Webdunia - Bharat's app for daily news and videos

Install App

500,1000 ನೋಟು ನಿಷೇಧದ ಇಫೆಕ್ಟ್: ಕನ್ನಡ, ಹಿಂದಿ ಸಿನಿಮಾ ಬಿಡುಗಡೆ ಮುಂದಕ್ಕೆ

Webdunia
ಗುರುವಾರ, 10 ನವೆಂಬರ್ 2016 (10:10 IST)
ನವದೆಹಲಿ: ಎಲ್ಲಾ ನೋಟಿನ ಮಹಿಮೆ. 500, 1000 ನೋಟುಗಳು ನಿಷೇಧವಾಗಿದ್ದೇ ತಡ. ದೇಶದಲ್ಲಿ ಎಲ್ಲಾ ಕೆಲಸಗಳೂ ಅಲ್ಲೋಲಕಲ್ಲೋವಾಗಿದೆ. ಇದು ಚಿತ್ರರಂಗಕ್ಕೂ ತಟ್ಟಿದ್ದು, ಈ ವಾರ ಬಿಡುಗಡೆಯಾಗಬೇಕಿದ್ದ ಕೆಲವು ಸಿನಿಮಾಗಳು ಮುಂದಕ್ಕೆ ಹೋಗಿದೆ.

ಕನ್ನಡ ಚಿತ್ರರಂಗದಲ್ಲಿ ಈ ವಾರ ಜಾನ್ ಜಾನಿ ಜನಾರ್ಧನ್ ಮತ್ತು ರಿಕ್ತ ಸಿನಿಮಾಗಳು ಬಿಡುಗಡೆಯಾಗಬೇಕಿತ್ತು. ಆದರೆ ಖರ್ಚಿಗೆ ಕಾಸಿಲ್ಲ. ಇನ್ನು, ಸಿನಿಮಾ ನೋಡಲು ಯಾರು ಬರ್ತಾರೆ? ಹೀಗಾಗಿ ಚಿತ್ರತಂಡಗಳು ತಮ್ಮ ಚಿತ್ರ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದ್ದಾರೆ.

ಜಾನ್ ಜನಾರ್ಧನ್ ಚಿತ್ರ ಡಿಸೆಂಬರ್ 9 ಕ್ಕೆ ಬಿಡುಗಡೆಯಾಗಲಿದೆ. ರಿಕ್ತ ಬಿಡುಗಡೆ ಯಾವಾಗ ಎಂದು ಇನ್ನೂ ನಿಗದಿಯಾಗಿಲ್ಲ. ಇದು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ. ಬಾಲಿವುಡ್ ನ ರಜನೀಶ್ ದುಗ್ಗಲ್ ಅಭಿನಯದ ಸಾನ್ ಸೀನ್ ಚಿತ್ರ ಕೂಡಾ ಇದೇ ಕಾರಣಕ್ಕೆ ನಾಳೆ ಬಿಡುಗಡೆಯಾಗುತ್ತಿಲ್ಲ.

ಇದಲ್ಲದೆ ಬಿಗ್ ಬಜೆಟ್ ಸಿನಿಮಾ ರಾಕ್ ಆನ್ 2 ಕೂಡಾ ಇದೇ ವಾರಾಂತ್ಯಕ್ಕೆ ಬಿಡುಗಡೆಯಾಗಬೇಕಿದ್ದು, ಅದಕ್ಕೂ ನೋಟಿನ ಇಫೆಕ್ಟ್ ಆಗುವ ಸಾಧ್ಯತೆ ಇದೆ. ತೆಲುಗಿನಲ್ಲೂ ಅಲ್ಲರಿ ನರೇಶ್ ಅಭಿನಯದ ದೆಯ್ಯಮ್ ನಾಕೆಂ ಭಯಮ್ ಚಿತ್ರದ ಬಿಡುಗಡೆಯನ್ನೂ ಮುಂದೆ ಹಾಕುವ ಬಗ್ಗೆ ಚಿತ್ರ ತಂಡ ಚಿಂತನೆ ನಡೆಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments