Select Your Language

Notifications

webdunia
webdunia
webdunia
webdunia

ಶಾಹಿದ್ ಕಪೂರ್ ಲವ್ ಕಹಾನಿ ನಿಮಗೆ ಗೊತ್ತೇ ?

ಶಾಹಿದ್ ಕಪೂರ್ ಲವ್ ಕಹಾನಿ ನಿಮಗೆ ಗೊತ್ತೇ ?
, ಬುಧವಾರ, 1 ಜುಲೈ 2015 (10:58 IST)
ಬಾಲಿವುಡ್ ನ  ಮೋಸ್ಟ್ ಎಲಿಜಿಬುಲ್ ಬ್ಯಾಚುಲರ್ ಶಾಹಿದ್ ಕಪೂರ್ ಹಸೆಮಣೆ ಏರೋಕೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ಮುಂದಿನ ಶಾಹಿದ್ ದಿಲ್ಲಿ ಮೂಲದ ಮೀರಾ ರಜಪೂತ್ ಕೈ ಹಿಡಿಯಲಿದ್ದಾರೆ. ಆದ್ರೆ ಮೀರಾರನ್ನು ಕೈ ಹಿಡಿಯುತ್ತಿರುವ ಶಾಹಿದ್ ಈ ಹಿಂದೆ ಅದೆಷ್ಟೋ ನಟಿ ಮಣಿಯರೊಂದಿಗೆ ಮರ ಸುತ್ತಿದ್ರು. ಯಾರೆಲ್ಲಾ ಅವರೆಲ್ಲಾ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ...
ಅಮೃತಾ ಆರೋರಾ. ಮೊದಲಿಗೆ ಇಷ್ಟ್ ವಿಷ್ಕ್ ಸಿನಿಮಾದಲ್ಲಿ ಶಾಹಿದ್ ಹಾಗೂ ಅಮೃತಾ ಜೊತೆಯಾಗಿ ಕಾಣಿಸಿಕೊಂಡಿದ್ರು. ಇಲ್ಲಿ ಇವರಿಬ್ಬರ ಕೆಮಿಸ್ಟ್ರಿ ಸಖತ್ ವರ್ಕ್ ಔಟ್ ಆಗಿದ್ದರಿಂದ ಮತ್ತೆ ವಿವಾಹ್ ಸಿನಿಮಾದಲ್ಲಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ರು. ಈ ವೇಳೆ ಇಬ್ಬರ ನಡುವೆ ಸಂಥಿಂಗ್ ನಡಿತಿದೆ ಎಂದು ಸುದ್ದಿಯಾಗಿತ್ತು ಆದ್ರೆ ಬಳಿಕ ಅವರಿಬ್ಬರು ಯಾಕೋ ದೂರವಾದ್ರು.
 
ಅಮೃತಾ ಬಳಿಕ ಶಾಹಿದ್ ಕಪೂರ್ ಬದುಕಲ್ಲಿ ಬಂದಾಕೆ ಕರೀನಾ ಕಪೂರ್. ಇವರಿಬ್ಬರು ಇನ್ನೇನು ಮದುವೆಯಾಗ್ತಾರೆ ಅನ್ನುವಷ್ಟರ ಮಟ್ಟಿಗೆ ಸುದ್ದಿಯಾಗಿತ್ತು. ಇನ್ನು ಬೆಬೋ ಹಾಗೂ ಶಾಹಿದ್ ಕೂಡ ಹಾಗೇ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ರು. ಆದ್ರೆ ಜಬ್ ವಿ ಮೆಟ್ ಸಿನಿಮಾದಲ್ಲಿ ಬಳಿಕ ಇಬ್ಬರೂ ದೂರವಾದರು. ಆ ಬಳಿಕ ಕೆಲ ದಿನಗಳ ಕಾಲ ಶಾಹಿದ್ ಕಪೂರ್ ಹೆಸ್ರು ವಿದ್ಯಾ ಬಾಲನ್ ಜೊತೆ ಥಳುಕು ಹಾಕಿಕೊಂಡಿತ್ತು. ಬಳಿಕ ಆ ಸುದ್ದಿ ಹಾಗೇ ಸೈಲೆಂಟ್ ಆಯಿತು.
 
ಇನ್ನು ಪ್ರಿಯಾಂಕಾ ಚೋಪ್ರಾ ಹಾಗೂ ಶಾಹಿದ್ ನಡುವೆಯೂ ಏನೋ ಇದೆ ಅನ್ನೋ ಸುದ್ದಿ ಗುಲ್ಲೆದಿತ್ತು. ಈ ಮಧ್ಯೆಯೇ ಕಮೀನೇ ಹಾಗೂ ತೇರಿ ಮೇರಿ ಕಹಾನಿ ಚಿತ್ರದಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ರು. ಆದ್ರೆ ಬಳಿಕ ಸುದ್ದಿಗೆ ತೆರೆ ಬಿತ್ತು. ಅದೇನೇ ಇರಲಿ ಆದ್ರೀಗ ಶಾಹಿದ್ ಮನೆಯವರ ಇಚ್ಛೆಯಂತೆ ಮೀರಾ ಕೈ ಹಿಡಿಯುತ್ತಿದ್ದಾರೆ. ಈ ಬಗ್ಗೆ ಶಾಹಿದ್ ಹಾಗೂ ಮೀರಾ ಇಬ್ಬರಿಗೂ ಖುಷಿ ಇದೆಯಂತೆ.

Share this Story:

Follow Webdunia kannada