Webdunia - Bharat's app for daily news and videos

Install App

ಕಿತ್ತೋಗಿರೋ ಲವ್‌ಸ್ಟೋರಿಯಾದ್ರೂ ನೋಡಬಹುದು!

Webdunia
MOKSHA
ಯಾವುದೇ ಲವ್ ಸ್ಟೋರಿಯಲ್ಲೂ ಹೆಚ್ಚಿಗೆ ಹೊಸತೇನೂ ಇರುವುದಿಲ್ಲ. ಬದಲಾಗಿ ಲವ್ ಸ್ಟೋರಿ ಚಿತ್ರಗಳು ಗೆಲ್ಲುವುದು ಈ ಚಿತ್ರದ ಕಥೆಯನ್ನು ನಿರೂಪಿಸಿದ ರೀತಿ, ಕ್ಯಾಮರಾ ಕೈಚಳಕ, ಸಂಭಾಷಣೆ, ಹಾಡುಗಳ ಮೇಲೆ. ಹೊಸ ನಿರ್ದೇಶಕ ಅರವಿಂದ್ ಕೌಶಿಕ್ ಅಂಥದ್ದೇ ಒಂದು ಪ್ರಯತ್ನ ಮಾಡಿದ್ದಾರೆ ಎಂದರೆ ತಪ್ಪಲ್ಲ.

ನಮ್ ಏರಿಯಾಲ್ ಒಂದಿನ ಚಿತ್ರ ಸುದೀರ್ಘ ಕಾಲ ಡಬ್ಬದಲ್ಲಿ ಕೂತು ಈಗಷ್ಟೇ ಹೊರಜಗತ್ತಿಗೆ ಬಂದಿದೆ. ಆದರೆ ಡಬ್ಬದಲ್ಲಿ ಕೂತಿದ್ದ ಮಾತ್ರಕ್ಕೆ ಚಿತ್ರದ ಹಿಂದಿನ ಶ್ರಮ ವ್ಯರ್ಥವಾಗಿಲ್ಲ. ಚಿತ್ರದ ಕಥೆಯಲ್ಲಿ ಅಂಥ ಹೇಳಿಕೊಳ್ಳುವ ವಿಶೇಷತೆಯೇನೂ ಇರದಿದ್ದರೂ, ಕ್ಯಾಮರಾ ಕೈಚಳಕ, ಸಂಭಾಷಣೆ, ನಿರೂಪಣೆ, ಸಂಕಲನ ಎಲ್ಲವೂ ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ತಪ್ಪಲ್ಲ.

ಕೇವಲ ಸಾಮಾನ್ಯ ಶಾಲೆಗೆ ಹೋಗಿ ಚೂರುಪಾರು ಓದಿಕೊಂಡ ಸ್ಲಂ ಹುಡುಗ ಹಾಗೂ ಪ್ರೊಫೆಷನಲ್ ಕೋರ್ಸು ಮಾಡಿಕೊಂಡ ವಿದ್ಯಾವಂತ ಹುಡುಗಿಯ ನಡುವೆ ನಡೆಯುವ ಲವ್ ಸ್ಟೋರಿಯೇ ಚಿತ್ರದ ಕಥೆ. ಚಿತ್ರದಲ್ಲಿ ಮುಂದೆ ಹೀಗೆಯೇ ನಡೆಯುತ್ತದೆ ಎಂದು ಖಂಡಿತವಾಗಿಯೂ ಪ್ರೇಕ್ಷಕ ಊಹಿಸಿ ಬಿಡಬಲ್ಲನಾದರೂ, ಚಿತ್ರದ ನಿರೂಪಣೆ ಬೋರ್ ಹೊಡೆಸುವುದಿಲ್ಲವಾದ್ದರಿಂದ ಥಿಯೇಟರಿಂದ ಎದ್ದು ಹೊರಗೆ ಹೋಗುವಂತೆ ಖಂಡಿತಾ ಮಾಡೋದಿಲ್ಲ.

ಈ ಮೊದಲು ಪೊಲೀಸ್ ಕ್ವಾರ್ಟರ್ಸ್ ಎಂಬ ಚಿತ್ರದಲ್ಲಿ ನಟಿಸಿದರೂ, ಯಶಸ್ಸು ಕಾಣದ ನಾಯಕ ನಟ ಅನೀಶ್ ಈ ಚಿತ್ರದ ನಾಯಕ ನಟ. ಅನೀಶ್ ತಮಗೆ ದಕ್ಕಿದ ಅವಕಾಶವನ್ನು ಉತ್ತಮವಾಗಿಯೇ ಉಪಯೋಗಿಸಿದ್ದಾರೆ. ನಾಯಕ ನಟಿ ಮೇಘನಾ ಗಾಂವ್ಕರ್ ಕೂಡಾ ನಟನೆಯಲ್ಲಿ ಪರವಾಗಿಲ್ಲ.

ಚಿತ್ರದ ಕ್ಯಾಮರಾ ಕೈಚಳಕ ಹಾಗೂ ಡೈಲಾಗುಗಳೇ ಚಿತ್ರದ ಜೀವಾಳ. ಛಾಯಾಗ್ರಹಣದಲ್ಲಿ ಅಶೋಕ್ ಕಶ್ಯಪ್ ಪ್ರೇಕ್ಷಕರನ್ನು ಹಿಡಿದಿಡಲು ಯತ್ನಿಸುತ್ತಾರೆ. ಇನ್ನು ಹಾಡಿನ ವಿಷಯಕ್ಕೆ ಬಂದರೆ ಮೂರು ಹಾಡು ಚೆನ್ನಾಗಿದೆ. ಮೊದಲರ್ಧ ತೀರಾ ಉದ್ದವೆನಿಸುತ್ತದೆ. ಕೊಂಚ ಕತ್ತರಿ ಪ್ರಯೋಗ ಮಾಡಬೇಕಿತ್ತು. ಆದರೂ ಚಿತ್ರವನ್ನು ಒಮ್ಮೆ ಧಾರಾಳವಾಗಿ ನೋಡಬಹುದು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments