Select Your Language

Notifications

webdunia
webdunia
webdunia
webdunia

ಜುಡ್ವಾ-2 ಸಿನಿಮಾದಲ್ಲಿ ವರುಣ್ ಗೆ ನಾಯಕಿಯಾಗ್ತಾರಂತೆ ಶ್ರದ್ಧಾ ಕಪೂರ್

ಜುಡ್ವಾ-2 ಸಿನಿಮಾದಲ್ಲಿ ವರುಣ್ ಗೆ ನಾಯಕಿಯಾಗ್ತಾರಂತೆ ಶ್ರದ್ಧಾ ಕಪೂರ್
, ಗುರುವಾರ, 11 ಫೆಬ್ರವರಿ 2016 (11:04 IST)
1997 ರಲ್ಲಿ ತೆರೆ ಕಂಡ ಜುಡ್ವಾ ಸಿನಿಮಾದ ಸೀಕ್ವೆಲ್  ಇದೀಗ ಬಾಲಿವುಡ್ ನಲ್ಲಿ ಸೆಟ್ಟೇರುತ್ತಿದೆ. ಈ ಸಿನಿಮಾದಲ್ಲಿ ಈ ಹಿಂದೆ ಸಲ್ಮಾನ್ ಖಾನ್ ಅವರು ಅಭಿನಯಿಸುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದ್ರೀಗ ಸಿನಿಮಾದಲ್ಲಲಿ ಸಲ್ಲು ಅಭಿನಯಿಸುತ್ತಿಲ್ಲ ಅದರ ಬದಲಿಗೆ ಆ ಸ್ಥಾನ ವರುಣ್ ಧವನ್ ಅವರಿಗೆ ಒಲಿದಿದೆ ಎನ್ನಲಾಗಿದೆ. ಜೊತೆಗೆ ಸಿನಿಮಾದ ನಾಯಕಿಯೂ ಖಚಿತವಾಗಿದೆ.

 
ಜುಡ್ವಾ-2 ಸಿನಿಮಾದಲ್ಲಿ ವರುಣ್ ಧವನ್ ಅವರಿಗೆ ನಾಯಕಿಯಾಗಿ ಶ್ರದ್ಧಾ ಕಪೂರ್ ಅವರು ಕಾಣಿಸಿಕೊಳ್ಳುತ್ತಿದ್ದಾರಂ ಅಂತಾ ಹೇಳಲಾಗ್ತಿದೆ. ಈಗಾಗಲೇ ಸಿನಿಮಾ ತಂಡ ಶ್ರದ್ಧಾ ಕಪೂರ್ ಅವರ ಜೊತೆ ಈ ಬಗ್ಗೆ ಮಾತುಕತೆ ನಡೆಸಿದೆಯಂತೆ.ಆದ್ರೆ ಶ್ರದ್ಧಾ ಕಪೂರ್ ಮಾತ್ರ ಈ ಬಗ್ಗೆ ಏನೂ ಹೇಳಿಲ್ಲ ಅಂತಾ ಹೇಳಲಾಗ್ತಿದೆ. ಒಂದು ವೇಳೆ ಶ್ರದ್ಧಾ ಈ ಬಗ್ಗೆ ಖಚಿತಪಡಿಸಿದ್ರೆ ಶೀಘ್ರವೇ ಈ ಸುದ್ದಿ ನಿಜವಾಗಲಿದೆ. ಅಲ್ಲದೇ ಶ್ರದ್ಧಾ ಕಪೂರ್ ಅವರು ವರುಣ್ ಧವನ್ ಅವರ ಜೊತೆ ಅಭಿನಯಿಸುತ್ತಿರುವ ಎರಡನೇ ಸಿನಿಮಾ ಇದಾಗಿರಲಿದೆ.
 
ಸದ್ಯ ಶ್ರದ್ಧಾ ಕಪೂರ್ ಅವರ ಕೈಯಲ್ಲಿ ಅನೇಕ ಸಿನಿಮಾಗಳಿವೆ.ಟೈಗರ್ ಶ್ರಾಫ್ ಅಭಿನಯಿಸುತ್ತರುವ ಭಾಗಿ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ನಾಯಕಿಯಾಗಿದ್ದಾರೆ. ಅಲ್ಲದೇ ರಾಕ್ ಆನ್ 2 ಸಿನಿಮಾದಲ್ಲಿಯೂ ಶ್ರದ್ಧಾ ಕಪೂರ್ ಅವರೇ ನಾಯಕಿ. ಹಾಗಾಗಿ ಈ ಸಿನಿಮಾದಿಂದ ಕೊಂಚ ವಿರಾಮ ಸಿಕ್ಕ ನಂತರ ಶ್ರದ್ಧಾ ಕಪೂರ್ ಜುದ್ವಾ-2 ಸಿನಿಮಾದಲ್ಲಿ ಅಭಿನಯಿಸುವ ಸಾಧ್ಯತೆಯಿದೆ ಅಂತಾ ಹೇಳಲಾಗ್ತಿದೆ.

Share this Story:

Follow Webdunia kannada