Select Your Language

Notifications

webdunia
webdunia
webdunia
webdunia

ನಯನತಾರ -ಸಿಂಬು ಇಬ್ಬರು ಪ್ರೇಮಿಗಳಲ್ಲ...ಹಾಗಾದ್ರೆ ಈ ಸಂಬಂಧಕ್ಕೇನು ಹೆಸರು ?

ನಯನತಾರ -ಸಿಂಬು ಇಬ್ಬರು ಪ್ರೇಮಿಗಳಲ್ಲ...ಹಾಗಾದ್ರೆ ಈ ಸಂಬಂಧಕ್ಕೇನು ಹೆಸರು ?
ಚೆನ್ನೈ , ಗುರುವಾರ, 15 ಮೇ 2014 (10:07 IST)
ನಯನತಾರ ಮತ್ತು ಸಿಂಬು ಒಂದು ಕಾಲದ ಪ್ರಣಯ ಪಕ್ಷಿಗಳು ಆಗಿದ್ದರು. ಅವರ ಬಗ್ಗೆಯೇ ತಮಿಳು ಮಾಧ್ಯಮಗಳು ಸದಾ ಸುದ್ದಿ ಬರೆಯುತ್ತಿದ್ದವು . ಎಲ್ಲಿ ಹೋದರು ಅವರ ಹಿಂದೆ ತಮಿಳು ಸಿನಿ ಪತ್ರಕರ್ತರು ಹಿಂಬಾಲಿಸಿ ಶಾಕಿಂಗ್ ಮತ್ತು ಬ್ರೆಕಿಂಗ್ ನ್ಯೂಸ್ ಮಾಡುತ್ತಿದ್ದರು. ಇನ್ನೇನು ಇಬ್ಬರು ಮದುವೆ ಆಗುವ ದಿನಗಳು ಹತ್ತಿರ ಬಂತು ಎಂದು ತಿಳಿಯುವಷ್ಟರಲ್ಲಿ ಈಗೋ ಕ್ಲಾಶ್ ಆಗಿ ಒಬ್ಬರಿಂದ ಮತ್ತೊಬ್ಬರು ದೂರ ಆದರು. 
 
ಆ ಬಳಿಕ ನಯನ ತಾರ ಪ್ರಭುದೇವ ಮತ್ತು ಸಿಂಬು ಹನ್ಸಿಕ ಜೊತೆ ಲವೇರಿಯಾಗೆ ಬಿದ್ದರು. ಅದು ಸಹಿತ ಬ್ರೇಕ್ ಅಪ್ ಆಯ್ತು.. ಈಗ ಮತ್ತೆ  ಈ ಜೋಡಿ ಒಂದಾಗಿದೆ ಎನ್ನುವ  ಸಂಗತಿಯನ್ನು ಈ ಹಿಂದೆ ನಾವು ತಿಳಿಸಿದ್ದೆವು. ಆದರೆ ಈ ಸೂಪರ್ ಹುಡುಗಿ ನಯನತಾರ ಈ ಸಂಗತಿಯನ್ನು ಒಪ್ಪಿಕೊಂಡಿಲ್ಲ. ಚಿತ್ರದಲ್ಲಿ ನಟಿಸುವುದು ಬೇರೆ ವೈಯುಕ್ತಿಕ ಬದುಕು ಬೇರೆ ಎಂದು ಮಾಧ್ಯಮದವರನ್ನು ಝಾಡಿಸಿಬಿಟ್ಟಿದ್ದಾಳೆ. ಸಿನಿಮಾ ಶೂಟಿಂಗ್ ನಲ್ಲೂ ಸಹಿತ ಇವರಿಬ್ಬರು ಯಾವ ಸ್ಪಂದನೆ ಇಲ್ಲದೆ ಇರುತ್ತಾರೆ ಎನ್ನುವ ಮಾತನ್ನು ಸಹ ಚಿತ್ರತಂಡ ತಿಳಿಸಿದೆ. 
 
ಆದರೆ ಅದನ್ನು ಮಾಧ್ಯಮಗಳು ಒಪ್ಪದ ಪರಿಸ್ಥಿತಿಯನ್ನು ಈ ಜೋಡಿ ತಂದಿದ್ದಾರೆ. ಅದಕ್ಕೆ ಕಾರಣ ಇಷ್ಟೇ.. ಈ ಜೋಡಿ ಇತ್ತೀಚೆಗೆ ಪಬ್.. ಕ್ಲಬ್ಬು ಅಂತ ಎಲ್ಲ ಕಡೆ ಓಡಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಇವರು ಕೆಲವು ದಿನಗಳ ಹಿಂದೆಯಷ್ಟೆ  ನಡೆದ ತ್ರಿಶ ಹುಟ್ಟು ಹಬ್ಬದಲ್ಲಿ ಆಡಿದ ಆಟ ನೋಡಿ ಯಾರಿಗೆ ಆಗಲಿ ಇವರು   ಲವ್ ಮಾಡ್ತಾ ಇಲ್ಲ ಅಂತ ಅನ್ನಿಸುವುದೇ ಇಲ್ಲ ಅಂತಾರೆ ಪ್ರತ್ಯಕ್ಷದರ್ಶಿಗಳು. ಅದೇ ರೀತಿ ಈಜೋಡಿ ಈಗ ನಟಿಸುತ್ತಿರುವ ಚಿತ್ರದಲ್ಲೂ ಸಹ ಸಕತ್ ಹಾಟ್ ಹಾಟ್ ಆಗಿ ಲವ್ ಮಾಡುವ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ನಯನತಾರ ಮಾತಿನಲ್ಲಿ ಸತ್ಯವಿಲ್ಲ ಎನ್ನುವುದು ಸ್ಪಷ್ಟವಾಗಿದೆ... ಹೌದ ನಯನತಾರ ? 
 

Share this Story:

Follow Webdunia kannada