Webdunia - Bharat's app for daily news and videos

Install App

ವಿಷ್ಣು ವರ್ಧನ್ ಅಭಿನಯದ ನಾಗರಹಾವು ರಾಮಾಚಾರಿ ಪಾತ್ರದಲ್ಲಿ ಯಶ್

Webdunia
ಗುರುವಾರ, 11 ಡಿಸೆಂಬರ್ 2014 (09:35 IST)
ಸ್ಯಾಂಡಲ್ ವುಡ್ ನಲ್ಲಿ ಪ್ರಣಯ ಜೋಡಿ ಎಂದು ಬಿಂಬಿಸಲಾಗಿರುವ ಹಾಗು ಆ ಸತ್ಯವನ್ನು ಒಪ್ಪದ ಜೋಡಿ ಯಶ್ ಮತ್ತು ರಾಧಿಕ ಪಂಡಿತ್. ಈಗ ಅವರಿಬ್ಬರ ನಟನೆಯ ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆ ಆಯಿತು. ಇದು ಅವರು ಮೂರನೆಯ ಚಿತ್ರವಾಗಿದೆ. ಈ ಮೊದಲು 2008 ರಲ್ಲಿ ಮೊಗ್ಗಿನ ಮನಸು, ಅದಾದ ಬಳಿಕ 2012 ರಲ್ಲಿ ಡ್ರಾಮ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದರು. ಈಗ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ಒಂದಾಗಿದ್ದಾರೆ. ಎಲ್ಲ ನೆನೆದಂತೆ ನಡೆದರೆ ನಿಜ ಬದುಕಲ್ಲೂ ಈ ಜೋಡಿ ಮಿಸ್ಟರ್ ಅಂಡ್ ಮಿಸಸ್ ಯಶ್ ಆಗುತ್ತಾರೆ. ಯಶ್ ರಾಮಾಚಾರಿ ಪಾತ್ರವು ಡಾ.ವಿಷ್ಣುವರ್ಧನ್ ಅವರ ಅಭಿನಯದ 1972 ರಲ್ಲಿ ಬಿಡುಗಡೆಯಾದ   ನಾಗರ ಹಾವು ಚಿತ್ರದ ಪಾತ್ರದಂತೆ ಚಿತ್ರಿಸಲಾಗಿದೆಯಂತೆ. 
ಯಶ್ ಇದಕ್ಕೆ ಪೂರಕವಾಗಿ ವಿಷ್ಣುವರ್ಧನ್ ಅವರ ಹಚ್ಚೆಯನ್ನು ಎದೆಯ ಮೇಲೆ ಹಾಕಿಸಿ ಕೊಂಡಿದ್ದಾರೆ. ಇದರಲ್ಲಿ ವಿಷ್ಣುವರ್ಧನ್ ಅವರು ರಾಮಾಚಾರಿ ಚಿತ್ರದಲ್ಲಿ ಮಾಡಿದ್ದ ರೆಬಲ್ ಹುಡುಗನ ಪಾತ್ರವನ್ನು ಮಾಡುತ್ತಿದ್ದಾರೆ.  ಯಶ್ ಡಾ.ವಿಷ್ಣುವರ್ಧನ್ ಅದರಲ್ಲೂ ರಾಮಾಚಾರಿ ಪಾತ್ರದ ದೊಡ್ಡ ಅಭಿಮಾನಿಯಂತೆ. ಆ ಅಭಿಮಾನವನ್ನು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮೂಲಕ ತೋರಿಸಿದ್ದಾರೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments