Select Your Language

Notifications

webdunia
webdunia
webdunia
webdunia

ಈ ವಾರ ಶಿಕಾರಿ, ಗೋವಿಂದಾಯ ನಮಃ ತೆರೆಗೆ

ಈ ವಾರ ಶಿಕಾರಿ, ಗೋವಿಂದಾಯ ನಮಃ ತೆರೆಗೆ
SUJENDRA


ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ನಾಯಕರಾಗಿರುವ 'ಶಿಕಾರಿ' ಮತ್ತು ಕೋಮಲ್ ಕುಮಾರ್ ನಾಯಕರಾಗಿರುವ 'ಗೋವಿಂದಾಯ ನಮಃ' ಹಲವು ಸಂಗತಿಗಳಿಂದ ಸುದ್ದಿ ಮಾಡಿರುವ ಚಿತ್ರಗಳು. ಈ ಎರಡೂ ಚಿತ್ರಗಳು ಭಾರೀ ಭರವಸೆಯೊಂದಿಗೆ ಇದೇ ವಾರ ರಾಜ್ಯದಾದ್ಯಂತ ತೆರೆಗಪ್ಪಳಿಸುತ್ತಿವೆ.

ಇದೇ ವಾರ ಅಂದರೆ ಮಾರ್ಚ್ 30ರಂದು ಶಿಕಾರಿ ಮತ್ತು ಗೋವಿಂದನಾಯ ನಮಃ ಚಿತ್ರಗಳು ಬಿಡುಗಡೆಯಾಗುತ್ತಿವೆ.

webdunia
SUJENDRA


ಶಿಕಾರಿ...
ಮಮ್ಮುಟ್ಟಿ ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿರುವ ಚಿತ್ರ ಶಿಕಾರಿ. ಈ ಹಿಂದೆ ಗುಬ್ಬಚ್ಚಿಗಳು ಚಿತ್ರ ನಿರ್ದೇಶಿಸಿದ್ದ ಅಭಯ್ ಸಿಂಹ ಶಿಕಾರಿಯ ನಿರ್ದೇಶಕರು. ಮಮ್ಮುಟ್ಟಿಯವರ ಚಿತ್ರವನ್ನು ಹೆಮ್ಮೆಯಿಂದಲೇ ನಿರ್ಮಿಸಿರುವವರು ಕೆ. ಮಂಜು.

ಸ್ವತಃ ಮಮ್ಮುಟ್ಟಿ ಡಬ್ಬಿಂಗ್ ಮಾಡಿರುವ ಶಿಕಾರಿ ಚಿತ್ರ ಮಲಯಾಳಂನಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಆದರೆ ಪ್ರೇಕ್ಷಕರಿಂದ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ವಿಮರ್ಶಕರಿಂದಲೂ ಟೀಕೆಗೆ ಗುರಿಯಾಗಿದೆ. ಆದರೂ ಕನ್ನಡದಲ್ಲೇ ನಿರ್ಮಿಸಲಾಗಿರುವುದರಿಂದ, ಇಲ್ಲಿ ಗೆಲ್ಲುತ್ತದೆ ಎಂಬ ಭರವಸೆ ಚಿತ್ರತಂಡದ್ದು.

ಮಮ್ಮುಟ್ಟಿಯವರದ್ದು ಇಲ್ಲಿ ದ್ವಿಪಾತ್ರ. ನಾಯಕಿಯಾಗಿ ಪೂನಮ್ ಬಾಜ್ವಾ ಅಭಿನಯಿಸಿದ್ದಾರೆ. ಉಳಿದಂತೆ ಡೆಡ್ಲಿ ಆದಿತ್ಯ, ಮೋಹನ್, ನೀನಾಸಂ ಅಶ್ವತ್ಥ್, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ. ಸಂಗೀತ ವಿ. ಹರಿಕೃಷ್ಣ ಅವರದ್ದು.

webdunia
SUJENDRA


ಗೋವಿಂದಾಯ ನಮಃ...
'ಪ್ಯಾರ್ಗೆ ಆಗ್ಬುಟೈತೆ..' ಹಾಡಿನ ಮೂಲಕ ದೇಶ-ವಿದೇಶಗಳಲ್ಲಿ ಸುದ್ದಿ ಮಾಡಿದ 'ಗೋವಿಂದಾಯ ನಮಃ' ಚಿತ್ರಕ್ಕೂ ಇದೇ ವಾರ ಬಿಡುಗಡೆಯ ಭಾಗ್ಯ. ಕೋಮಲ್ ನಾಯಕನಾಗಿರುವ ಯಾವ ಚಿತ್ರದ ಹಾಡೂ ಇಷ್ಟೊಂದು ಹಿಟ್ ಆಗಿದ್ದಿಲ್ಲ. ಈಗ ಅದರ ಲಾಭವನ್ನು ಚಿತ್ರ ಹೇಗೆ ಪಡೆಯಲಿದೆ ಅನ್ನೋದಷ್ಟೇ ಉಳಿದಿರುವ ಕುತೂಹಲ.

ಈ ಚಿತ್ರವನ್ನು ನಿರ್ದೇಶಿಸಿರುವುದು ಪವನ್ ಒಡೆಯರ್. ಕತೆ, ಚಿತ್ರಕತೆ, ಸಂಭಾಷಣೆ, ಹಾಡುಗಳು ಕೂಡ ಅವರದ್ದೇ. ನಿರ್ಮಿಸಿರುವುದು ಕೆ.ಎ. ಸುರೇಶ್.

'ಗೋವಿಂದಾಯ ನಮಃ'ದಲ್ಲಿ ಮಧುಲಿಕಾ, ರೇಖಾ, ಪಾರುಲ್ ಯಾದವ್, ಅನಾ ಬಾರ್ಬರಾ ಎಂಬ ನಾಲ್ವರು ಕೋಮಲ್‌ಗೆ ನಾಯಕಿಯರು. ನಾನೇ ಮೊದಲ ನಾಯಕಿ ಎಂದು ಇವರಲ್ಲೀಗ ಹಲವರು ಹೇಳುತ್ತಿರುವುದು ಅಚ್ಚರಿ. ನಿಜವಾದ ನಾಯಕಿ ಯಾರು ಅನ್ನೋದು ಚಿತ್ರ ನೋಡಿದ ಮೇಲೆ ಸ್ಪಷ್ಟವಾಗಲಿದೆ.

ತೆರೆಮರೆಗೆ ಸರಿದಿದ್ದ ಗುರುಕಿರಣ್ ಈ ಚಿತ್ರದ ಹಾಡಿನ ಮೂಲಕ ಮಿಂಚುತ್ತಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada