Webdunia - Bharat's app for daily news and videos

Install App

ಮೈಸೂರು ಯುವ ದಸರಾದಲ್ಲಿ ಡಿ ಬಾಸ್ ಹೆಸರು ಕೂಗಿದ್ದಕ್ಕೆ ಶ್ರೀಮುರಳಿ ಏನು ಹೇಳಿದ್ರು ನೋಡಿ

Krishnaveni K
ಬುಧವಾರ, 25 ಸೆಪ್ಟಂಬರ್ 2024 (10:59 IST)
Photo Credit: Facebook
ಮೈಸೂರು: ಯುವ ದಸರಾ ವೇದಿಕೆಯಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಮಾತನಾಡುತ್ತಿರುವಾಗ ಡಿ ಬಾಸ್ ಎಂಬ ಕೂಗು ಕೇಳಿಬಂದಿದೆ. ಇದಕ್ಕೆ ಅವರ ಪ್ರತಿಕ್ರಿಯೆ ಹೇಗಿತ್ತು ಎಂದು ಇಲ್ಲಿ ನೋಡಿ.

ರೋರಿಂಗ್ ಸ್ಟಾರ್ ಶ್ರೀಮುರಳಿ ಯುವ ದಸರಾ ವೇದಿಕೆಗೆ ಬಂದಿದ್ದರು. ಅವರ ಜೊತೆಗೆ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಬೆಡಗಿ ರುಕ್ಮಿಣಿ ವಸಂತ್ ಕೂಡಾ ಇದ್ದರು. ಇಬ್ಬರೂ ನಿನ್ನೆ ಸಂಜೆ ಯುವ ದಸರಾ ವೇದಿಕೆಯಲ್ಲಿ ನೆರೆದಿದ್ದ ವೀಕ್ಷಕರನ್ನು ರಂಜಿಸಿದರು. ರೋರಿಂಗ್ ಸ್ಟಾರ್ ಶ್ರಿಮುರಳಿ ತಮ್ಮ ಮಾತಿನ ಮೂಲಕವೇ ಎಲ್ಲರ ಗಮನ ಸೆಳೆದರು.

ಶ್ರೀಮುರಳಿ ವೇದಿಕೆಯಲ್ಲಿ ಮಾತನಾಡುತ್ತಿರುವಾಗ ಪ್ರೇಕ್ಷಕರ ಗುಂಪೊಂದು ಡಿ ಬಾಸ್ ಡಿಬಾಸ್ ಎಂದು ಕೂಗುತ್ತಿತ್ತು. ಅವರ ಘೋಷಣೆ ಕೇಳಿಸಿಕೊಂಡ ಶ್ರೀಮುರಳಿ, ‘ಆಯ್ತು ಚಿನ್ನ.. ಒಳ್ಳೆಯದಾಗಲಿ ಚಿನ್ನಾ.. ಎಲ್ಲರಿಗೂ ಒಳ್ಳೆಯದಾಗುತ್ತೆ ಚಿನ್ನಾ.. ಕಾಲಾಯ ತಸ್ಮೈ ನಮಃ ಅಷ್ಟು ಮಾತ್ರ ಹೇಳ್ತೀನಿ. ಯಾರ ಬಗ್ಗೆ ಏನೂ ಹೇಳೋದು ಬೇಡ. ಅವನೊಬ್ಬ ಮೇಲೆ ಇದ್ದಾನೆ. ಎಲ್ಲಾ ನೋಡ್ಕೊಳ್ತಾನೆ, ಎಲ್ಲರಿಗೂ ಒಳ್ಳೆಯದು ಮಾಡ್ತಾನೆ. ನನಗೂ ಬಹಳ ಇಷ್ಟ, ನಿಮಗೂ ಬಹಳ ಇಷ್ಟ. ಆದಷ್ಟು ಬೇಗ ಎಲ್ಲರಿಗೂ ಒಳ್ಳೆಯದಾಗುತ್ತೆ ಅಂತ ಮಾತ್ರ ಹೇಳ್ತೀನಿ ಚಿನ್ನಾ..’ ಎಂದು ಶ್ರೀಮುರಳಿ ಹೇಳಿದರು.

ನಟ ದರ್ಶನ್ ಹೆಸರೆತ್ತದೇ ಶ್ರೀಮುರಳಿ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದಾಗ ನೆರೆದಿದ್ದ ಡಿ ಬಾಸ್ ಅಭಿಮಾನಿಗಳು ಹರ್ಷೋದ್ಗಾರ ಮಾಡಿದರು. ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಬಗ್ಗೆ ಎಲ್ಲೇ ಹೋದರೂ ಅವರ ಅಭಿಮಾನಿಗಳು ಪ್ರಸ್ತಾಪಿಸುತ್ತಲೇ ಇರುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಿನಿಮಾದಲ್ಲಿ ನೀತಿ ಪಾಠ ಹೇಳಿದ್ರೆ ಸಾಲದು ಎಂದ ರಾಕ್ ಲೈನ್ ವೆಂಕಟೇಶ್ ಬುದ್ಧಿ ಹೇಳಿದ್ರೆ ದರ್ಶನ್ ಫ್ಯಾನ್ಸ್ ಹೇಳಿದ್ದೇನು

ಭಾವ ಬಂದರೋ ಹಾಡಿಗೆ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್: ವಿಡಿಯೋ

ದರ್ಶನ್ ಸರ್ ಜೊತೆ ನಾನಿದ್ದೇನೆ ಎಂದ ಧ್ರುವ ಸರ್ಜಾ: ಕೆಡಿ ನೋಡಲಿ ಅಂತಾನಾ ಎಂದ ಡಿಬಾಸ್ ಫ್ಯಾನ್ಸ್

ಪ್ರಥಮ್ ನಡೆದುಕೊಂಡ ರೀತಿ ಸರಿಯಲ್ಲ, ನಾನು ದರ್ಶನ್ ಪರ ನಿಲ್ಲುತ್ತೇನೆ: ನಟ ಧ್ರುವ ಸರ್ಜಾ

₹1000 ಕೋಟಿ ಸಾಲ ಕೊಡುವುದಾಗಿ ₹5ಕೋಟಿ ವಂಚನೆ: ನಟ ಎಸ್‌ ಶ್ರೀನಿವಾಸನ್‌ ಅರೆಸ್ಟ್‌

ಮುಂದಿನ ಸುದ್ದಿ
Show comments