Webdunia - Bharat's app for daily news and videos

Install App

ಗೌಡ ವರ್ಸಸ್ ರೆಡ್ಡಿ; ಹೆಸರಷ್ಟೇ ಗಿಮಿಕ್, ಪ್ರೇಕ್ಷಕರಿಗೆ ನಿರಾಸೆ

Webdunia
PR
ಚಿತ್ರ: ರಾಮೇ ಗೌಡ ವರ್ಸಸ್ ಕೃಷ್ಣೇ ಗೌಡ
ತಾರಾಗಣ: ಅನಂತ್‌ನಾಗ್, ರಂಗಾಯಣ ರಘು, ಶಶಿಕುಮಾರ್, ಸುಧಾ ಬೆಳವಾಡಿ
ನಿರ್ದೇಶನ: ಟಿ.ಎನ್. ನಾಗೇಶ್
ಸಂಗೀತ: ಕೃಷ್ಣವರ್ಧನ್ ಕುಲಕರ್ಣಿ

ಯಾರದೋ ನಿವೇಶನ, ಮತ್ಯಾರೋ ಬೇಲಿ ಹಾಕಿಕೊಂಡು ನಿಜವಾದ ಮಾಲೀಕರನ್ನೇ ಏಮಾರಿಸುವ ರಿಯಲ್ ಎಸ್ಟೇಟ್ ಉದ್ಯಮದ ಎಳೆಯ ಸುತ್ತ ಸುತ್ತುವ ಕಥೆ ರಾಮೇಗೌಡ ವರ್ಸಸ್ ಕೃಷ್ಣೇಗೌಡ. ಕೇವಲ ಹೆಸರಿನಲ್ಲಷ್ಟೇ ಗಿಮಿಕ್ ಮಾಡಿರುವ ಚಿತ್ರ ಪ್ರೇಕ್ಷಕರ ಇಚ್ಛೆಯನ್ನು ಪೂರ್ಣಗೊಳಿಸುವುದರಲ್ಲಿ ಸೋತಿದೆ. ಮೂಲತಃ ಹಿಂದಿ ಚಿತ್ರ 'ಖೋಸ್ಲಾ ಕಾ ಗೋಸ್ಲಾ' ಕನ್ನಡ ಅವತರಣಿಕೆ ಇದು.

ಈ ಸಾಮಾನ್ಯ ಎಳೆಯನ್ನಿಟ್ಟುಕೊಂಡು ಸರಿಯಾಗಿ ಪೋಣಿಸಲು ಸೋತಿರುವ ನಿರ್ದೇಶಕ ಟಿ.ಎನ್. ನಾಗೇಶ್ ಬರೀ ರೀಲ್ ಸುತ್ತಿದ್ದಾರೆ ಎನಿಸುತ್ತದೆ. ಚಿತ್ರ ಕೇವಲ ನಾಟಕೀಯ ಎನಿಸುತ್ತದೆ. ಕಥೆಯನ್ನು ಸರಿಯಾಗಿ ಪೋಣಿಸಲು ಸಾಧ್ಯವಾಗದೆ ಸೊರಗಿದಂತಿದೆ.

ಮಗಳು ವೇದ (ರೂಪಶ್ರೀ) ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ತನ್ನ ನಿವೇಶನ ಮಾರಲು ಹೋಗುವ ಸುಬ್ಬಣ್ಣನಿಗೆ (ಅನಂತ್‌ನಾಗ್) ತನ್ನ ಜಾಗವನ್ನು ಬೇರೋಬ್ಬರು ಆಕ್ರಮಿಸಿರುವ ಸಂಗತಿ ತಿಳಿದು ಕಂಗಾಲಾಗುತ್ತಾನೆ. ತನ್ನ ಜಾಗವನ್ನು ಪಡೆಯಲು ಮನೆಯ ಮಗನಂತಿರುವ ಸಿದ್ದು (ರೂಪೇಶ್) ಜತೆಗೂಡಿ ಹಲವು ಕಸರತ್ತು ನಡೆಸುತ್ತಾನೆ. ಆದರೆ, ಯಾವುದೂ ಈಡೇರುವುದಿಲ್ಲ ಎಂದು ತಿಳಿದು ಕೈಕಟ್ಟಿ ಕೂರುತ್ತಾನೆ.

ಅಮಾಯಕ ಸುಬ್ಬಣ್ಣನ ನೆರವಿಗೆ ರಾಮೇಗೌಡ (ಶಶಿಕುಮಾರ್) ಬರುತ್ತಾನೆ. ಅಮಾಯಕ ಜನರ ನಿವೇಶನಗಳಿಗೆ ಬೇಲಿ ಹಾಕಿಕೊಂಡು ಯಾಮಾರಿಸುವ ಕೃಷ್ಣರೆಡ್ಡಿ (ರಂಗಾಯಣ ರಘು) ಆತನ ಸಮಸ್ಯೆಗಳನ್ನು ಅರಿತು ಯಾಮಾರಿಸುವುದೇ ಚಿತ್ರದ ತಿರುಳು.

ಚಿತ್ರದ ಕಥೆ, ಚಿತ್ರಕಥೆ, ನಿರೂಪಣೆಯಲ್ಲಿ ಬಹಳವಾಗಿ ಸೊರಗಿದ್ದಾರೆ ನಿರ್ದೇಶಕ ಟಿ.ಎನ್. ನಾಗೇಶ್. ಅನಂತ್‌ನಾಗ್ ಅಮಾಯಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಂಗಾಯಣ ರಘು ಪಾತ್ರಕ್ಕೆ ಬೇಕಿರುವುದಕ್ಕಿಂತ ಕೊಂಚ ಜಾಸ್ತಿಯಾಗಿ ನಟಿಸಿ ಎಡವಿದ್ದಾರೆ. ಶಶಿಕುಮಾರ್ ಪಾತ್ರದಲ್ಲಿ ಲವಲವಿಕೆ ಕಂಡುಬಂದಿದೆ.

ಜೈ ಆನಂದ್ ಛಾಯಾಗ್ರಹಣ, ನರಹಳ್ಳಿ ಜ್ಞಾನೇಶ್ ಅವರ ಸಂಕಲನ ಚಿತ್ರಕ್ಕಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments