Webdunia - Bharat's app for daily news and videos

Install App

ಕಲ್ಪನಾ ಚಿತ್ರವಿಮರ್ಶೆ: ಪ್ರೇಕ್ಷಕರಿಗೂ ಮಂಗಳಮುಖಿ ಕಾಟ

Webdunia
WD
ಚಿತ್ರ: ಕಲ್ಪನಾ
ತಾರಾಗಣ: ಉಪೇಂದ್ರ, ಲಕ್ಷ್ಮಿ ರೈ, ಶ್ರುತಿ, ಉಮಾಶ್ರೀ
ನಿರ್ದೇಶನ: ರಾಮನಾರಾಯಣ್
ಸಂಗೀತ: ವಿ. ಹರಿಕೃಷ್ಣ

ಕನ್ನಡ ಪ್ರೇಕ್ಷಕರು ಹಾರರ್ ಸಿನಿಮಾಗಳಿಗೆ ಸೈ ಅಂದಿರುವುದೇ ಅಪರೂಪ. ನಾ ನಿನ್ನ ಬಿಡಲಾರೆ, ಶ್ ಅಂತಹ ಚಿತ್ರಗಳನ್ನು ಬಿಟ್ಟರೆ ಬೇರೆ ಯಾವುದೂ ತಟ್ಟನೆ ನೆನಪಿಗೆ ಬರಲಾರದು. ಆದರೂ ಇನ್ನೊಂದು ಪ್ರಯತ್ನ ಮಾಡೋಣ ಅಂತ ಹೊರಟು ಗೆದ್ದಿದ್ದಾರೆ 125 ಚಿತ್ರಗಳ ಸರದಾರ ರಾಮನಾರಾಯಣ್.

ಕಳೆದ ವಾರ ಬಿಡುಗಡೆಯಾದ 'ಚಾರುಲತಾ'ದಂತೆ 'ಕಲ್ಪನಾ' ಕಥೆ-ಪಾತ್ರಗಳೂ ಕನ್ನಡಕ್ಕೆ ಹೊಸತು. ಇಡೀ ಚಿತ್ರದಲ್ಲಿ ಮಂಗಳಮುಖಿಯೇ (ಕಲ್ಪನಾ) ಕೇಂದ್ರ ಬಿಂದು. ಸಮಾಜದಲ್ಲಿ ಮಂಗಳಮುಖಿ ಹೇಗಿರಬಹುದು ಎಂದು ಮಾದರಿಯಾಗಲು ಕಲ್ಪನಾ (ಸಾಯಿಕುಮಾರ್) ಹೊರಟಿರುವಾಗಲೇ ಕೊಲೆ ನಡೆದು ಹೋಗುತ್ತದೆ. ಅದು ಆಸ್ತಿಗಾಗಿ.

ರಾಘವ (ಉಪೇಂದ್ರ) ಆಡು-ಪಾಡಿನ ಹುಡುಗ. ಎಂದಿನ ಮೈದಾನ ಬಿಟ್ಟು ಬೇರೊಂದು ಕಡೆ ಹೋದಾಗ ವಿಕೆಟ್ ಪ್ರೇತವನ್ನು ಕರೆಸುತ್ತದೆ. ಅದೇ ಕಲ್ಪನಾ. ನಂತರ ರಾಘವನ ಮೇಲೆ ಕಲ್ಪನಾ ಅವತಾರ. ಉದ್ದೇಶ ಬೇರೇನೂ ಇಲ್ಲ, ಸೇಡು. ಅದರ ನಡುವಿನ ಫಜೀತಿ ಶತ್ರುವಿಗೂ ಬೇಡ ಎನ್ನುವಂತದ್ದು.

ಇದು ರಾಘವ ಲಾರೆನ್ಸ್ ನಿರ್ದೇಶಿಸಿ, ನಟಿಸಿದ್ದ 'ಕಾಂಚನಾ' ಚಿತ್ರದ ರಿಮೇಕ್. ಹೆಚ್ಚು ಕಡಿಮೆ ಅದನ್ನೇ ಕನ್ನಡಕ್ಕೆ ಭಟ್ಟಿ ಇಳಿಸಿದ್ದಾರೆ ರಾಮನಾರಾಯಣ್. ಆದರೂ ಇಂತಹ ಚಿತ್ರಗಳನ್ನು ರಿಮೇಕ್ ಮಾಡುವುದೆಂದರೆ ಅಷ್ಟೇನೂ ಸುಲಭದ ಕೆಲಸವಲ್ಲ. ಆ ಮಟ್ಟಿಗೆ ನಿರ್ದೇಶಕರದ್ದು ಮೆಚ್ಚತಕ್ಕ ಪ್ರಯತ್ನ.

ಅವರಿಗೆ ಸರಿಸಮಾನಾಗಿ ನಿಂತಿರುವುದು ದ್ವಾರ್ಕಿ ರಾಘವರ ಚುರುಕಿನ ಸಂಭಾಷಣೆ. ಆಗಾಗ ಬೆಚ್ಚಿ ಬೀಳಿಸುವಲ್ಲಿ ಗ್ರಾಫಿಕ್ಸ್ ಮತ್ತು ಹರಿಕೃಷ್ಣರ ಹಿನ್ನೆಲೆ ಸಂಗೀತದ ಪಾತ್ರ ದೊಡ್ಡದು. ಸೆಲ್ವರಾಜ್ ಛಾಯಾಗ್ರಹಣವಂತೂ ಇದು ನಿಜವೇನೋ ಎಂಬ ಭಾವನೆ ಹುಟ್ಟಿಸುತ್ತದೆ. ಹರಿಕೃಷ್ಣರ ಸಂಗೀತದ ಹಾಡುಗಳೂ ಕುಣಿಸುವ ಶಕ್ತಿಯನ್ನು ತೋರಿಸಿವೆ.

ಇವೆಲ್ಲಕ್ಕಿಂತಲೂ ನಿರ್ದೇಶಕ ರಾಮನಾರಾಯಣ್ ಗೆದ್ದಿರುವುದು ಪಾತ್ರಗಳ ಆಯ್ಕೆಯಲ್ಲಿ. ಪ್ರೇತಬಾಧೆಯ ರಾಘವನಾಗಿ ಉಪೇಂದ್ರ ತಾನೆಂತಹ ಅದ್ಭುತ ನಟ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬಹುಶಃ ಈ ಹಿಂದೆಯೂ ಹಲವು ಬಾರಿ ಹೇಳಿದಂತೆ ಈ ಬಾರಿಯೂ, ಇದು ಉಪ್ಪಿಗೆ ಹೇಳಿ ಮಾಡಿಸಿದ ಪಾತ್ರ, ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂಬ ಬಣ್ಣನೆ ಅನಿವಾರ್ಯ.

ಇನ್ನು ಉಪ್ಪಿಗಿಂತಲೂ ಕೆಲವು ದೃಶ್ಯಗಳಲ್ಲಿ ತೆರೆಯನ್ನಷ್ಟೇ ಅಲ್ಲ, ಪ್ರೇಕ್ಷಕರನ್ನೂ ಆವರಿಸಿಕೊಂಡಿರುವವರು ಸಾಯಿಕುಮಾರ್. ಮಂಗಳಮುಖಿಯಾಗಿ ಅವರ ನಡೆ, ನುಡಿ ಸೂಪರ್. ಅವರಿಗೆ ಇರುವ ಅವಕಾಶವೇ ಅಲ್ಪ. ಅದೂ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ನಂತರವಷ್ಟೇ ಚಿತ್ರ ಗಂಭೀರವಾಗುತ್ತಾ ಹೋಗುತ್ತದೆ.

ನಾಯಕಿ ಲಕ್ಷ್ಮಿ ರೈ ಹಾಗೆ ಸುಮ್ಮನೆ. ಆದರೆ ರಾಘವನ ತಾಯಿ ಪಾತ್ರ ಮಾಡಿರುವ ಉಮಾಶ್ರೀ ಮತ್ತು ಅತ್ತಿಗೆಯಾಗಿರುವ ಶ್ರುತಿ ಅವರದ್ದು ಅತಿರೇಕ. ಅವರಿಬ್ಬರ ಹಿಡಿತ ಸಡಿಲಿಸಿರುವುದು ಇಡೀ ಚಿತ್ರದ ಮೈನಸ್ ಪಾಯಿಂಟ್.

ಮೂಲ ಚಿತ್ರವನ್ನು ನೋಡಿದ್ದರೆ, ನೀವು ಉಪೇಂದ್ರ ಅಭಿಮಾನಿ ಆಗಿರದೇ ಇದ್ದರೆ 'ಕಲ್ಪನಾ' ನಿಮ್ಮ ಕಲ್ಪನೆಯಂತೆಯೇ ಇದೆ ಎಂದು ಸುಮ್ಮನಾಗಬಹುದು. ಇಲ್ಲದೇ ಇದ್ದರೆ, ಒಮ್ಮೆ ಚಿತ್ರಮಂದಿರದತ್ತ ಹೆಜ್ಜೆ ಹಾಕಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack, ದುಃಖದ ಸಮಯದಲ್ಲಿ ದೇಶ ಮೆಚ್ಚುವ ನಿರ್ಧಾರ ಕೈಗೊಂಡ ನಟ ಸಲ್ಮಾನ್ ಖಾನ್‌

Shruti Haasan, ಚೆನ್ನೈಗೆ ಸೋಲಾಗುತ್ತಿದ್ದ ಹಾಗೇ ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ನಟಿ, Video Viral

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

Show comments