Select Your Language

Notifications

webdunia
webdunia
webdunia
webdunia

ದೀಪಿಕಾ ಪಡುಕೋಣೆ-ಅನುಷ್ಕಾ ಶರ್ಮಾ ಸ್ನೇಹಕ್ಕೆ ಯಾರ ಕಣ್ಣು ಬಿತ್ತು ?

ದೀಪಿಕಾ ಪಡುಕೋಣೆ-ಅನುಷ್ಕಾ ಶರ್ಮಾ ಸ್ನೇಹಕ್ಕೆ ಯಾರ ಕಣ್ಣು ಬಿತ್ತು ?
, ಮಂಗಳವಾರ, 16 ಡಿಸೆಂಬರ್ 2014 (11:17 IST)
ನಿನ್ನೆ ಮೊನ್ನೆ ತನಕ ಒಬ್ಬರ ಮುಖ ಕಂಡ್ರೆ ಮತ್ತೊಬ್ಬರಿ ಆಗುತ್ತಿಲ್ಲ ಎನ್ನುವಂತೆ ಇದ್ದ ಕಲಾವಿದರು ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್. ಆದರೆ ಅವರ ಬಾಂಧವ್ಯ ಈಗ ಮತ್ತೆ ಒಗ್ಗೂಡಿದೆ. ಈ ಇಬ್ಬರು ತಮ್ಮ ಸ್ನೇಹವನ್ನು ಮತ್ತೆ ಖುಷಿಯಿಂದ ಅನುಭವಿಸುತ್ತಿದ್ದಾರೆ. ಆದರೆ ಇಲ್ಲಿ ನಾವು ಹೇಳುತ್ತಿರುವ ಕಥೆಯು ಬೇರೆಯದ್ದೇ ಆಗಿದೆ. ಏಕೆಂದರೆ ಈ ಕಥೆಗೆ ಕಾರಣ ಏನೆಂದು ಎನ್ನುವುದನ್ನು ಆ ಬಳಿಕ ನಾವು ಹೇಳುತ್ತೇವೆ. 
ಈಗಾಗಲೇ ವಿರಾಟ್ ಕೊಹ್ಲಿ ಜೊತೆ ಗುರುತಿಸಿಕೊಂಡಿರುವ ಅನುಷ್ಕ ಶರ್ಮ ಅನ್ನುವ ಪೀಕೆ  ಸುಂದರಿ ದೀಪಿಕ ಪಡುಕೋಣೆ ಎನ್ನುವ ನೀಳಗಾಲಿನ ಕರಾವಳಿ ಸುರಸುಂದರಿ ಜೊತೆಗೆ ಒಳ್ಳೆಯ ಸ್ನೇಹ ಹೊಂದಿದ್ದಳು. ಆದರೆ ಈಗ ಅವರಿಬ್ಬರ ನಡುವೆ ಅಸಮಾಧಾನದ  ಮತ್ತು ಕೋಪದ ಕಂದರ ಉಂಟಾಗಿದೆ ಎಂದೇ ಹೇಳ ಬಹುದಾಗಿದೆ. ಈವರೆಗೂ ಕೈ ಕೈ ಹಿಡಿದು ನಡೆಯುವಷ್ಟು ಸ್ನೇಹಿತೆಯರಾಗಿದ್ದ ಈ ಚೆಲುವೆಯರು ಈಗ ಮುಖ ನೋಡದೆ ನಡೆಯುತ್ತಿದ್ದಾರೆ. ಅದು ಎಲ್ಲರ ಗಮನಕ್ಕೆ ಬಂದಿದ್ದು ಶಾರೂಖ್ ಖಾನ್ ಅವರ ಹುಟ್ಟು ಹಬ್ಬದ ಸಮಯದಲ್ಲಿ. ಆ ಪಾರ್ಟಿಗೆ ಬಂದಿದ್ದ ಆ ಇಬ್ಬರು ಅಪರಿಚಿತರೇನೊ ಎನ್ನುವಂತೆ ಬಿಹೇವ್ ಮಾಡಿದರಂತೆ. 
 
ಇದಕ್ಕೆ ಕಾರಣವೇನು ಅಂದರೆ ಅನುಷ್ಕ ಒಂದಾನೊಂದು ಕಾಲದ ಬಾಯ್ಫ್ರೆಂಡ್ ರಣವೀರ್ ಸಿಂಗ್ ಜೊತೆ ದೀಪಿಕ ಈಗ ಡೇಟಿಂಗ್ ಮಾಡ್ತಾ ಇದ್ದಾಳಂತೆ. ಅದರಿಂದ ಸಿಟ್ಟು ಬಂದಿದೆಯಂತೆ ಅನುಷ್ಕಾಗೆ. ಅದೇರೀತಿ ಅನುಷ್ಕ ಸಹಿತ ಒಂದಾನೊಂದು ಕಾಲದ ದೀಪಿಕಾ ಪ್ರೇಮಿ ರಣಬೀರ್ ಕಪೂರ್ ಗರ್ಲ್ ಫ್ರೆಂಡ್ ಕತ್ರಿನ ಕೈಫ್ ಜೊತೆ ಫ್ರೆಂಡ್ ಆಗಿದ್ದಾಳಂತೆ. ಸೊ ಈ ಎಲ್ಲ ಕಾರಣಗಳು ಸಹಿತ ಈ ಜೋಡಿ ಮುಖ ಅತ್ತಿತ್ತ ಮಾಡಲು ಕಾರಣವಾಗಿದೆ. 

Share this Story:

Follow Webdunia kannada