Select Your Language

Notifications

webdunia
webdunia
webdunia
webdunia

ಶಾರೂಖ್ ಅಫೇರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಶಾರೂಖ್ ಅಫೇರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?
, ಮಂಗಳವಾರ, 27 ಜನವರಿ 2015 (10:55 IST)
ಬಿ ಟೌನ್ ನಲ್ಲಿ ದಿನಕ್ಕೊಂದು ಹೊಸ ಬಗೆಯ ಕಥೆಗಳನ್ನು ಕೇಳುತ್ತಿರುತ್ತೇವೆ. ಅದರ ಅನ್ವಯ ಸಾಕಷ್ಟು ಬಾರಿ ಕೇಳುವುದು ಡೇಟಿಂಗ್ ಸಂಗತಿ ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಈಗ  ಬಾಲಿವುಡ್ ನ ಬಾದ್ಷ  ಶಾರುಖ್ ಖಾನ್ ಬಗ್ಗೆ ಚಾನೆಲ್ ಒಂದು ಸುದ್ದಿ ಹರಡಿದೆ. ಅದರ ಬಗ್ಗೆ ಹೇಳುವುದಾದ್ರೆ  ಬಿ ಟೌನ್ ಇಬ್ಬರು ಟಾಪ್ ಹೀರೋಯಿನ್ ಗಳು ಸಾಕಷ್ಟು ವರ್ಷಗಳಿಂದ ಶಾರುಖ್ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರಂತೆ. ಆ ಬಗ್ಗೆ ಸಾಕಷ್ಟು ಸುದ್ದಿಗಳು ಹರಡಿವೆ. 
ಆದರೆ ನೀವು ಊಹಿಸಿದಂತೆ ಅಲ್ಲ, ಅವರಿಬ್ಬರೂ ಬೇರೆ ಅಂದರೆ ಅನುಷ್ಕ ಶರ್ಮ ಮತ್ತು ಕತ್ರಿನ ಕೈಫ್ ಇಬ್ಬರಿಗೂ ಶಾರೂಖ್ ಮೇಲೆ ಸಾಕಷ್ಟು ಲವ್ವೇರಿಯಾ ಅಂತೆ ಹಾಗಂತ ಸುದ್ದಿ ಹರಡಿದೆ. ಶಾರುಖ್ ಖಾನ್  ಅವರ ಜೊತೆಗಿನ ಅಫೇರ್ ಈಗ ಚಾನೆಲ್ ಒಂದರಲ್ಲಿ ಸಾಕಷ್ಟು ಪ್ರಚಾರ ಸಿಕ್ಕಿದೆ.ಅಲ್ಲದೆ ಇದರ ಬಗ್ಗೆ  ಕಾರಣವನ್ನು ಸಹಿತ ಹೇಳಿದೆ. 
 
ಅನುಷ್ಕ ಶರ್ಮ ಮೊದಲ ಬಾರಿಗೆ ಯಾವಾಗ ಶಾರುಖ್ ಖಾನ್ ಅವರ ಜೊತೆ ನಟಿಸಿದಳೋ ಆಗಿನಿಂದ ಆತನ ಜೊತೆ ಅಧಿಕ ಕಾಲದ ಅಫೇರ್ ಹೊಂದಿದ್ದಾಳಂತೆ. ಅದೇರೀತಿ ಕತ್ರಿನಾ ಕೈಫ್ ಸಹಿತ ಅದೇರೀತಿಯ ಅಫೇರ್ ಹೊಂದಿದ್ದಾಳಂತೆ. ಅಂದರೆ ಆಕೆ ಸಾಕಷ್ಟು ಕಾಲದಿಂದ ಈರೀತಿಯ  ಪ್ರೀತಿ ಹೊಂದಿದ್ದಾಳಂತೆ. ಈಗ ಆ ಸಂಗತಿ ಬಾಲಿವುಡ್ ನಲ್ಲಿ ಹೆಚ್ಚು ಗದ್ದಲ ಮಾಡುತ್ತಿದೆ. ಅನುಷ್ಕ ಶರ್ಮ ಮತ್ತು ಕತ್ರಿನಾ ಕೈಫ್  ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ತೋರಿಲ್ಲ. ಗಾಸಿಪ್ ಗಳಿಗೇನು ಬಿಡ್ರಿ  ತಲೆ ಬಾಲ ಇರುತ್ತಾ ? 
 

Share this Story:

Follow Webdunia kannada