Select Your Language

Notifications

webdunia
webdunia
webdunia
webdunia

ಸಂಕ್ರಾತಿಗೆ ಕಮಲ್ ಅಭಿನಯದ ವಿಶ್ವರೂಪಂ 2 ರಿಲೀಸಂತೆ?

ಸಂಕ್ರಾತಿಗೆ ಕಮಲ್ ಅಭಿನಯದ ವಿಶ್ವರೂಪಂ 2 ರಿಲೀಸಂತೆ?
, ಸೋಮವಾರ, 20 ಅಕ್ಟೋಬರ್ 2014 (13:50 IST)
ಕಳೆದ ವರ್ಷ ಸಿಕ್ಕಾಪಟ್ಟೆ ಸುದ್ದಿ ಮಾಡಿದ ಚಿತ್ರ ಕಮಲ್ ಹಾಸನ್ ಅಭಿನಯದ ವಿಶ್ವರೂಪಂ. ಈ ಚಿತ್ರದ ಎರಡನೇ ಭಾಗ ಸಹಿತ ಈಗ ಬಿಡುಗಡೆಗೆ ಸಿದ್ಧ ಆಗುತ್ತಿದೆ. ಸಾಕಷ್ಟು ಸುದ್ದಿ ಮಾಡಿದ್ದ ಕಮಲ್ ಹಾಸನ್ ನಟನೆಯ ವಿಶ್ವರೂಪಂ ಚಿತ್ರದ ಮೊದಲ ಭಾಗವನ್ನು ಅಂದರೆ ವಿಶ್ವರೂಪಂನ್ನು ವಿದೇಶಿ ನೆಲದಲ್ಲಿ ಶೂಟಿಂಗ್ ಮಾಡಲಾಗಿತ್ತು. 
 
ಆದರೆ ಈಗ ಅಂದರೆ ವಿಶ್ವರೂಪಂ 2  ಚಿತ್ರವನ್ನು ಭಾರತದಲ್ಲೇ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯಕ್ರಮ ನಡೆಯುತ್ತಿದ್ದು, ಆದರೇ  ಆ ಚಿತ್ರ ಬಿಡುಗಡೆ ಆಗುವ ಬಗ್ಗೆ ಯಾವ ಸುದ್ದಿ ಗೊತ್ತಾಗಲೇ ಇಲ್ಲ .
 
ತನ್ನ ಬಹು ನಿರೀಕ್ಷಿತ ಚಿತ್ರ ವಿಶ್ವರೂಪಂ 2  ರ ಬಗ್ಗೆ ಯಾವುದೇ ಸುದ್ದಿ ಹೇಳದೆ   ರಮೇಶ್ ಅರವಿಂದ್ ಅವರ ನಿರ್ದೇಶನದ ಉತ್ತಮ ವಿಲನ್  ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡರು ಕಮಲ್.ಆ ಬಳಿಕ ದೃಶ್ಯಂ ಚಿತ್ರದ ರೀಮೇಕ್ ಆಗಿರುವ ಪಾಪನಾಸನಂ ನತ್ತ ತಮ್ಮ ಗಮನವನ್ನು ಸಂಪೂರ್ಣವಾಗಿ ನೆಟ್ಟರು. ವಿಶ್ವರೂಪಂ2 ಬಗ್ಗೆ ಕಾದಿದ್ದ ಅವರ ಅಭಿಮಾನಿಗಳಿಗೆ ಸಾಕಷ್ಟು ನಿರಾಶೆ ಆಗಿದ್ದು ಸತ್ಯ! 
 
ಆದರೆ ಈಗ ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಒಂದು ಸುದ್ದಿ ಹೊರ ಬಂದಿದೆ. ಇದನ್ನು ಸಂಕ್ರಾಂತಿ ಸಮಯದಲ್ಲಿ ಬಿಡುಗಡೆ ಮಾಡಲು ಸನ್ನಾಹ ಮಾಡುತ್ತಿದ್ದಾರೆ ಕಮಲ್ ಹಾಸನ್. ಈ ಚಿತ್ರ ತನ್ನ ಶೂಟಿಂಗ್ ಪೂರ್ತಿ ಮಾಡಿಕೊಂಡಿದ್ದು,ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸವು ಸಹಿತ ಮುಗಿದಿದೆಯಂತೆ. ಗ್ರಾಫಿಕ್ ವರ್ಕ್ ಸಹಿತ ಪೂರ್ಣವಾಗಿದ್ದು ಚಿತ್ರದ ಬಿಡುಗಡೆಗೆ ಸಿದ್ಧತೆ ಸಾಗಿದೆಯಂತೆ. 
 
ಕಮಲ್ ಹಾಸನ್ ತಮ್ಮ ಪ್ರೀತಿಯ ಚಿತ್ರ ವಿಶ್ವರೂಪಂ-2 ಕ್ಕೆಂದು ಡಿಸೆಂಬರ್ ತಿಂಗಳನ್ನು ಸಂಪೂರ್ಣವಾಗಿ ಮೀಸಲಿಡುತ್ತಾರೆ ಎನ್ನುವ ಸುದ್ದಿ ಬಂದಿದೆ. ಸೊ ವಿಶ್ವರೂಪಂ ನೋಡುವ ದಿನಗಳು  ಸಮೀಪಿಸುತ್ತಿದೆ ಎಂದಾಯ್ತು ಅವರ ಅಭಿಮಾನಿಗಳಿಗೆ.
 

Share this Story:

Follow Webdunia kannada