Webdunia - Bharat's app for daily news and videos

Install App

ಯಾರಾಗಲಿದ್ದಾರೆ 'ಸುಲ್ತಾನ್'ನಿಗೆ ನಾಯಕಿ ?

Webdunia
ಗುರುವಾರ, 2 ಜುಲೈ 2015 (10:09 IST)
ಸಲ್ಮಾನ್ ಖಾನ್ ಅಭಿನಯಿಸುತ್ತಿರುವ  ಹಾಗೂ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿರುವ ಸುಲ್ತಾನ್ ಸಿನಿಮಾ ಸಟ್ಟೇರುವ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ಸಲ್ಮಾನ್ ಖಾನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಈಗಾಗಲೇ ಕನ್ಫರ್ಮ್ ಆಗಿದೆ. ಇನ್ನು ಮೊನ್ನೆಯಷ್ಟೇ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ಧಿಕಿ ಅಭಿನಯಿಸಲ್ಲ ಅನ್ನುವುದು ಕೂಡ ಖಚಿತವಾಗಿತ್ತು. ಆದ್ರೆ ಇದೀಗ ಸಿನಿಮಾದಲ್ಲಿ ಯಾರು ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಹೊಸ ಹೊಸ ಸುದ್ದಿಗಳು ಕೇಳಿ ಬರುತ್ತಿವೆ.
ಅಂದ್ಹಾಗೆ ಸಿನಿಮಾದ ನಿರ್ಮಾಪಕ ಆದಿತ್ಯ ಚೋಪ್ರಾ ಪರಿಣಿತಿ ಛೋಪ್ರಾರನ್ನು ಸಲ್ಲುಗೆ ನಾಯಕಿಗಾಗಿ ಮಾಡೋಕೆ ಪ್ಲಾನ್ ಮಾಡುತ್ತಿದ್ದಾರೆ. ಆದ್ರೆ ಸಲ್ಲುಮಿಯಾ ಮಾತ್ರ ತನ್ನ ಸಿನಿಮಾಕ್ಕೆ ಕೃತಿ ಸನೊನ್ ರನ್ನೇ ನಾಯಕಿ ಮಾಡಬೇಕು ಅಂತಿದ್ದಾರಂತೆ. ಕೃತಿ ಈಗಾಗಲೇ ಹೀರೋ ಪಂಥಿ ಸಿನಿಮಾದ ಮೂಲಕ ಬಾಲಿವುಡ್ ಅಂಗಳದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಇನ್ನು ಸಾಜೀದ್ ನಾಡಿಯವಾಲಾ ಕೂಡ ಕೃತಿ ಸನೂನೇ ಚಿತ್ರಕ್ಕೆ ಬೆಸ್ಟ್ ಅಂತಾ ಆಕೆಗೆ ವೋಟು ಮಾಡಿದ್ದಾರಂತೆ. ಸಲ್ಮಾನ್ ಖಾನ್ ಜೊತೆ ಕೃತಿ ನಟಿಸಿದ್ರೆ ಆಕೆ ಬೇಗನೇ ಬಾಲಿವುಡ್ ನಲ್ಲಿ ಹೆಸರು ಮಾಡಬಹುದು ಅನ್ನೋ ಲೆಕ್ಕಾಚಾರ ಸಾಜಿದ್ ಅವರದ್ದು. ಆದ್ರೆ ಇನ್ನು ಇಬ್ಬರಲ್ಲಿ ಯಾರು ಬೆಸ್ಟ್ ಅನ್ನೋದು ಫೈನಲ್ ಆಗಿಲ್ಲ.
 
ಆದ್ರೆ ಬಾಲಿವುಡ್ ಮಂದಿ ಮಾತ್ರ ಈಗಾಗಲೇ ಸಲ್ಲು ಕೂಡ ಕೃತಿನೇ ಬೆಸ್ಟ್ ಅಂತಾ ತಾವೇ ಆಯ್ಕೆ ಮಾಡಿಕೊಂಡಿದ್ದಾರೆ. ಸಾಜಿದ್ ಬೇರೆ ಕೃತಿಗೇ ಸಪೋರ್ಟ್ ಮಾಡಿದ್ದಾರೆ. ಹಾಗಾಗಿ ಕೃತಿನೇ ಸಿನಿಮಾದಲ್ಲಿ ಅಭಿನಯಿಸೋದು ಪಕ್ಕಾ ಅಂತಾ ತಮ್ಮದೇ ಲೆಕ್ಕಾಚಾರ ಹಾಕುತ್ತಿದ್ದಾರಂತೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments