Select Your Language

Notifications

webdunia
webdunia
webdunia
webdunia

ಸೆಕ್ಸಿ ಭಾಮೆ ಮಲ್ಲಿಕಾಗೆ ಕಾರು ಕರುಣಿಸಿದ್ದು ಯಾರು ?

ಸೆಕ್ಸಿ ಭಾಮೆ ಮಲ್ಲಿಕಾಗೆ ಕಾರು ಕರುಣಿಸಿದ್ದು ಯಾರು ?
, ಗುರುವಾರ, 9 ಏಪ್ರಿಲ್ 2015 (09:01 IST)
ಅನೇಕ ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಸೆಕ್ಸಿ ತಾರೆ ಮಲ್ಲಿಕಾ ಶರಾವತ್. ಆಕೆ ತಾನು ಸಿನಿಮಾದಲ್ಲಿ ನಟಿಸಿದ್ದಕ್ಕಿಂತ ಇನ್ನು ಅನೇಕ ಕಾರಣಗಳಿಂದ ಜನರ ಮಾತಿಗೆ ವಿಷಯವಾಗುತ್ತಿದ್ದಾಳೆ. ಈಗ ಮತ್ತೊಮ್ಮೆ ಆಕೆ ಜನರ ಕಣ್ಣಿಗೆ ಬಿದ್ದಿದ್ದಾಳೆ. ಬಾಲಿವುಡ್ ಮಂದಿ ಹಾಗೂ ಮಾಧ್ಯಮಗಳ ಕಣ್ಣಿಗೆ ಬಿದ್ದರೆ ಆ ಸಂಗತಿ ಜಗತ್ ಜಾಹೀರ ಆಗುವುದರಲ್ಲಿ ಸಂಶಯವೇ ಇಲ್ಲ. ಆಕೆ ಈಗ ಮತ್ತೊಂದು ಕಾರಣದಿಂದ ಆಕೆಯ ಅಭಿಮಾನಿಗಳ ಗಮನ ಸೆಳೆದಿದ್ದಾಳೆ. 

ಅದ್ಯಾವ ಕಾರಣವೆಂದರೆ ಮಲ್ಲಿಕಾ ಈಗ ಒಂದು ಕಾರಿನ ಚಿತ್ರವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾಳೆ. ಅದೇ ಈಗ ದೊಡ್ಡ ಸುದ್ದಿ ಆಗಿರುವುದು. ಆದರೆ ಆಕೆ ತನ್ನ ಫೋಟೋ ಹಾಕಿಕೊಂಡರೆ ಯಾಕೆ ಅಷ್ಟೊಂದು ಗಲಾಟೆ ಎಬ್ಬಿಸಬೇಕು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುವುದು ಸಹಜ. ಆ ಫೋಟೋ ಆಕೆಯದ್ದಲ್ಲ ಬದಲಿಗೆ ಆಕೆಯ ಕಾರ್ ದ್ದಾಗಿದೆ. ಅತ್ಯಂತ ಬೆಲೆಬಾಳುವ ಲಂಬೋಗಿನಿ ಅವೆಂತದೊರ್ ಎಸ್ ವಿಯ ಚಿತ್ರ. ಅದು ಈಗ ಎಲ್ಲರ ಗಮನ ಸೆಳೆದಿದೆ.  
 
ಎಲ್ಲರೂ ಈಗ ಆಕೆಯ ಕಾರನ್ನು ಹೊಗಳುವುದಕ್ಕಿಂತ, ಈ ಕಾರನ್ನು ಯಾರು ಆಕೆಗೆ ಕಾಣಿಕೆಯಾಗಿ ನೀಡಿದ್ದು ಎನ್ನುವ ಸತ್ಯದ ಹುಡುಕಾಟದಲ್ಲಿ ಇದ್ದಾರೆ. ವಿಶೇಷ ಅಂದ್ರೆ ಈವರೆಗೂ ಅವರ್ಯಾರಿಗೂ ಸತ್ಯವನ್ನು ಕಂಡು ಹಿಡಿಯಲಿಕ್ಕೆ ಆಗಲಿಲ್ಲ. ಆ ಸತ್ಯ ನಮ್ಮ ಗಮನಕ್ಕೆ ಬಂದರೆ ನಿಮ್ಮನ್ನು ತಲುಪಲು ಎಷ್ಟು ಹೊತ್ತು ಬೇಕಾದೀತು ?

Share this Story:

Follow Webdunia kannada