Webdunia - Bharat's app for daily news and videos

Install App

ಯಮಲೋಕದಲ್ಲಿ ಬಿಲ್‍ಗೇಟ್ಸ್ ಚಿತ್ರೀಕರಣ!

Webdunia
ಬುಧವಾರ, 1 ಫೆಬ್ರವರಿ 2017 (10:21 IST)
ಸಿ. ಶ್ರೀನಿವಾಸ್ ನಿದೇಶನದ `ಬಿಲ್‍ಗೇಟ್ಸ್’ ಚಿತ್ರಕ್ಕೀಗ ಭರದಿಂದ ಚಿತ್ರೀಕರಣ ಸಾಗುತ್ತಿದೆ. ಶಿಶಿರ ಶಾಸ್ತ್ರಿ ಹಾಗೂ ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಅತ್ಯಾಕರ್ಷಕವಾದ ಯಮಲೋಕದ ಸೆಟ್ಟಿನಲ್ಲಿ ವಿಭಿನ್ನವಾದ ಚಿತ್ರೀಕರಣ ನಡೆದಿದೆ.
 
ಈ ಚಿತ್ರದಲ್ಲಿ ಬರುವ ಮುಖ್ಯವಾದ ದೃಶ್ಯವೊಂದಕ್ಕೆ ಕೆಂಗೇರಿ ಸಮೀಪದ ಕುಂಬಳಗೋಡಿನಲ್ಲಿ ಅದ್ಧೂರಿಯಾದ ಸೆಟ್ ಹಾಕಲಾಗಿತ್ತು. ಈ ಸೆಟ್ ನೋಡಿದರೆ ಸಾಕ್ಷಾತ್ತು ಯಮಲೋಕವೇ ಭೂಲೋಕಕ್ಕಿಳಿದ ಫೀಲ್ ಬರುವಂತಿದೆಯಂತೆ. ವಿಶೇಷವೆಂದರೆ ಈ ಸೆಟ್‍ನಲ್ಲಿ ಈ ಚಿತ್ರದ ನಾಯತಕ ಶಿಶಿರ್ ಚಿತ್ರಗುಪ್ತನಾಗಿ ಹಾಗೂ ಚಿಕ್ಕಣ್ಣ ಯಮನಾಗಿ ಅಭಿನಯಿಸಿರುವ ದೃಷ್ಯಾವಳಿಗಳನ್ನು ಚಿತ್ರೀಕರಣ ಮಾಡಿಕೊಳ್ಳಲಾಗಿದೆ.
 
ಇದು ಇಡೀ ಚಿತ್ರದ ಪ್ರಧಾನ ಆಕರ್ಷಣೆ ಎಂಬುದು ಚಿತ್ರತಂಡದ ಮಾತು. ಈ ದೃಶ್ಯಗಳನ್ನು ಆರು ದಿನಗಳ ಕಾಲ ನಿರಂತರವಾಗಿ ಚಿತ್ರೀಕರಿಸಲಾಗಿದೆ. ನಿರ್ದೇಶಕ ಶ್ರೀನಿವಾಸ್ ಅವರ ಕಲ್ಪನೆಯಂತೆ ಭಾರೀ ಅದ್ದೂರಿಯಾದ ಯಮಲೋಕದ ಸೆಟ್‍ನಲ್ಲಿ ಅಷ್ಟೇ ಅದ್ದೂರಿಯಾಗಿ ಚಿತ್ರೀಕರಣ ನಡೆಸಲಾಗಿದೆ. 
 
ಅಂದಹಾಗೆ ಬಿಲ್‍ಗೇಟ್ಸ್ ರೀತಿ ಸಾಧನೆ ಮಾಡಬೇಕೆಂದು ಪುಟ್ಟ ಹಳ್ಳಿಯಿಂದ ಪಟ್ಟಣಕ್ಕೆ ಬರುವ ಹುಡುಗರ ಕಥೆ ಇದು. ಅವರಿಗೆ ಬಿಲ್‍ಗೇಟ್ಸ್ ಸ್ಫೂರ್ತಿಯಷ್ಟೆ. ಇಬ್ಬರು ನಾಯಕರು ತಮ್ಮ ಆಸೆಯನ್ನು ಪೂರೈಸಿಕೊಳ್ಳುತ್ತಾರೋ ಇಲ್ಲವೋ ಎಂಬುದು ಕಥೆಯ ಸಾರಾಂಶ. ಇದುವರೆಗೂ ಸಂಕಲನಕಾರನಾಗಿ, ಸಹಾಯಕ ಸಹ ನಿರ್ದೇಶಕನಾಗಿ ಎಂಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸಿ. ಶ್ರೀನಿವಾಸ್  ಈ ಚಿತ್ರದ ಮೂಲಕ ಸ್ವತಂತ್ರವಾಗಿ ನಿರ್ದೇಶನಕ್ಕಿಳಿದಿದ್ದಾರೆ. 
 
ಇದೊಂದು ಪಕ್ಕಾ ಕೌಟುಂಬಿಕ ಕಥಾವಸ್ತುವನ್ನು ಹಾಸ್ಯವನ್ನು ಬೆರೆಸಿ, ಮನರಂಜನಾ ಚಿತ್ರವಾಗಿ ನಿರೂಪಿಸಲಾಗುತ್ತಿದೆ ಎಂಬುದು ಅವರ ಅಭಿಪ್ರಾಯ. ಒಟ್ಟಾರೆ ಚಿತ್ರದಲ್ಲಿ ಇಂದಿನ ಯುವ ಜನಾಂಗಕ್ಕೆ ಬೇಕಾದ ಸಕಾರಾತ್ಮಕ ಸಂದೇಶವನ್ನೂ ಸಾರಲಾಗಿದೆಯಂತೆ.
 
ಸೊಸೆ, ಕುಲವಧು ಧಾರಾವಾಹಿಗಳಿಂದ ಪರಿಚಿತರಾದ ಶಿಶಿರ ಶಾಸ್ತ್ರಿ ಚಿತ್ರದ ನಾಯಕ. ಶಿಶಿರ ಜೊತೆ ಚಿಕ್ಕಣ್ಣ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೋಜಾ ಮತ್ತು ಅಕ್ಷರಾ ನಾಯಕಿಯರು. ರೋಜಾಗೆ ಇದು ನಾಲ್ಕನೇ ಚಿತ್ರವಾದರೆ ಮೇಘನಾಗೆ ಮೂರನೇ ಚಿತ್ರ. ಇನ್ನುಳಿದಂತೆ ನೋಬಿನ್ ಪಾಲ್ ಸಂಗೀತದಲ್ಲಿ ನಾಲ್ಕು ಹಾಡುಗಳಿವೆ. ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಜಯ ಮಲ್ಲಿಕಾರ್ಜುನ ಸಂಭಾಷಣೆ ಈ ಚಿತ್ರಕ್ಕಿದೆ. ಸಂಕಲನ ಮರಿಸ್ವಾಮಿ ಪಿ ಅವರದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments