Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಜ್ವರದ ನಡುವೆಯೂ ಬರೋಬ್ಬರಿ ಐದು ಚಿತ್ರ ತೆರೆಗೆ

ಕ್ರಿಕೆಟ್ ಜ್ವರದ ನಡುವೆಯೂ ಬರೋಬ್ಬರಿ ಐದು ಚಿತ್ರ ತೆರೆಗೆ
PR
PR
ಬಿಡುಗಡೆಯಾಗುತ್ತಿರುವ ಹೊಸ ಕನ್ನಡ ಚಿತ್ರಗಳ ಸಂಖ್ಯೆ ವಾರದಿಂದ ವಾರಕ್ಕೆ ಏರುತ್ತಲೇ ಇದೆ. ಕಳೆದ ವಾರ ಫೆ.18ರಂದು 'ವೀರಬಾಹು', '5 ಈಡಿಯಟ್ಸ್', ಮತ್ತು 'ನಾವು ನಮ್ಮ ಹೆಂಡತಿಯರು' ಬಿಡುಗಡೆಯಾದರೆ ಈ ವಾರ (ಫೆ.25) ಸಾರಾ ಸಗಟು ಐದು ಕನ್ನಡ ಚಿತ್ರಗಳು ತೆರೆ ಕಾಣುತ್ತಿವೆ.

ಅವೆಂದರೆ 'ಸಾಚಾ', 'ಟೇಕ್ ಇಟ್ ಈಸಿ', 'ಕಾರ್ತಿಕ್', 'ಗನ್' ಮತ್ತು 'ಆಪ್ತ'. ಈ ಪೈಕಿ 'ಆಪ್ತ' ಮತ್ತು 'ಟೇಕ್ ಇಟ್ ಈಸಿ' ಕಳೆದ ವಾರವೇ ಬಿಡುಗಡೆಯಾಗಬೇಕಿತ್ತು. ಆದರೆ ಥಿಯೇಟರ್ ಸಮಸ್ಯೆಯಿಂದಾಗಿ ಈ ವಾರಕ್ಕೆ ಮುಂದೂಡಲ್ಪಟ್ಟಿದ್ದವು.

'ಸಾಚಾ' ಹೊಸಬರ ಚಿತ್ರವಾದರೆ, 'ಟೇಕ್ ಇಟ್ ಈಸಿ'ಯಲ್ಲಿ ಅನಂತನಾಗ್ ಪ್ರಧಾನ ಪಾತ್ರದಲ್ಲಿದ್ದಾರೆ. ಇನ್ನು 'ಕಾರ್ತಿಕ್' ಲವ್ ಕಮ್ ಆಕ್ಷನ್ ಚಿತ್ರ. 'ಯುವ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆದಿರುವ ಕಾರ್ತಿಕ್ ಈ ಚಿತ್ರದ ನಾಯಕ.

ಹರೀಶ್‌ರಾಜ್ ನಿರ್ದೇಶಿಸಿ ನಟಿಸಿರುವ 'ಗನ್', ಒಬ್ಬ ಯುವಕನ ಬದುಕಿನಲ್ಲಿ ಪಿಸ್ತೂಲ್ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಕಥಾಹಂದರ ಹೊಂದಿರುವ ಚಿತ್ರ. 'ಆಪ್ತ' ಚಿತ್ರಕ್ಕೆ ಪೂಜಾ ಗಾಂಧಿ ನಾಯಕಿ. ಅವರಿಗೆ ಜೊತೆ ನೀಡಲು ಪ್ರಜ್ಞಾ, ಮಾನಸಿ, ಪೂನಂ ಮುಂತಾಗಿ ನಾಲ್ವರು ನಾಯಕಿಯರಿದ್ದಾರೆ.

ಕ್ರಿಕೆಟ್ ಜ್ವರ ಏರುತ್ತಲಿರುವ ಪ್ರಸಕ್ತ ಸನ್ನಿವೇಶದಲ್ಲಿ ಚಿತ್ರಗಳು ಇಷ್ಟೊಂದು ಸಂಖ್ಯೆಯಲ್ಲಿ ಬಿಡುಗಡೆಗೊಳ್ಳುತ್ತಲಿದ್ದರೆ ಈ ಸಿನೆಮಾಗಳ ಗತಿಯೇನು, ಪ್ರೇಕ್ಷಕರ ಗತಿ ಏನು ಎಂದು ಯೋಚಿಸುವ ಒಬ್ಬರೂ ಗಾಂಧಿನಗರದಲ್ಲಿ ಇಲ್ಲವಾದರೇ ಎಂಬುದೇ ಪ್ರಶ್ನೆಯಾಗಿ ಉಳಿದಿದೆ.

ಅದರಲ್ಲೂ ಹರೀಶ್ ರಾಜ್ ನಾಯಕತ್ವದ ಎರಡೂ ಚಿತ್ರಗಳು ಇದೇ ತಿಂಗಳು ಬಿಡುಗಡೆಯಾಗಿರುವುದು ವಿಶೇಷ.

Share this Story:

Follow Webdunia kannada