Select Your Language

Notifications

webdunia
webdunia
webdunia
webdunia

ಸುಲ್ತಾನ್ ಸಿನಿಮಾಗೆ ಸಲ್ಮಾನ್ ಖಾನ್ ಗೆ ನಾಯಕಿ ಯಾರು?

ಸುಲ್ತಾನ್ ಸಿನಿಮಾಗೆ ಸಲ್ಮಾನ್ ಖಾನ್ ಗೆ ನಾಯಕಿ ಯಾರು?
, ಸೋಮವಾರ, 23 ನವೆಂಬರ್ 2015 (10:55 IST)
ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾ ಸುಲ್ತಾನ್ ಸಿನಿಮಾದ ಕುರಿತಾಗಿ ಅಭಿಮಾನಿಗಳಲ್ಲಿ ದಿನೇ ದಿನೇ ಕುತೂಹಲಗಳು ಹೆಚ್ಚಾಗುತ್ತಾನೇ ಇದೆ. ಅದಲ್ಲದೇ ಈಗಗಾಲೇ ರಿಲೀಸ್ ಆಗಿರುವ ಪೋಸ್ಟರ್ ಸಿನಿಮಾದ ಕುರಿತಾಗಿ ಹಲವು ಕ್ಯೂರಿಯಾಸಿಟಿಗಳನ್ನು ಹುಟ್ಟಿ ಹಾಕಿದೆ. ಆದ್ರೆ ಇದುವರೆಗೂ ಸಿನಿಮಾದ ನಾಯಕಿ ಯಾರು ಅನ್ನೋದು ಮಾತ್ರ ಅಂತಿಮವಾಗಿಲ್ಲ.

ಹೌದು... ಇದುವೆರೆಗೂ ಸಲ್ಲುರ ಸಲ್ಮಾನ್ ಸಿನಿಮಾದ ಬಗ್ಗೆ ಕೇಳಿದ್ದೇವೆ. ಆದ್ರೆ ಎಲ್ಲರಲ್ಲೂ ಸಿನಿಮಾದ ನಾಯಕಿ ಯಾರಿರಬಹುದು ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಆದರೆ ಇದಕ್ಕೆ ಸಿನಿಮಾ ತಂಡದಲ್ಲೂ ಉತ್ತರವಿಲ್ಲ. ಯಾಕಂದ್ರೆ ಸಿನಿಮಾದ ನಾಯಕಿ ಯಾರು ಅನ್ನೋದು ಇದುವೆಗೂ ಅಂತಿಮವಾಗಿಲ್ಲ.ಈ ಹಿಂದೆ ನಾಯಕಿ ಸ್ಥಾನಕ್ಕೆ ಕಂಗನಾ, ಪರಿಣಿತಿ ಛೋಪ್ರಾ, ದೀಪಿಕಾ ಪಡುಕೋಣೆ ಹೆಸರು ಕೇಳಿ ಬಂದಿತ್ತು. ಆದರೆ ಯಾರು ಅನ್ನೋದು ಖಚಿತವಾಗಿಲ್ಲ.
 
ಸಿನಿಮಾದಲ್ಲಿ ಸಲ್ಮಾನ್ ಖಾನ್ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದು ಅದಕ್ಕಾಗಿ ಸಲ್ಲು ಭರ್ಜರಿ ತರಬೇತಿ ಪಡೆಯುತ್ತಿದ್ದಾರೆ. ಇನ್ನು ನಾಯಕಿಯಾಗೋರು ಕೂಡ ಕುಸ್ತಿ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕಂತೆ.ಹಾಗಾಗಿ ಯಾರು ಇದಕ್ಕೆ ಸೂಕ್ತ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಅಲ್ಲಿವರೆಗೂ ಎಲ್ಲರೂ ಕಾಯಲೇ ಬೇಕು.

Share this Story:

Follow Webdunia kannada