Webdunia - Bharat's app for daily news and videos

Install App

ನಾಳೆ ಚಂದವನದಲ್ಲಿ ಎರಡು ಸಿನಿಮಾ ರಿಲೀಸ್

Webdunia
ಗುರುವಾರ, 27 ಅಕ್ಟೋಬರ್ 2016 (10:54 IST)
ಬೆಂಗಳೂರು: ದೀಪಾವಳಿಗೆ ವೀಕೆಂಡ್ ರಜೆ. ಸ್ವಲ್ಪ ಮಜಾ ಮಾಡಬೇಕೆಂದಿದ್ದವರಿಗೆ ಈ ವಾರ ಸ್ಯಾಂಡಲ್ ವುಡ್ ಎರಡು ಭರ್ಜರಿ ಸಿನಿಮಾಗಳನ್ನು ನೀಡುತ್ತಿದೆ.

ಪಕ್ಕಾ ಮಾಸ್ ಸಿನಿಮಾ ನೋಡಬೇಕೆಂದಿರುವವರು ರಾಧಿಕಾ ಪಂಡಿತ್ ಮತ್ತು ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವರ್ಡ್ ನೋಡಬಹುದು. ಇವರಿಬ್ಬರು ರಿಯಲ್ ಲೈಫ್ ಜೋಡಿಯಾಗುವುದಕ್ಕೆ ಮೊದಲು ಮಾಡುತ್ತಿರುವ ಸಿನಿಮಾ ಇದು ಎನ್ನುವ ಕಾರಣಕ್ಕೆ ಮಾತ್ರವಲ್ಲ. ಹಲವು ಕಾರಣಗಳಿಗೆ ಈ ಚಿತ್ರ ಸುದ್ದಿ ಮಾಡುತ್ತಿದೆ.

ಅದ್ಧೂರಿ ಬಜೆಟ್ ನ ಸಿನಿಮಾ. ಅದ್ಭುತ ಲೊಕೇಶನ್, ಥ್ರಿಲ್, ರೊಮ್ಯಾನ್ಸ್ ಎಲ್ಲವೂ ಇದರಲ್ಲಿದೆ. ಇದರ ಟ್ರೇಲರ್ ಬಿಡುಗಡೆಯಾಗಿದ್ದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ರಾಧಿಕಾ ಪಂಡಿತ್ ಡಬಲ್ ರೋಲ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ತೇಲಿ ಬರುತ್ತಿದೆ.  ಯಾವುದು ಸತ್ಯ ಎಂದು ತಿಳಿಯಬೇಕಿದ್ದರೆ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಬಹುದು.

ಇನ್ನೊಂದು ಉಪೇಂದ್ರ-ಕಿಚ್ಚ ಸುದೀಪ್ ಕಾಂಬಿನೇಷನ್ ನ ಚಿತ್ರ “ಮುಕುಂದ ಮುರಾರಿ”. ಮಾಡರ್ನ್ ಯುಗಕ್ಕೆ ಕೊಂಚ ದೇವರ ಟಚ್ ಇರುವ ಸಿನಿಮಾ. ಚಿತ್ರದ ತುಣುಕುಗಳನ್ನು ನೋಡುತ್ತಿದ್ದರೆ ಉಪೇಂದ್ರ ಅವರ ಟಿಪಿಕಲ್ ಸಿನಿಮಾದಂತೆ ಕಾಣುತ್ತಿದೆ. ಸುದೀಪ್ ಮಾತ್ರ ವಿಭಿನ್ನ ಪಾತ್ರ ಮಾಡುತ್ತಿದ್ದಾರೆ.  ಸ್ವತಃ ಉಪೇಂದ್ರ ಇದು ತಮ್ಮ ಎ ಚಿತ್ರದ ಮುಂದುವರಿದ ಭಾಗ ಎಂದಿದ್ದಾರೆ.

ಕನ್ನಡ ಸಿನಿಮಾ ಬೇಡ ಹಿಂದಿ ನೊಡಬೇಕು ಎನ್ನುವವರಿಗೆ ಅಲ್ಲೂ ಎರಡು ಚಿತ್ರಗಳಿವೆ. ಭಾರೀ ವಿವಾದವೆಬ್ಬಿಸಿದ ಚಿತ್ರ “ಏ ದಿಲ್ ಮುಷ್ಕಿಲ್” ಮತ್ತು ಸಾಹಸ ಪ್ರಿಯರಿಗಾಗಿ ಅಜಯ್ ದೇವಗನ್ ಅವರ “ಶಿವಾಯ್” ಚಿತ್ರ.  ಆದರೆ ಟಿಕೆಟ್ ದರ ಮಾತ್ರ ದುಪ್ಪಟ್ಟಾಗಿದೆ ಎಂಬ ಸುದ್ದಿಗಳೂ ಬಂದಿವೆ.  ಯಾವುದು ಬೇಕೋ ಅದನ್ನು ಆರಿಸಿಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ವಿಜಯ್‌-ರಶ್ಮಿಕಾ ಅಭಿನಯದ ರಣಬಾಲಿ ಚಿತ್ರ ರಿಲೀಸ್‌ಗೆ ಡೇಟ್ ಫಿಕ್ಸ್: ಖಡಕ್‌ ಲುಕ್‌ ಅಬ್ಬರಿಸಲಿರುವ ದೇವರಕೊಂಡ

ಗಣೇಶ ಚತುರ್ಥಿಯಂದು ಡಾಲಿ ಮನೆಯಲ್ಲಿ ಡಬಲ್‌ ಸಂಭ್ರಮ: ವಿಶೇಷವಾಗಿ ಮಗ ಹೆಸರನ್ನು ರಿವಿಲ್‌ ಮಾಡಿದ ಧನಂಜಯ್‌

BIG BOSS KANNADA: ದೊಡ್ಮನೆ ಮನೆ ಪ್ರವೇಶಿಸದೆ ಫ್ಲೈಟ್ ಜರ್ನಿಯಲ್ಲೇ ಪ್ರಯಾಣ ಮುಗಿಸಿದ ಪ್ರಥಮಾ ಪ್ರಸಾದ್

ಜಗ್ಗಿ ಮಮ್ಮಿ ಜತೆಗಿನ ತಾಂಡವ್ ನಡವಳಿಕೆಗೆ ಕಿಚ್ಚ ಗರಂ, ವಿಐಪಿ ಗಗನ್‌ ದಾರಿತಪ್ಪಿದ ಬಗ್ಗೆ ಸುದೀಪ್ ಕ್ಲಾಸ್‌

ಲಂಡನ್‌ನ ರೇಸ್‌ನಲ್ಲಿ ವಿಜಯ್, ತ್ರಿಷಾ ಒಟ್ಟಿಗೆ, ಗೆಳತಿಯ ನಡವಳಿಕೆ ಸಿಎಂಗೆ ಮುಜುಗರವಾಯಿತೇ, ಈ ವಿಡಿಯೋ ನೋಡಿ

ಮುಂದಿನ ಸುದ್ದಿ
Show comments