Daily Horoscope
✕

‘ವಿಂಡೋಸೀಟ್’ನಲ್ಲಿ ನಿರೂಪ್ ಭಂಡಾರಿ ಮನಸೋತಿದ್ದು ಯಾರಿಗೆ…!

Webdunia
ಗುರುವಾರ, 24 ಸೆಪ್ಟಂಬರ್ 2020 (15:55 IST)
ಬೆಂಗಳೂರು: ಶೀತಲ್ ಶೆಟ್ಟಿ ನಿರ್ದೇಶನ ನಿರೂಪ್ ಭಂಡಾರಿ ಅಭಿನಯದಲ್ಲಿ ಮೂಡಿ ಬರುತ್ತಿರೋ ‘ವಿಂಡೋಸೀಟ್’ ಚಿತ್ರದ ಫಸ್ಟ್ ಲುಕ್ ಇಂದು ರಿಲೀಸ್ ಆಗಿದೆ. ಟೈಟಲ್ ಮೂಲಕ ಸೌಂಡ್ ಮಾಡಿದ್ದ ಈ ಚಿತ್ರದ ಅಪ್ಡೇಟ್ಸ್ ಬಗ್ಗೆ ಸಿನಿರಸಿಕರಲ್ಲಿ ಬಹಳ ಕುತೂಹಲವಿತ್ತು.

ಇದೀಗ ಫಸ್ಟ್ ಲುಕ್ ಮೂಲಕ ವಿಂಡೋಸೀಟ್ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದ್ದು, 54 ಸೆಕೆಂಡ್ ಒಳಗೊಂಡಿರೋ ಕ್ರಿಯೇಟಿವ್ ಫಸ್ಟ್ ಲುಕ್ ವಿಡಿಯೋ ಸಖತ್ ಕಿಕ್ ಕೊಟ್ಟಿದೆ. ರೈಲಿನಲ್ಲಿ ಕಿಟಕಿ ಪಕ್ಕ ಕುಳಿತು ಪಯಣಿಸುತ್ತಿದ್ದ ನಾಯಕ ಅಚನಾಕ್ ಆಗಿ ಕಾಣೋ ಸುಂದರ ಹುಡುಗಿಗೆ ಮನಃಸೋತು ಕಾತರದಿಂದ ಹುಡುಕಾಟ ನಡೆಸುತ್ತಿರೋ ತುಣುಕನ್ನು ಫಸ್ಟ್ ಲುಕ್ ಒಳಗೊಂಡಿದೆ. ಫಸ್ಟ್ ಲುಕ್ ಸಖತ್ ಇಂಪ್ರೆಸಿವ್ ಆಗಿದ್ದು, ವಿಜಯ್ ಪ್ರಕಾಶ್ ಇಂಪಾದ ದನಿಯಲ್ಲಿ ಹಾಡಿನ ಸಾಲುಗಳು ಫಸ್ಟ್ಲುಕ್ ಅಂದವನ್ನು ಹೆಚ್ಚಿಸಿದೆ.

ನಿರೂಪಕಿ, ನಟಿಯಾಗಿ ಸೈ ಎನಿಸಿಕೊಂಡಿರುವ ಶೀತಲ್ ಶೆಟ್ಟಿ ಮೈಕ್ ಹಿಡಿದು ಡೈರೆಕ್ಟರ್ ಕ್ಯಾಪ್ ತೊಟ್ಟಿರೋ ಮೊದಲ ಸಿನಿಮಾವಿದು. ಚಿತ್ರದ ಟೈಟಲ್ ಹಾಗೂ ರೋಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಎಂದು ಕೇಳಿದಾಗಲೇ ಎಲ್ಲರ ಗಮನ ಸೆಳೆದ ಈ ಚಿತ್ರ, ಈಗ ಒಂದೊಂದೆ ಅಪ್ಡೇಟ್ಸ್ ಮೂಲಕ ಎಲ್ಲರ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚು ಮಾಡ್ತಿದೆ.
 

ಸಿನಿಮಾ ಆಯ್ಕೆಗಳಲ್ಲಿ ಸಖತ್ ಚ್ಯುಸಿ ಆಗಿರುವ ನಿರೂಪ್ ಭಂಡಾರಿ ರೋಮ್ಯಾಂಟಿಕ್ ಥ್ರಿಲ್ಲರ್ ‘ವಿಂಡೋಸೀಟ್’ ರಥವೇರಿದ್ದು, ಸಂಜನಾ ಆನಂದ್, ಅಮೃತ ಐಯ್ಯಂಗರ್ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಶೂಟಿಂಗ್ ಕಂಪ್ಲೀಟ್ ಮಾಡಿ, ಪೋಸ್ಟ್
ಪ್ರೊಡಕ್ಷನ್ ಕೆಲಸದಲ್ಲಿ ಫುಲ್ ಬ್ಯುಸಿಯಾಗಿರೋ ಟೀಂ ವಿಂಡೋ ಸೀಟ್ ಇನ್ಮುಂದೆ ಒಂದೊಂದೇ ಝಲಕ್ ಗಳ ಮೂಲಕ ಚಿತ್ರದ ಅಪ್ಡೇಟ್ಸ್ ನೀಡಲಿದೆ.

ಅರ್ಜುನ್ ಜನ್ಯ ಸಂಗೀತ ಸಾರಥ್ಯ, ವಿಘ್ನೇಶ್ ರಾಜ್ ಕ್ಯಾಮೆರಾ ವರ್ಕ್ ವಿಂಡೋಸೀಟ್ ಚಿತ್ರಕ್ಕಿದೆ. ರವಿಶಂಕರ್, ಮಧುಸೂದನ್ ರಾವ್, ಸೂರಜ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಜಾಕ್ ಮಂಜು ನಿರ್ಮಾಣದಲ್ಲಿ ಮೂಡಿ ಬರ್ತಿರೋ ಈ ಚಿತ್ರ ಎಲ್ಲವೂ ಅಂದುಕೊಂಡಂತೆ ಆದ್ರೆ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ: ಅಪ್ಪು ಸಮಾದಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ, ಕಣ್ಣೀರಿಟ್ಟ ಅಶ್ವಿನಿ

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಮಹತ್ವದ ಬೆಳವಣಿಗೆ: ಪ್ರತ್ಯಕ್ಷ ಸಾಕ್ಷಿ ಪುನೀತ್ ಕೊಟ್ಟ ಟ್ವಿಸ್ಟ್ ಏನು

ಧನ್ವೀರ್ ಗೆ ಜೈಲಿನಿಂದ ವಾರ್ನಿಂಗ್ ಕೊಡಲು ಹೋಗಿ ಬೇಡದ ರಗಳೆ ಮೈಮೇಲೆಳೆದುಕೊಂಡರಾ ದರ್ಶನ್

ಧನ್ವೀರ್ ವಿವಾದದ ನಡುವೆ ವಿಜಯಲಕ್ಷ್ಮಿ ದರ್ಶನ್ ಮಹತ್ವದ ನಿರ್ಧಾರ

ಧನ್ವೀರರನ್ನು ಬ್ಲಾಕ್ ಮಾಡಿದ್ರಾ ವಿಜಯಲಕ್ಷ್ಮಿ ದರ್ಶನ್: ಕೌಂಟರ್ ಕೊಟ್ಟ ಧನ್ವೀರ ಗೌಡ

ಮುಂದಿನ ಸುದ್ದಿ
Show comments