Select Your Language

Notifications

webdunia
webdunia
webdunia
webdunia

ಬಲ್ಗೇರಿಯಾದಲ್ಲಿ ನಡೆಯುತ್ತಿದೆ '10ಎಂದ್ರತುಕುಲ್ಲ' ಶೂಟಿಂಗ್

ಬಲ್ಗೇರಿಯಾದಲ್ಲಿ ನಡೆಯುತ್ತಿದೆ '10ಎಂದ್ರತುಕುಲ್ಲ' ಶೂಟಿಂಗ್
, ಶನಿವಾರ, 25 ಏಪ್ರಿಲ್ 2015 (10:03 IST)
ವಿಕ್ರಮ್ ಅಭಿನಯ ಚಿತ್ರ 10ಎಂದ್ರತುಕುಲ್ಲ. ಇದನ್ನು ವಿಜಯ್ ಮಿಲ್ಟನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕರಾಗಿರುವ ವಿಕ್ರಮ್ ಅವರ ಜೊತೆ ಸಮಂತ ನಾಯಕಿಯಾಗಿದ್ದಾಳೆ. ಈ ಚಿತ್ರದ ಅಂತಿಮ ಸುತ್ತಿನ ಚಿತ್ರೀಕರಣವನ್ನು ನೇಪಾಳದಲ್ಲಿ ಪೂರ್ಣ ಮಾಡಲು ಚಿತ್ರತಂಡ ನಿರ್ಧರಿಸಿದ್ದರು ಮೊದಲು. 
ಆದ್ರೆ ಈಗ ಬಂದಿರುವ ಸುದ್ದಿ ಏನೆಂದರೆ ಚಿತ್ರೀಕರಣದ ಲೋಕೇಶನ್ ಇನ್ನು ಸ್ವಲ್ಪ ವಿಸ್ತರಾಗೊಂಡಿದೆ. ಈ ಚಿತ್ರದ ನಿರ್ದೇಶಕ ವಿಜಯ್ ಮಿಲ್ಟನ್ ಅವರು ಇದರ ಕೊನೆಯ ಹಂತವನ್ನು ಬಲ್ಗೇರಿಯಾ ದೇಶದಲ್ಲಿ ಚಿತ್ರೀಕರಿಸಲು ನಿಶ್ಚಯಿಸಿದ್ದಾರೆ. ವಿಜಯ್ ಮತ್ತು ತಂಡ ನಟ ವಿಕ್ರಮ್ ಜೊತೆ ಬಲ್ಗೇರಿಯಾಗೆ ಹೋಗುತ್ತಿದ್ದಾರೆ.  
 
ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ ವಿಕ್ರಮ್. ಈ ನಾಯಕ ನಟ ನಟಿಸಿದ್ದ ಇತ್ತೀಚಿನ ಚಿತ್ರ ಐ ಹೇಳಿಕೊಳ್ಳುವಂತಹ ಗೆಲುವು ಪಡೆಯಲಿಲ್ಲ. ಈ ಎಲ್ಲಾ ಸಂಗತಿಗಳು ಈಗ ಅವರಿಗೆ ಗೆಲುವಿನ ಅವಶ್ಯಕತೆಯನ್ನು ಎತ್ತಿ ತೋರುತ್ತಿದೆ. ಅವರ ಈ ಆಶಯ ನನಸಾಗಲಿ ಎನ್ನುವ ಹಾರೈಕೆ ನಮ್ಮದು. 

Share this Story:

Follow Webdunia kannada