Select Your Language

Notifications

webdunia
webdunia
webdunia
webdunia

ಸಿನಿಮಾದಲ್ಲಿ ಯಶ್ ಹಾಡ್ತಾ ಇದ್ದಾರಂತೆ ಅವರ ಅಭಿಮಾನಿಗಳಿಗೆ ರಸದೌತಣ

ಸಿನಿಮಾದಲ್ಲಿ ಯಶ್ ಹಾಡ್ತಾ ಇದ್ದಾರಂತೆ ಅವರ ಅಭಿಮಾನಿಗಳಿಗೆ ರಸದೌತಣ
bangalore , ಗುರುವಾರ, 27 ನವೆಂಬರ್ 2014 (12:15 IST)
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರ ರಂಗದಲ್ಲಿ ಹೊಸ ಬಗೆಯ ಟ್ರೆಂಡ್ ಆರಂಭವಾಗಿದೆ ಎಂದೇ ಹೇಳ ಬಹುದಾಗಿದೆ. ಅದೇನೆಂದರೆ ಸ್ಟಾರ್ ನಟರು ತಮ್ಮ ಕಂಠ ಸುಧೆಯನ್ನು ಅವರ ಅಭಿಮಾನಿಗಳ ಕಿವಿಗೆ ಉಣಿಸುತ್ತಿರುವುದು. 
 
ಹೌದು, ಈಗ ಅನೇಕ ಹೀರೋಗಳು ಹಾಡುವುದರ ಮೂಲಕ ಜನರ ಗಮನ ಮತ್ತಷ್ಟು ತಮ್ಮ ಕಡೆ ಸೆಳೆಯಲು ಆರಂಭ ಮಾಡಿದ್ದಾರೆ. ಆರಂಭದಲ್ಲಿ ಡಾ. ರಾಜ್ ಕುಮಾರ್ ಮತ್ತು  ಡಾ. ವಿಷ್ಣುವರ್ಧನ್ ಅವರು ಈ ಕ್ರಿಯೆಯಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. 
 
ಅದಾದ ಬಳಿಕ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್,  ಕಿಚ್ಚ ಸುದೀಪ್, ಉಪೇಂದ್ರ ಹೀಗೆ ಎಲ್ಲರು ಸಾಧ್ಯವಾದಷ್ಟು ತಮ್ಮ ಹಾಡಿ ಅವರ ಅಭಿಮಾನಿಗಳಿಗೆ ತಲುಪಿಸಿದ್ದಾರೆ. ಅದರಲ್ಲೂ ಉಪ್ಪಿ ಮತ್ತು ಪುನೀತ್ ಪಾಲು ಹೆಚ್ಚು. ಇತ್ತೀಚಿಗೆ ಚಿತ್ರ ಒಂದರಲ್ಲಿ ನೆನಪಿರಲಿ ಪ್ರೇಂ ಸಹ ಹಾಡಿದ್ದರು. 
 
ಆದರೆ ಈಗ ಯಶ್ ಆ ಜಾಗ ತುಂಬುತ್ತಿದ್ದಾರೆ. ಅವರ ಅಭಿನಯದ ಹೊಸ ಚಿತ್ರ ಒಂದರಲ್ಲಿ ಯಶ್ ಹಾಡುತ್ತಿದ್ದಾರೆ.ಆರಂಭದಲ್ಲಿ ಈ ಹಾಡಿಗೆ ಸಂಗೀತ ನಿರ್ದೇಶಕರಾದ ವಿ ಹರಿ ಕೃಷ್ಣ ಮತ್ತು ವಿಜಯ್ ಪ್ರಕಾಶ್ ಅವರು ಧ್ವನಿ ನೀಡಿದ್ದರಂತೆ. ಆ ಬಳಿಕ ಯಶ್ ಸಹ ಹಾಡಿದರೆ ಚಂದ ಇರುತ್ತದೆ ಎಂದು ಇವರಿಗೆ ಅನ್ನಿಸಿದ ಕಾರಣ ಯಶ್ ಹಾಡಲು ವೇದಿಕೆ ಕಲ್ಪಿಸಿದ್ದಾರೆ ಸಂಗೀತ ನಿರ್ದೇಶಕರು. ಯಶ್ ಅಭಿಮಾನಿಗಳಿಗೆ  ಅವರ ಆರಾಧ್ಯ ದೈವದ ಹಾಡು ಕೇಳುವ ಸದವಕಾಶ .   
 

Share this Story:

Follow Webdunia kannada