Select Your Language

Notifications

webdunia
webdunia
webdunia
webdunia

ಸಾಯಿ ಪ್ರಕಾಶ್ 'ಶ್ರೀನಾಗಶಕ್ತಿ' ಇದೇ ವಾರ ತೆರೆಗೆ

ಸಾಯಿ ಪ್ರಕಾಶ್ 'ಶ್ರೀನಾಗಶಕ್ತಿ' ಇದೇ ವಾರ ತೆರೆಗೆ
ನಾಗರಾಜನ ವಿವಿಧ ಅವತಾರಗಳನ್ನು ನೋಡಬೇಕೇ? ಇದೇ ವಾರ (ಡಿಸೆಂಬರ್ 24) ನೀವು ಚಿತ್ರಮಂದಿರಕ್ಕೆ ಹೋದರೆ ಸಾಕು! ಹೌದು, ಹಲವಾರು ಏಳುಬೀಳುಗಳನ್ನು ಅನುಭವಿಸಿ ಮತ್ತೆ ತಮ್ಮ ಸಿನಿ ಪಯಣವನ್ನು ಆರಂಭಿಸಿರುವ ಓಂ ಸಾಯಿ ಪ್ರಕಾಶ್, ಈಗ ಬಾರಿ ನಾಗರಾಜನ ಮೊರೆ ಹೋಗಿದ್ದಾರೆ.

ನಾಗದೇವತೆ ಈ ಬಾರಿ ಸಾಯಿ ಪ್ರಕಾಶ್ ಕೈಹಿಡಿಯಬಹುದೇ ಎಂದು ಕಾದು ನೋಡಬೇಕು. ಎಲ್ಲವೂ ಸರಿಹೋದರೆ ಡಿ.24ರಂದು 'ನಾಗಶಕ್ತಿ' ಬಿಡುಗಡೆಯಾಗಲಿದೆ ಎಂದಿದ್ದಾರೆ ಸಾಯಿಪ್ರಕಾಶ್. ಈ ಹಿಂದೆ 'ನಾಗದೇವತೆ' ನೋಡಿದಾಗ ಸಿಕ್ಕಿದ ತೃಪ್ತಿಯೇ ಇಲ್ಲೂ ಸಿಕ್ಕಿದೆ ಎಂದಿದ್ದಾರೆ. ಅಂದು ನಾಗದೇವತೆ ಹಿಟ್ ಆಯಿತು. ಈಗ ನಾಗಶಕ್ತಿ ಕೂಡ ಹಿಟ್ ಆಗಬಹುದು ಎನ್ನುವ ಭರವಸೆಯಲ್ಲಿದ್ದಾರೆ.

ಈ ಚಿತ್ರದಲ್ಲಿ ನಾಗಾರಾಧನೆಯನ್ನು ಅಚ್ಚುಕಟ್ಟಾಗಿ ಚಿತ್ರಿಸಲಾಗಿದ್ದು, ಇದು ಬಿ ಮತ್ತು ಸಿ ಕೇಂದ್ರಗಳ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದಿದ್ದಾರೆ. ನಿರ್ಮಾಪಕಿ ಚಂದ್ರಿಕಾ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರದಲ್ಲಿ ನಾಗಿಣಿ ಪಾತ್ರದಲ್ಲಿ ಅವರೇ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷ.

ಗೋಟೂರಿ ಅವರ ಚಿತ್ರ ಸಂಭಾಷಣೆ ಹಾಗೂ ಚಿತ್ರದ ಹಾಡುಗಳು ಸುಂದರವಾಗಿವೆ. ನಾಗರಹಾವು ಚಿತ್ರ ಹೋದಷ್ಟೇ ವೇಗದಲ್ಲಿ ಈ ಚಿತ್ರವೂ ಮುಗಿದೆ ಎಂದಿದ್ದಾರೆ.

Share this Story:

Follow Webdunia kannada