Select Your Language

Notifications

webdunia
webdunia
webdunia
webdunia

ಕಾಜಲ್ ಅಗರವಾಲ್ ಟಾಲಿವುಡ್‌ಗೆ ಗುಡ್ ಬೈ ಹೇಳಲು ಕಾರಣ ಏನ್ ಗೊತ್ತೇ

ಕಾಜಲ್ ಅಗರವಾಲ್ ಟಾಲಿವುಡ್‌ಗೆ ಗುಡ್ ಬೈ ಹೇಳಲು ಕಾರಣ ಏನ್ ಗೊತ್ತೇ
, ಮಂಗಳವಾರ, 28 ಜುಲೈ 2015 (10:10 IST)
ಕಾಜಲ್ ಅಗರವಾಲ್ ಅವರು ತೆಲುಗು ಅಭಿಮಾನಿಗಳ ಮನಕ್ಕೆ ಬೇಸರ ಮಾಡಲು ಸಿದ್ಧ ಆದಂತಿದೆ. ಸ್ವಲ್ಪ ತಡೆಯಿರಿ, ಈಗ ನಾವು ಹೇಳ ಹೊರಟಿರುವ ಸಂಗತಿ ಪೂರ್ಣ ಓದಿದ ಬಳಿಕ ನೀವು ನಿರ್ಧಾರಕ್ಕೆ ಬನ್ನಿ, ಅದಕ್ಕೂ ಮುನ್ನ ಯಾವುದೇ ಬೇರೆ ರೀತಿಯ ಕಲ್ಪನೆ ಬೇಡ ದಯಮಾಡಿ! 
ಕಾಜಲ್ ಅಗರ್ ವಾಲ್ ಅನ್ನುವ ಬೊಂಬೆ ಟಾಲಿವುಡ್ ಚಿತ್ರರಂಗದ ಯಶಸ್ವಿ ನಟಿಯಾಗಿದ್ದರು. ಅವರ ಅಭಿನಯ, ಮಾದಕತೆ ರೂಪರಾಶಿ ಎಲ್ಲವೂ ಸಹಿತ ತೆಲುಗು ಮಂದಿಯನ್ನು ಸೆಳೆದಿತ್ತು. ಆದರೆ ಆಕೆ ಇದ್ದಕ್ಕಿದ್ದ ಹಾಗೆ ತಮಿಳು ಚಿತ್ರ ರಂಗದ ಕಡೆ ವಲಸೆ ಹೊರಟರು. ಅದರ ಕಾರಣ ಹುಡುಕುತ್ತಾ ಹೊರಟರೆ ಕೆಲವು ವರ್ಷಗಳ ಹಿಂದೆ ಹರಡಿದ್ದ ಸುದ್ದಿ ಎಂದರೆ ಟಾಲಿವುಡ್ ಚಿತ್ರರಂಗದಲ್ಲಿ ಆಕೆ ಪ್ರೇಮ ವೈಫಲ್ಯ ಹೊಂದಿದ ಕಾರಣ ಕಾಲಿವುಡ್ ಕಡೆ ಪಯಣ ಬೆಳೆಸಿದ್ದಾರೆ. ಅದಕ್ಕೆ ಪೂರಕವಾಗಿ ಈ ಮಗಧೀರ ಚೆಲುವೆ ಆನಂತರ ದೊರೆತ ಯಾವ ತೆಲುಗು ಚಿತ್ರದಲ್ಲಿ ಸಹಿತ ನಟಿಸಲು ಇಷ್ಟ ಪಡಲಿಲ್ಲ. ಕಡಿಮೆ ಸಂಭಾವನೆ ಸಿಕ್ಕರೂ ಸಹಿತ ತಮಿಳು ಚಿತ್ರಗಳಿಗೆ ಆದ್ಯತೆ ಕೊಡುತ್ತಿದ್ದರು. 
 
ಅದೀಗ ಹಳೆಯ ಕಥೆ, ಈಗ ಆಕೆ ಕಾಲಿವುಡ್ ಅಲ್ಲದೆ ಬಾಲಿವುಡ್ ನಲ್ಲೂ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಆಕೆಯ ಸಂಭಾವನೆ 50 ರಿಂದ 80 ಲಕ್ಷಗಳಿತ್ತು. ಆದರೆ ಈಗ ಒಂದೂವರೆ ಕೋಟಿಗಳ ತನಕ ಮುಂದು ವರೆದಿದೆ. ಆದಕಾರಣ  ಈ ಟೆಂಪರ್ ಸುಂದರಿ ಜೂನಿಯರ್ ಎನ್ಟಿಆರ್ ಅವರ ಜೊತೆ ನಟಿಸಿದ ಬಳಿಕ ಮತ್ಯಾವುದೇ ತೆಲುಗು ಚಿತ್ರದಲ್ಲೂ ನಟಿಸಿಲ್ಲ.. ಈ ಮುಖಾಂತರ ಆಕೆ ತೆಲುಗು ಚಿತ್ರರಂಗದಿಂದ ದೂರವಾಗಿದ್ದಾರೆ ಎನ್ನುವ ನೋವು ಆಕೆಯ ಅಭಿಮಾನಿಗಳಲ್ಲಿ ಕಾಡಲು ಆರಂಭವಾಗಿದೆ. ಆದರೆ ಎಕಾಎಕಿ ಒಂದೂವರೆ ಕೋಟಿಗಳಷ್ಟು ಮೊತ್ತ ನೀಡಲು ನಿರ್ಮಾಪಕರು ಮುಂದೆ ಬರ್ತಾ ಇಲ್ಲ ಎನ್ನುವುದು ಈಗ ಎಲ್ಲರಿಗು ಗೊತ್ತಾದ ಗುಟ್ಟಾಗಿದೆ! ನಿಮ್ಮ ನಿರ್ಧಾರ ಈಗ ಹೇಳಿ ಓದುಗರೇ...

Share this Story:

Follow Webdunia kannada