕ್ಕೆ ಇಳಿಸುವ ಹೊಣೆಗಾರಿಕೆಯಲ್ಲಿ ನಿರ್ದೇಶಕರಿಗೂ ಹೆಚ್ಚು ಕೆಲಸವಿದೆ ಎಂದೆನಿಸುವುದಿಲ್ಲ. ಇಲ್ಲೇನಿದ್ದರೂ ಸಾಹಸ ನಿರ್ದೇಶಕರೇ ಕ್ಯಾಪ್ಟನ್.

ಚಿತ್ರದಲ್ಲಿ ಮಾಲಾಶ್ರೀ ಅವರದ್ದು ಸೆಂಟರ್ ಪಾಯಿಂಟ್ ಪಾತ್ರ. ವೀರಲಕ್ಷ್ಮಿ ಮತ್ತು ಮಾಲಿನಿ ಅಯ್ಯರ್ ಎಂಬ ಎರಡು ಪಾತ್ರಗಳಲ್ಲಿ ನಟಿಸಿ, ಆಕ್ಷನ್ ಪ್ರಿಯರು ಮತ್ತು ಕೌಟುಂಬಿಕ ಪ್ರೇಕ್ಷಕರನ್ನು ಸರಿದೂಗಿಸಲು ಯತ್ನಿಸಿದ್ದಾರೆ. ನಿಜಗುಟ್ಟು ಏನೆಂಬುದು ತಿಳಿಯುವಾಗ ಚಿತ್ರ ಮುಗಿಯುವ ಹಂತಕ್ಕೆ ಬಂದಿರುತ್ತದೆ.

ಹೊಡೆದಾಟವೇ ಸಿಂಗಲ್ ಅಜೆಂಡಾ ಎಂಬಂತೆ ಮಾಲಾಶ್ರೀ ಅವರನ್ನು ಬಿಂಬಿಸಲಾಗಿದೆ. ಪ್ರತಿದೃಶ್ಯದಲ್ಲೂ ಹೊಡೆ-ಬಡಿಯೇ ಕಾಣುತ್ತದೆ. ಆದರೆ ಯಾವುದೂ ಸಿಲ್ಲಿ ಎನಿಸುವುದಿಲ್ಲ. ಪ್ರತಿ ಆಕ್ಷನ್ ದೃಶ್ಯಗಳು ರಸದೂಟವಾಗುತ್ತವೆ. ನಿರ್ಮಾಪಕ ರಾಮು ಖರ್ಚು ಮಾಡಿರುವ ಪೈಸೆ ಪೈಸೆಯೂ ಕಾಣಸಿಗುತ್ತದೆ. ಹಾಗಾಗಿ ತಾಂತ್ರಿಕ ರೀತಿಯಲ್ಲಿ ಚಿತ್ರ ನಿಜಕ್ಕೂ ಉತ್ತಮ.

ಸಾಮಾನ್ಯವಾಗಿ ಕನ್ನಡ ಚಿತ್ರಗಳಲ್ಲಿ ವಿದೇಶಿ ಚಿತ್ರೀಕರಣವೆಂದರೆ ಹಾಡುಗಳಿಗೆ ಸೀಮಿತ. ಆದರೆ ಇಲ್ಲಿ ಹಾಗಲ್ಲ. ಮಾತುಗಳ ಭಾಗ, ಆಕ್ಷನ್ ದೃಶ್ಯಗಳನ್ನೂ ವಿದೇಶಿ ನೆಲದಲ್ಲೇ ಚಿತ್ರೀಕರಿಸಿ ಅದ್ದೂರಿತನ ಮೆರೆಯಲಾಗಿದೆ.

ಇನ್ನು ಎರಡೂ ಪಾತ್ರಗಳಿಗೆ ಮಾಲಾಶ್ರೀ ಜೀವ ತುಂಬಿದ್ದರೂ, ಧ್ವನಿಯಲ್ಲಿ ಜೀವಂತಿಕೆ ಕಾಣುವುದಿಲ್ಲ. ಅವರಿಗೆ ಮೊದಲ ಬಾರಿ ಕೋಮಲ್ ನಾಯಕನಾಗಿರುವುದು ವಿಶೇಷ. ಇಬ್ಬರ ನಡುವೆ ರೊಮ್ಯಾಂಟಿಕ್ ದೃಶ್ಯಗಳು ಬಿಡಿ, ಪರಸ್ಪರ ಪ್ರೀತಿಯ ಮಾತುಗಳೂ ಕಾಣುವುದಿಲ್ಲ. ಮಾಲಾಶ್ರೀ ಪುತ್ರಿ ಅನನ್ಯಾ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾಳೆ.

ಆಶಿಶ್ ವಿದ್ಯಾರ್ಥಿ ಖಳನ ಪಾತ್ರದಿಂದ ಬಡ್ತಿ ಪಡೆದಿದ್ದಾರೆ. ಉಳಿದ ಮುಂಬೈ ಖಳನಟರು ಗಮನ ಸೆಳೆಯುಂತಿಲ್ಲ. ಹಂಸಲೇಖಾ ಸಂಗೀತವೂ ಕೇಳುವಂತಿಲ್ಲ. ಉಳಿದ ವಿಭಾಗಗಳನ್ನು ನಮೂದಿಸಲೇಬೇಕು ಎಂಬಂತಹ ನಿರ್ವಹಣೆ ಕಾಣುತ್ತಿಲ್ಲ.

ಒಟ್ಟಾರೆ ಎಂದಿನಂತೆ ಈ ಹಿಂದಿನ ಮಾಲಾಶ್ರೀ ಸಿನಿಮಾಗಳ ನೆರಳನ್ನೇ ಅದ್ಧೂರಿಯಾಗಿ ಈ ಚಿತ್ರದಲ್ಲಿ ನೋಡಬಹುದು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

Show comments