Select Your Language

Notifications

webdunia
webdunia
webdunia
webdunia

ರಜನಿಕಾಂತ್ ರೋಬೋ 2ರಲ್ಲಿ ವಿಲನ್ ಆಗಲು ವಿಕ್ರಮ್ ಹಸಿರು ನಿಶಾನೆ

ರಜನಿಕಾಂತ್ ರೋಬೋ 2ರಲ್ಲಿ ವಿಲನ್ ಆಗಲು ವಿಕ್ರಮ್  ಹಸಿರು ನಿಶಾನೆ
, ಗುರುವಾರ, 16 ಜುಲೈ 2015 (10:33 IST)
ಟಾಲಿವುಡ್ ನಲ್ಲಿ ಸಾಮಾನ್ಯನಟನಾಗಿ ತಮ್ಮ ತಾರ ಬದುಕನ್ನು ಆರಂಭ ಮಾಡಿಕೊಂಡ ನಟ ಆ ಬಳಿಕ ಕಾಲಿವುಡ್ ಗೆ ಹೋಗಿ ಅಲ್ಲಿ ತಮ್ಮ ತಾರ ಬದುಕನ್ನು ಉಜ್ವಲ ಮಾಡಿಕೊಂಡರು. ಅವರು ಮತ್ಯಾರು ಅಲ್ಲ ವಿಕ್ರಮ್. ತಮಿಳು ತಂಬಿಗಳು ಅವರನ್ನು ಚಿಯಾನ್ ಎಂದು ಸಹ ಕರೆಯುತ್ತಾರೆ. ಶಿವಪುತ್ರುಡು, ಅಪರಿಚಿತುಡು, ನಾನ್ನ ಇಂತಹ ಹೈ ಬಜೆಟ್ ಹಾಗೂ ಐ ನಂತಹ ಟೆಕ್ನಿಕಲ್  ಅಂಶಗಳಿಂದ ಕೂಡಿರುವ  ಸೂಪರ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಸೂಪರ್ ಸ್ಟಾರ್ ವಿಕ್ರಮ್ ಈಗ ಮತ್ತೊಂದು ಕೋನದ ಮೂಲಕ ಜನರ ಮುಂದೆ ಬರುತ್ತಿದ್ದಾರೆ. 
ಶಂಕರ್ ನಿರ್ದೇಶನದ ಚಿತ್ರ ರೋಬೋ 2 ರ ಕೆಲಸ ಆರಂಭವಾಗಿರುವ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹೀರೋ ಆಗಿದ್ದಾರೆ. ಅದರಲ್ಲಿ ವಿಕ್ರಮ್ ವಿಲನ್ ಪಾತ್ರಧಾರಿಯಾಗುತ್ತಿದ್ದಾರೆ. ಈ ಮುಖಾಂತರ ತಮ್ಮ ಪ್ರತಿಭೆಯ ಮತ್ತೊಂದು ಮಜಲನ್ನು ಜನರ ಮುಂದೆ ಇಡುತ್ತಿದ್ದಾರೆ ವಿಕ್ರಮ್.  
 
ಈಗ ಹೀರೋಗೆ ಇರುವಷ್ಟೇ ಪ್ರಾಮುಖ್ಯತೆ ವಿಲನ್ ಗೂ ಸಹಿತ ಇದೆ ಎನ್ನುವುದು ಒಪ್ಪತಕ್ಕ ಮಾತು. ಸೂಪರ್ ಸ್ಟಾರ್ ಗಳು ಸಹಿತ ವಿಲನ್ ಗಳಾಗಿ ಜನರ ಮುಂದೆ ಬರುತ್ತಿದ್ದಾರೆ ಈಗ ವಿಕ್ರಮ್ ಆ ಚಾನ್ಸ್ ತೆಗೆದುಕೊಂಡಿದ್ದಾರೆ.  ವಿಲನ್  ಪಾತ್ರಕ್ಕಿರುವ ಮಹತ್ವವನ್ನು, ಪಾತ್ರದ ಗಟ್ಟಿತನದ ಬಗ್ಗೆ ಶಂಕರ್ ಅವರು ಹೇಳಿದ ಕಾರಣ ವಿಕ್ರಮ್ ಅವರ ಕಡೆಯಿಂದ ಹಸಿರು ನಿಶಾನೆ ಸಿಕ್ಕಿದೆ ಎನ್ನುವುದು ಕಾಲಿವುಡ್ ಪಟ್ಟಣವಾಸಿಗಳು ತಿಳಿಸಿದ ಮಾಹಿತಿಯಾಗಿದೆ. ಹೀರೋ ವಿಕ್ರಮ್ ಈಗ ಅವರ ಅಭಿಮಾನಿಗಳ ಮುಂದೆ ವಿಲನ್ ಆಗಿ ಬರುತ್ತಿದ್ದಾರೆ. 

Share this Story:

Follow Webdunia kannada