Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಹಾಗೂ ಗೌರಿ ಖಾನ್ ಸಂಬಂಧ ಎಷ್ಟು ಚೆನ್ನಾಗಿರಲು ಕಾರಣವೇನು?

ಶಾರುಖ್ ಖಾನ್ ಹಾಗೂ ಗೌರಿ ಖಾನ್ ಸಂಬಂಧ ಎಷ್ಟು ಚೆನ್ನಾಗಿರಲು ಕಾರಣವೇನು?
, ಬುಧವಾರ, 6 ಜುಲೈ 2016 (10:07 IST)
ಬಾಲಿವುಡ್‌ನಲ್ಲಿ ಸದ್ಯ ದಿನಕ್ಕೊಂದರಂತೆ ಬ್ರೇಕ್ ಅಫ್ ಸುದ್ದಿಗಳು, ವಿಚ್ಛೇದನ ಸುದ್ದಿಗಳು ಕೇಳಿ ಬರುತ್ತಲೇ ಇವೆ.ಅದರಲ್ಲೂ ತಾರಾ ದಂಪತಿಗಳು ಪರಸ್ಪರ ದೂರವಾಗೋದು ಅವರ ನಡುವಿನ ಮೈಮನಸ್ಸು ಸುದ್ದಿಯಾಗೋದು ಸಾಮಾನ್ಯವಾಗಿದೆ. ಆದ್ರೆ ಶಾರುಖ್ ಹಾಗೂ ಗೌರಿ ಖಾನ್ ಈ ವಿಚಾರದಲ್ಲಿ ಅನೇಕರಿಗೆ ಮಾದರಿ.

ಸೆಲೆಬ್ರೆಟಿ ಅಂದ್ಮೇಲೆ ಅವರ ಬಗ್ಗೆ ಆಗಾಗ್ಗೆ ಅನೇಕ ವಿಚಾರಕ್ಕೆ ಗಾಸಿಪ್ ಗಳು ಹುಟ್ಟಿಕೊಳ್ಳೋದು ಸಾಮಾನ್ಯ. ಅದರಲ್ಲೂ ದಾಂಪತ್ಯದ ಬಗ್ಗೆ ಮಾತುಗಳು ಕೇಳಿ ಬರೋದು ಸಾಮಾನ್ಯ.ಆದ್ರೆ ಶಾರುಖ್ ಖಾನ್ ಹಾಗೂಗೌರಿ ಖಾನ್ ಅವರು ಈ ವಿಚಾರದಲ್ಲಿ ತುಂಬಾನೇ ವಿಭಿನ್ನ. ಸುಮಾರು ಇಪ್ಪತ್ತು ವರ್ಷಗಳ ದಾಂಪತ್ಯದಲ್ಲಿ ಗೌರಿ ಹಾಗೂ ಶಾರುಖ್ ಖಾನ್ ನಡುವೆ ಮೈಮನಸ್ಸು ಮೂಡಿದ್ದು ಬಹಳ ಕಡಿಮೆ. 
 
ಅದು ಸಣ್ಣಪುಟ್ಟ ವಿಚಾರಕ್ಕೆ ಮಾತ್ರ.ಆದ್ರೆ ಇವರಿಬ್ಬರು ಇಷ್ಟೊಂದು ಚೆನ್ನಾಗಿರೋದಕ್ಕೆ ಕಾರಣ ಇವರಿಬ್ಬರ ನಡುವಿನ ಹೊಂದಾಣಿಕೆಯಂತೆ.
 
ಇನ್ನೊಂದು ಅಚ್ಚರಿಯ ವಿಚಾರ ಅಂದ್ರೆ ಗೌರಿ ಖಾನ್ ಅವರು ತಾನೆಂದು ಶಾರುಖ್ ಖಾನ್ ಅವರ ಪತ್ನಿಯೆಂದು ಗುರುತಿಸಿಕೊಂಡವರಲ್ಲ. ತಮ್ಮದೇ ಆದ ವೃತ್ತಿಯ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ತಮ್ಮದೇ ಆದ ಸ್ಥಾನ ಕಂಡುಕೊಂಡಿದ್ದಾರೆ. ಹೀಗಿದ್ರೂ ಒಬ್ಬ ಪತ್ನಿಯಾಗಿ ಶಾರುಖ್ ಖಾನ್ ಅವರಿಗೆ ಏನು ಮಾಡಬೇಕೋ ಅದನ್ನು ಮಾಡೋದಕ್ಕೆ ಅವರು ಯಾವತ್ತೂ ಹಿಂದೆ ಮುಂದೆ ನೋಡಿದವರಲ್ಲವಂತೆ. ಇದೇ ಅವರಿಬ್ಬರ ನಡುವೆ ಉತ್ತಮ ಬಾಂಧವ್ಯವನ್ನು ಹುಟ್ಟಿ ಹಾಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾರೂಖ್ -ಸಲ್ಲು ಸೈಕ್ಲಿಂಗ್‌‌ನಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ- ಅಮಿರ್ ಖಾನ್