Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ನೋವಲ್ಲಿರೋದು ಯಾಕೆ?

ಸಲ್ಮಾನ್ ಖಾನ್ ನೋವಲ್ಲಿರೋದು ಯಾಕೆ?
, ಮಂಗಳವಾರ, 6 ಅಕ್ಟೋಬರ್ 2015 (11:11 IST)
ಭಜರಿಂಗಿ ಭಾಯಿಜಾನ್ ಸಿನಿಮಾದ ಬಳಿಕ ಸಲ್ಮಾನ್ ಖಾನ್ ಎರಡು ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಪ್ರೇಮ್ ರತನ್ ಧನ್ ಪಾಯೋ ಹಾಗೂ ಇನ್ನೊಂದು ಸುಲ್ತಾನ್. ಎರಡು ಸಿನಿಮಾಗಳಲ್ಲಿ ನಟಿಸುತ್ತಿರುವ ಸಲ್ಲು ಈಗಾಗಲೇ ಸುಲ್ತಾನ್ ಸಿನಿಮಾಗಾಗಿ ಭರ್ಜರಿ ಕಸರತ್ತಿನಲ್ಲಿ ತೊಡಗಿದ್ದಾರೆ.
ಸುಲ್ತಾನ್ ಸಿನಿಮಾದಲ್ಲಿ ಸಲ್ಲು ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅದಕ್ಕಾಗಿ ಸಲ್ಲು ತರಬೇತಿ ಪಡೆಯುತ್ತಿದ್ದಾರೆ. ಅದಕ್ಕಾಗಿ ಸಲ್ಲು ಮಾರ್ಷಲ್ ಆರ್ಟ್ ಕಲಿಯುತ್ತಿದ್ದಾರೆ. ಹಾಗಾಗಿ ಕಠಿಣ ತರಬೇತಿಯಿಂದಾಗಿ ಸಲ್ಲುಗೆ ತುಂಬಾನೇ ನೋವು ಆರಂಭವಾಗಿದೆಯಂತೆ. ಮೈಯೆಲ್ಲಾ ನೋವಿನಿಂದ ಕೂಡಿದೆ ಎಂದು ಸಲ್ಲು ಹೇಳಿದ್ದಾರೆ. ಆದ್ರೆ ಉತ್ತಮವಾದ ಫಲಿತಾಂಶ ಪಡೆಯಲು ಇದನ್ನೆಲ್ಲಾ ಮಾಡಲೇ ಬೇಕು ಅಂತಾ ಸಲ್ಮಾನ್ ಖಾನ್  ಹೇಳಿದ್ದಾರೆ.
 
ಸುಲ್ತಾನ್ ಸಿನಿಮಾವನ್ನು ಅಲಿ ಅಬ್ಬಾಸ್ ಜಾಫರ್‌  ನಿರ್ದೇಶಿಸುತ್ತಿದ್ದಾರೆ. ಇನ್ನು  ಸಲ್ಮಾನ್‌ ಖಾನ್‌ಗೆ ಮಾರ್ಷಲ್ ಆರ್ಟ್ಸ್‌ ಬಗ್ಗೆ ಟ್ರೇನಿಂಗ್ ನೀಡುವ ಜವಾಬ್ದಾರಿಯನ್ನು ಹಾಲಿವುಡ್‌ ಸ್ಟಂಟ್ ಮಾಸ್ಟರ್‌ ಲಾರ್ ನೆಲ್‌ ಸ್ಟೋವಾಲ್ ಹೊತ್ತುಕೊಂಡಿದ್ದಾರೆ. ಯಶ್‌ ರಾಜ್ ಫಿಲ್ಮ್‌ ಬ್ಯಾನರ್‌ ಅಡಿಯಲ್ಲಿ ತಯಾರಾಗುತ್ತಿರುವ ಸುಲ್ತಾನ್ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ಮಿಸುತ್ತಿದ್ದಾರೆ.

Share this Story:

Follow Webdunia kannada