Select Your Language

Notifications

webdunia
webdunia
webdunia
webdunia

ವಿನಯ್ ರಾಜ್‌ಕುಮಾರ್ ಮುಂದಿನ ಚಿತ್ರ ಆರ್ ದಿ ಕಿಂಗ್

ವಿನಯ್ ರಾಜ್‌ಕುಮಾರ್ ಮುಂದಿನ ಚಿತ್ರ ಆರ್ ದಿ ಕಿಂಗ್
, ಶನಿವಾರ, 25 ಏಪ್ರಿಲ್ 2015 (09:53 IST)
ಡಾ. ರಾಜ್‌ಕುಮಾರ್ ಅವರ ಕುಟುಂಬದ ಮೂರನೇ ತಲೆಮಾರಾದ ವಿನಯ್ ರಾಜ್ ಕುಮಾರ್ ತನ್ನ ಅಜ್ಜ, ಅಪ್ಪ ಹಾಗೂ ದೊಡ್ಡಪ್ಪ-ಚಿಕ್ಕಪ್ಪರಂತೆ ಯಶಸ್ವಿ ನಾಯಕನಟರಾಗಿ ಸಿದ್ಧಾರ್ಥ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದರು.
ತಮ್ಮ ಚೊಚ್ಚಲ ಚಿತ್ರದಲ್ಲಿ ನನಗೆ ಅವಕಾಶ ನೀಡಿ ಎನ್ನುತ್ತಾ ಬಣ್ಣ ಹಚ್ಚಿ, ಅಭಿನಯವನ್ನು ತೋರಿದ ಈ ಕಲಾವಿದ ಈಗ ಕನ್ನಡಿಗರಿಗೆ ಮೆಚ್ಚಿನ ತಾರೆಯಾಗಿದ್ದಾರೆ. ಅವರ ಎರಡನೇ ಚಿತ್ರವನ್ನು ಜೋಗಿ ಖ್ಯಾತಿಯ ಪ್ರೇಂ ಅವರು ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಬಹಳ ಹಿಂದೆಯೇ ನಿಮಗೆ ನಾವು ತಿಳಿಸಿದ್ದೆವು. ಈಗ ಆ ಚಿತ್ರದ ಮುಂದುವರೆದ ಸಂಗತಿ ಹೇಳುತ್ತಿದ್ದೇವೆ. ಈ ಚಿತ್ರವನ್ನು ಸಹಿತ ಅವರ ಅಜ್ಜಿ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. 
 
ಈ ಚಿತ್ರದ ವಿಷಯವನ್ನು ಯುಗಾದಿ ಹಬ್ಬದ ಸಮಯದಲ್ಲಿ ಮಾಧ್ಯಮಗಳಿಗೆ ತಿಳಿಸಲಾಯಿತು. ಆದರೆ ಡಾ. ರಾಜ್ ಕುಮಾರ್ ಅವರ ಜಯಂತ್ಯೋತ್ಸವದ ದಿನದಂದು ಆ ಚಿತ್ರಕ್ಕೆ ಹೆಸರು ನೀಡಲಾಯಿತು.  ಅಣ್ಣಾವರ ಜನ್ಮದಿನದ ಪ್ರಯುಕ್ತ ಕಂಠೀರವ ಸ್ಟುಡಿಯೋದಲ್ಲಿ ಮಧ್ಯರಾತ್ರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಚಿತ್ರದ ಹೆಸರನ್ನು ಬಿಡುಗಡೆ ಮಾಡಿದರು. ಆರ್ ದಿ ಕಿಂಗ್ ಆ ಚಿತ್ರದ ಹೆಸರು. 
 
ಕಾರ್ಯಕ್ರಮದಲ್ಲಿ ಎಲ್ಲ ಪ್ರಸಿದ್ಧ ರಾಜ್ ಕುಮಾರ್‌ಗಳಾದ ಪುನೀತ್, ಶಿವರಾಜ್ ಕುಮಾರ್, ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ಭಾಗವಹಿಸಿದ್ದರು. ಅಲ್ಲದೆ ನಟ ಪ್ರೇಂ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹಿತ ಕಾರ್ಯಕ್ರಮದ ಭಾಗವಾಗಿದ್ದರು. 

Share this Story:

Follow Webdunia kannada