Select Your Language

Notifications

webdunia
webdunia
webdunia
webdunia

ದ್ವಾರಕೀಶ್ 50ನೇ ಚಿತ್ರದ ಹೆಸರು ಏನ್ ಗೊತ್ತೇ ?

ದ್ವಾರಕೀಶ್ 50ನೇ ಚಿತ್ರದ ಹೆಸರು ಏನ್ ಗೊತ್ತೇ ?
, ಮಂಗಳವಾರ, 7 ಜುಲೈ 2015 (10:51 IST)
ಪ್ರಸಿದ್ಧ ನಿರ್ಮಾಪಕ-ಕನ್ನಡಿಗರ ಕುಳ್ಳ ದ್ವಾರಕೀಶ್ ಅವರ ನಿರ್ಮಾಣದ  49 ನೇ  ಆಟಗಾರ ಕೆಲಸ ಮುಗಿಯುತ್ತಿದ್ದಂತೆ, ಸದ್ದಿಲ್ಲದೇ  50 ನೇ ಚಿತ್ರದ ಕೆಲಸಗಳು ಆರಂಭವಾಗಿದೆ. ಈ ಚಿತ್ರಕ್ಕೆ ಚೌಕ ಎನ್ನುವ ಶೀರ್ಷಿಕೆ ನಿಗದಿಯಾಗಿದೆ. ಇದು ಆಗಸ್ಟ್ ತಿಂಗಳಲ್ಲಿ ಲಾಂಚ್ ಆಗುತ್ತದೆ ಎನ್ನುವ ಸುದ್ದಿಗೆ ಈಗ ಬೆಲೆ ಸಿಕ್ಕಿದೆ. 
ಚೌಕ ಮಲ್ಟಿ ಸ್ಟಾರರ್ ಅಭಿನಯದ ಚಿತ್ರವಾಗಿದೆ. ಇದರಲ್ಲಿ ಪ್ರಜ್ವಲ್ ದೇವರಾಜ್, ಪ್ರೇಂ ಮತ್ತು ಚಿರಂಜೀವಿ ಸರ್ಜಾ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೂರು ಸ್ಟಾರ್ ನಟರು ಇದರಲ್ಲಿ ಪ್ರಮುಖ ಪಾತ್ರಧಾರಿಗಳಾಗಿದ್ದಾರಂತೆ.ಅಲ್ಲದೆ ಇದರಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನು ಬೇರೆ ಕಲಾವಿದರು ಮತ್ತು ತಾಂತ್ರಿಕ ವರ್ಗದ ಬಗ್ಗೆ ನಿರ್ಧಾರವಾಗಿಲ್ಲ, ಮುಖ್ಯವಾಗಿ ಅವರ ಹುಡುಕಾಟ ಸಾಗಿದೆ. ಹುಡುಕಾಟದ ಕೆಲಸಗಳು ಸಧ್ಯದಲ್ಲಿಯೇ ಪೂರ್ಣವಾಗುತ್ತದೆ ಎಂದು ಹೇಳಿದ್ದಾರೆ ಚಿತ್ರತಂಡದವರು.   
 
ಮತ್ತೊಂದು ಅತಿ ಮುಖ್ಯ ಸಂಗತಿ ಎಂದರೆ ನಟ-ನಿರ್ದೇಶಕ ನಂದಕಿಶೋರ್ ಅವರ ಸಹೋದರ ತರುಣ್ ಸುಧೀರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರಂತೆ.
 

Share this Story:

Follow Webdunia kannada